ಕನ್ನಡ ಜಾನಪದ ಪರಿಷತ್ ಲಾಂಛನ ಬಿಡುಗಡೆ
Kannada Folk Parishad logo release
ಇಂಡಿ 07: ತಾಲ್ಲೂಕಿನ ಸುಕ್ಷೇತ್ರ ಬಂಥನಾಳದಲ್ಲಿ ಇಂದು ಬೆಳಗ್ಗೆ 10.30 ಘಂಟೆಗೆ ಕನ್ನಡ ಜಾನಪದ ಪರಿಷತ್ ಇಂಡಿ ತಾಲ್ಲೂಕಿನ ಎರಡನೆ ಜಾನಪದ ಸಮ್ಮೇಳನ ಲಾಂಛನ ಬಿಡುಗಡೆ ಸಮಾರಂಭ ಕಾರ್ಯಕ್ರಮ ಜರುಗಿತು.ಈ ಸಮಾರಂಭದಲ್ಲಿ ಡಾ. ವೃಷಭಲಿಂಗ ಶಿವಯೋಗಿಗಳು ಫೆಬ್ರವರಿ 17ರಂದು ನಡೆಯಲಿರುವ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಕಾರ್ಯಕ್ರಮ ನಾಡಿನ ಎಲ್ಲ ಜನಪದ ಕಲಾವಿದರೂ ಒಡಗೂಡಿ ಒಂದಾಗಿ ಚಂದಾಗಿ ಕಾರ್ಯಕ್ರಮ ನಡೆಸುವುದರ ಜೊತೆಗೆ ಸಮ್ಮೇಳನದ ಸರ್ವಾಧ್ಯಕ್ಷರಾದ ಚಿದಾನಂದ ವಿ ಗೌಡಗಾ ವಿ ಅಪ್ಪಟ ಜಾನಪದ ಕಲಾವಿದರನ್ನು ಗುರುತಿಸಿದ್ದು ಹೆಮ್ಮೆಯ ವಿಷಯ ಎಂದರು.
ಹಾಗೆಯೇ ಅಂದು ಸಂಗೊಳ್ಳಿ ರಾಯಣ್ಣ ಸರ್ಕಲ್ ದಿಂದ ಮಠದ ವೇದಿಕೆ ವರೆಗೆ ಸ್ಥಬ್ದಚಿತ್ರಗಳು ಜೊತೆಗೆ 35 ಕಲಾತಂಡಗಳ ಜೊತೆಗೆ ಆದ್ದರಿಯಾದ ಮೆರವಣಿಗೆ ಹಾಗೂ ಗೊಡ್ ಗೋಷ್ಠಿಗಳು ಮಹಿಳಾ ಗೋಷ್ಠಿ ವಿವಿಧ ಜಾನಪದ ಸಾಧಕರ ಸನ್ಮಾನ ಅನೇಕ ಕಲಾತಂಡಗಳ ಪ್ರದರ್ಶನ ನಡೆಯುವದರಿಂದ ಊರಿನ ಜನ ಸಹಾಕಾರ ನೀಡುವುದರ ಜೊತೆಗೆ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾತನಾಡಿದರೂ ತಾಲೂಕಾ ಜಾನಪದ ಪರಿಷತ್ ಅಧ್ಯಕ್ಷ ಪಂಡಿತ ಅವಜಿ ಕಾರ್ಯದರ್ಶಿ ಜಟ್ಟೆಪ್ಪ ಮಾದರ ಸಂಘಟನಾ ಕಾರ್ಯದರ್ಶಿ ಸರದಾರ ಮುಲ್ಲಾ ಊರಿನ ಅನೇಕ ಜನ ಭಾಗವಹಿಸಿದ್ದರೂ ನಂತರ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಯಿತ ಕಾರ್ಯದರ್ಶಿ ಜಟ್ಟಪ್ಪ ಸರ್ ನಿರೂಪಿಸಿದರು. ಸರದಾರ ಮುಲ್ಲಾ ಸ್ವಾಗತಿಸಿ ವಂದಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 