ಲೋಕದರ್ಶನ ವರದಿ
ಕೊಪ್ಪಳ 18: ಜಿಲ್ಲೆಯ ಕುಕನೂರ ನೂತನ ತಾಲೂಕಿಗೆ ಹೊಸ ನ್ಯಾಯಾಲಯ ಸ್ಥಾಪನೆ ಮಾಡವ ಕುರಿತು ಕೊಪ್ಪಳ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂತರ್ಿಗಳಾದ ಪಿ.ಜಿ.ಎಂ. ಪಾಟೀಲ ಉಚ್ಛ ನ್ಯಾಯಾಲಯದ ನ್ಯಾಯಮೂತರ್ಿಗಳು ಕಲಬುರ್ಗಿ ರವರನ್ನು ದಿ: ಮಾ.14 ರಂದು ಬೇಟಿಮಾಡಿ ನ್ಯಾಯವಾದಿಗಳು ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ನ್ಯಾಯಮೂತರ್ಿಗಳು ಆದಷ್ಟು ಬೇಗನೆ ಕುಕನೂರ ತಾಲೂಕಿಗೆ ಹೊಸ ನ್ಯಾಯಾಲಯ ಸ್ಥಾಪಿಸಲು ಅಗತ್ಯಕ್ಕೆ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.
ಕುಕನೂರ ತಾಲೂಕಿಗೆ ಹೊಸ ನ್ಯಾಯಾಲಯ ಆಗುವುದರಿಂದ ಪ್ರಕರಣಗಳು ಶೀಘ್ರ ನ್ಯಾಯ ದೊರಕಿ ಜೊತೆಗೆ ಬಡ ಮತ್ತು ರೈತರಿಗೆ ಖಚರ್ು ವೆಚ್ಚಕ್ಕೆ ಅನೂಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕುಕನೂರ ತಾಲೂಕಿನ ನ್ಯಾಯವಾದಿಗಳು ಮಾಡುತ್ತಿರುವ ಕಾರ್ಯವು ಶ್ಲಾಘನೀಯವಾದದ್ದು ಆದಷ್ಟು ಬೇಗನೆ ನ್ಯಾಯಾಲಯ ಪ್ರಾರಂಭವಾಗಿ ತಾಲೂಕಿನ ಜನರಿಗೆ ಅದರ ಸದುಪಯೋಗವಾಗಲಿ ಎಂದರು.
ನಿಯೋಗದಲ್ಲಿ ನ್ಯಾಯವಾದಿಗಳ ಸಮಿತಿಯ ಕಾರ್ಯದಶರ್ಿಯಾದ ಬಸವರಾಜ ಎಂ.ಜಂಗಲಿ, ಅಧ್ಯಕ್ಷರಾದ ರಾಜಶೇಖರ ಹಳ್ಳಿ , ಹಿರಿಯ ವಕೀಲರಾದ ವೆಂಕಟೇಶ ಮಾಲಗಿತ್ತಿ, ಎಸ್.ಸಿ.ಗದಗ, ವಿ.ಜಿ.ಕಟ್ಟಿಮನಿ, ಮಲ್ಲಿಕಾಜರ್ುನ ಉಜಮ್ಮನವರು, ಡಿ.ಲಂಕೇಶ್ , ಸಹ ಕಾರ್ಯದಶರ್ಿ ಜಿ.ಕೆ.ಲಾಲಗೊಂಡರ, ಖಜಾಂಚಿ ಅಡಿವೆಪ್ಪ ಬೋರಣ್ಣವರ್ , ಶಿವಯೋಗಿ ಹಿರೇಮಠ, ಸಂಗಮೇಶ, ರಮೇಶ್ ಗಜಕೋಶ ಸೇರಿದಂತೆ ಇತರ ವಕೀಲರು ಇದ್ದರು.