ಕಾಲುವೆ ಕೊನೆಯಂಚಿಗೆ ನೀರು ತಲುಪಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ವಿಫಲ

 ಕಾಲುವೆ ಕೊನೆಯಂಚಿಗೆ ನೀರು ತಲುಪಿಸಲು ಕೆಬಿಜೆಎನ್‌ಎಲ್ ಅಧಿಕಾರಿಗಳು ವಿಫಲ KBJNL officials fail to deliver water to the tail-end of the canal

ಲೋಕದರ್ಶನ ವರದಿ 

ವಿಜಯಪುರ 07: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಕಾರಣ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಪ್ರಾದೇಶಿಕ ಆಯುಕ್ತರು ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ಭರ್ತಿ ಮಾಡಲು ಕಾಲುವೆಗಳಿಗೆ ನೀರು ಹರಿಸಬೇಕೆಂದು ಆದೇಶ ನೀಡಿದ್ದರು ಅವರ ಆದೇಶದಂತೆ ಕಾಲುವೆಗಳಿಗೆ ನೀರು ಹರಿಸಲಾಗಿದ್ದರೂ ಕೂಡ ಇನ್ನೂ ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಕೆರೆಗಳಿಗೆ ನೀರು ತಲುಪಿಲ್ಲ ಪ್ರತಿ ಬಾರಿಯೂ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಕೊನೆ ಅಂಚಿಗೆ ನೀರು ತಲುಪಿದ ಉದಾಹರಣೆ ಇಲ್ಲ ಇದು ಕೆಬಿಜೆಎನ್‌ಎಲ್ ಅಧಿಕಾರಿಗಳ ವೈಫಲ್ಯತೆ ಎತ್ತಿ ತೋರಿಸುತ್ತಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆರೋಪಿಸಿದ್ದಾರೆ. 

ಕೆಲವೊಂದು ಭಾಗದಲ್ಲಿ ಕೆರೆಗಳಿಗೆ ಸರಿಯಾಗಿ ನೀರು ಹರಿಸದೆ ಇದ್ದರೂ ಸಂಪೂರ್ಣ ನೀರು ಹರಿಸಿದ್ದೇವೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡುತ್ತಾರೆ. ಅಲ್ಲದೆ ರೈತರಿಗೂ ಕೂಡ ದಾರಿ ತಪ್ಪಿಸುತ್ತಿದ್ದಾರೆ. ಒಂದು ವೇಳೆ ಎಲ್ಲಾ ಕಾಲುಗಳಿಗೆ ಕೊನೆ ಅಂಚಿಗೆ ನೀರು ತಲುಪಿಸಿ ಸಮರ​‍್ಕವಾಗಿ ರೈತರಿಗೆ ನೀರು ಕೊಟ್ಟಿದ್ದರೆ ಮತ್ತು ಎಲ್ಲ ಕೆರೆಗಳನ್ನು ಸಂಪೂರ್ಣ ಭರ್ತಿ ಮಾಡಿದ್ದರೆ ರೈತರು ಅನಾವಶ್ಯಕವಾಗಿ ನೀರನ್ನು ಕೇಳುತ್ತಿರಲಿಲ್ಲ. ಕೃಷಿಗಾಗಿ ರೈತರು ನೀರು ಕೇಳಿದರೇ ಸರ್ಕಾರ ಹಂತಗಳ ಹೇಳುತ್ತಿದೆ. ಅವಳಿ ಜಿಲ್ಲೆಗೆ ಕೃಷಿ ನೀಡು ಕೊಡೆ ಪ್ರತಿನಿತ್ಯ 1 ಲಕ್ಷ 50,000 ಕ್ಯೂಸೆಕ್ ನಷ್ಟು ನೀರನ್ನು ಆಲಮಟ್ಟಿ ಜಲಾಶಯದಿಂದ ನದಿ ಪಾತ್ರದ ಮೂಲಕ ನಾರಾಯಣಪುರ ಜಲಾಶಯಕ್ಕೆ ನೀರು ಹರಿ ಬಿಟ್ಟಿದ್ದಾರೆ. ಅಲ್ಲಿಂದ ತೆಲಂಗಾಣ ಹಾಗೂ ಆಂಧ್ರಕ್ಕೆ ಅಪಾರ ಪ್ರಮಾಣದ ನೀರು ಹರಿಸಿದ್ದಾರೆ.

ಅದೇ ನೀರನ್ನು ನಮ್ಮ ಅವಳಿ ಜಿಲ್ಲೆಯ ರೈತರಿಗೆ ನೀರು ಕೊಟ್ಟಿದ್ದರೆ. ನಮ್ಮ ರೈತರು ನೆಮ್ಮದಿಯಿಂದ ಇರುತ್ತಿದ್ದರು ಅದನ್ನು ಬಿಟ್ಟು ಅವಳಿ ಜಿಲ್ಲೆಗಳ ರೈತರನ್ನು ಬಲಿಕೊಟ್ಟು ಬೇರೆ ರಾಜ್ಯದ ರೈತರ ಹಿತ ಕಾಪಾಡಲು ಹೊರಟಿದ್ದಾರೆ. ಇದರಲ್ಲಿ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಸ್ವಲ್ಪವೂ ಕೂಡ ರೈತರ ಬಗ್ಗೆ ಕಳಕಳಿ ತೋರಿಸಲಿಲ್ಲ. ನಮ್ಮ ಜಿಲ್ಲೆಯ ಜನ ಪ್ರತಿನಿಧಿಗಳಿಗೆ ನಮ್ಮ ರೈತರ ಹಿತ ಬೇಕಾಗಿಲ್ಲ. ಅಧಿಕಾರಕ್ಕಾಗಿ ಮತ ಬೇಕು. ನಮ್ಮ ರೈತರ ಹಿತ ಬೇಡವಾಗಿದೆ. ಇದೇ ರೀತಿ ಅವಳಿ ಜಿಲ್ಲೆಯ ರೈತರನ್ನು ಕಡೆಗಣಿಸಿದ್ದೇ ಆದಲ್ಲಿ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ. ಈಗಲಾದರು ಜಿಲ್ಲೆಯ ಜನಪ್ರತಿನಿಧಿಗಳು ನಿದ್ರಾವಸ್ಥೆಯಿಂದ ಎಚ್ಚೆತ್ತುಕೊಂಡು ಜಿಲ್ಲೆಯ ಎಲ್ಲ ಕಾಲುವೆಗಳಿಗೆ ಸಮರ​‍್ಕವಾಗಿ ನೀರು ಹರಿಸಿ ಎಲ್ಲ ಕೆರೆಗಳನ್ನು ಸಂಪೂರ್ಣ ಭರ್ತಿಮಾಡಬೇಕೆಂದು ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.