ಮುದ್ದೆಬಿಹಾಲ್

ಸಾರ್ವಜನಿಕ ಕುಂದು ಕೊರತೆ ಆಲಿಸಿದ ಶಾಸಕ ಸಿ ಎಸ್ ನಾಡಗೌಡ

ಸಾರ್ವಜನಿಕ ಕುಂದು ಕೊರತೆ ಆಲಿಸಿದ ಶಾಸಕ ಸಿ ಎಸ್ ನಾಡಗೌಡ

ಮುದ್ದೇಬಿಹಾಳ 24: ಸಿ ಎಸ್ ನಾಡಗೌಡ ಅಪ್ಪಾಜಿ ಶಾಸಕರು ಮುದ್ದೇಬಿಹಾಳ ಮತಕ್ಷೇತ್ರ ಇವರು ವಾರ್ಡ್‌ ನಂಬರ 13 ಅಂಬೇಡ್ಕರ ನಗರದಲ್ಲಿ ಸಾರ್ವಜನಿಕ ಕುಂದು ಕೊರತೆ ಮತ್ತು ವಾರ್ಡ್‌ ಸಮಸ್ಯೆ ಕುರಿತು ಜನರ ಜೊತೆ ಸಮಾಲೋಚನೆ ನಡೆಸಿದರು.ಈ ಸಮಯದಲ್ಲಿ ಅಲ್ಲಿನ ಸಾರ್ವಜನಿಕರ ಹಾಗೂ ಯುವಕರು ತಮ್ಮಲ್ಲಿರುವ ವಾರ್ಡ್‌ ಸಮಸ್ಯೆ ಮತ್ತು ಸಾರ್ವಜನಿಕ ಕುಂದು ಕೊರತೆ ಬಗ್ಗೆ ಮಾನ್ಯ ಶಾಸಕರ ಗಮನಕ್ಕೆ ತಂದವರು ಶಾಸಕರು ಆದಷ್ಟು ಬೇಗ ತಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಆಶ್ವಾಸನೆ ಕೊಟ್ಟರು.ಈ ಸಮಯದಲ್ಲಿ ವಾರ್ಡನ ಯುವಕರಾದ ಚಿದಾನಂದ ಕಟ್ಟಿಮನಿ, ಶಂಕರ ಪಡಸಾಲೆ ಪರಶುರಾಮ ನಾಲತವಾಡ, ಕಾಶಿನಾಥ್ ವಜ್ಜಲ್, ಸಿದ್ದಾರ್ಥ್‌ ಕಟ್ಟಿಮನಿ, ಬಸವರಾಜ ಬಿಸಿನಾಳ, ರಾಜು ಚಿತ್ತಾಪುರ, ಸುಭಾಷ್ ಚಂದ್ರ ಚಮಲಾಪುರ, ಆಕಾಶ್ ಕಟ್ಟಿಮನಿ, ರಾಘವೇಂದ್ರ ಕೊಳ್ಳಿ, ಶಂಕರ್ ಡೋನೂರ , ಉದಯಕುಮಾರ್ ಕಟ್ಟಿಮನಿ, ಹಾಗೂ ಹಲವಾರು ಸಾರ್ವಜನಿಕರ ಹಾಗೂ ಮಹಿಳೆಯರು ತಮ್ಮ ಕುಂದು ಕೊರತೆ ಹವಾಲುಗಳನ್ನು ಶಾಸಕರು ಗಮನಕ್ಕೆ ತಂದರು 


ಸುದ್ದಿ ಓದಿ