ಹಾವೇರಿ ೧೪: ಜೀವನಜ್ಯೋತಿ ಜಾನಪದ ಸಿರಿನಾಡು ನೃತ್ಯ ಕಲಾ ಸಂಸ್ಥೆಯ ಮೂಲಕ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಗಳ ಉಳಿವಿಗಾಗಿ ಪ್ರತಿ ಶಾಲೆ ಹಳ್ಳಿಗಳಿಗೆ ಸಂಚರಿಸಿ ಉಚಿತವಾಗಿ ಸೇವೆ ಮಾಡುತ್ತಿರುವ ಕಲಾಪ್ರೇಮಿ ಪರಮೇಶ್ವರ ಕಳಸಣ್ಣನವರ ಅವರಿಗೆ ನಗರದ ಬಣ್ಣದಮಠದಿಂದ ನೀಡುವ ಸಾಧಕ ಸಿರಿ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಧಾಮರ್ಿಕ ಪರಿಷತ್ತಿನ ನಾಮ ನಿದರ್ೇಶಿತ ಸದಸ್ಯರಾಗಿರುವ ಪರಮೇಶ್ವರ ಕಳಸಣ್ಣನವರ ಕಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವಿರತ ಸೇವೆ ಗುರುತಿಸಿ ಜಿಲ್ಲೆ ಹಾಗೂ ರಾಜ್ಯದ ಸಂಸ್ಥೆಗಳು ಗೌರವಿಸಿವೆ.
ಹಳ್ಳಿಗಳಲ್ಲಿ ಯಾವುದೇ ಧಾಮರ್ಿಕ ಕಾರ್ಯಕ್ರಮಗಳಿದ್ದರೆ ತಮ್ಮದೆಯಾದ ಸೇವೆ ಸಲ್ಲಿಸುವ ಇವರು ಸಂಗೀತದಲ್ಲಿಯೂ ಪರಿಣಿತಿ ಪಡೆದಿದ್ದಾರೆ.ಸದಾ ತಮ್ಮೊಂದಿಗೆ ಕಲೆ, ಸಾಹಿತ್ಯ ಹಾಗೂ ಸಂಗೀತದ ಸಂಚಾರಿಯಾಗಿಯೇ ಕೆಲಸ ಮಾಡುತ್ತಿದ್ದಾರೆ.