ಗೊಳಸಂಗಿ ದರ್ಗಾಕ್ಕೆ ಭೇಟಿ ನೀಡಿದ ಜೆಡಿಎಸ್ ಗಣ್ಯರು: ಬಮ್ಮನಹಳ್ಳಿ ಬಾಬು

ನಿಡಗುಂದಿ ತಾಲೂಕಿನ ಗೊಳಸಂಗಿಯ ಹಜರತ್ ಶೇಖ ಅಬ್ದುಲರಹೀಮ್ ಖಾದ್ರಿಯವರ ದಗರ್ಾಕ್ಕೆ ಜೆಡಿಎಸ್ ಧುರೀಣ, ಅಟಿಕಾ ಗೋಲ್ಡ್ ಕಂಪನ

ನಿಡಗುಂದಿ:  ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತದ ಸರ್ಕಾರ  ಸಿಗಬೇಕೆಂಬುದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ನಾನೂ ಕೂಡ ಜೆಡಿಎಸ್ ಜತೆಗೆ ಹೆಜ್ಜೆ ಹಾಕುತ್ತಿರುವುದಾಗಿ ಮುಖಂಡ, ಅಟಿಕಾ ಗೋಲ್ಡ್ ಕಂಪನಿಯ ಮಾಲಿಕ ಬಮ್ಮನಹಳ್ಳಿ ಬಾಬು ಹೇಳಿದರು. 

     ತಾಲ್ಲೂಕಿನ ಗೊಳಸಂಗಿಯ ಹಜರತ್ ಶೇಖ ಅಬ್ದುಲ್ ರಹೀಮಖಾದ್ರಿ ದರ್ಗಾಗೆ ಭಾನುವಾರ ರಾತ್ರಿ ಭೇಟಿ ನೀಡಿ ಅವರು ಮಾತನಾಡಿದರು. 

     ರಾಜ್ಯಾದ್ಯಂತ ಈಗ ಜನ ಬಿಜೆಪಿ-ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಬೇಸತ್ತಿದ್ದಾರೆ. ಪ್ರಾದೇಶಿಕ ಪಕ್ಷದತ್ತ ಒಲವು ತೋರುತ್ತಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲುವತ್ತ ನಮ್ಮ ಗಮನ ಕೇಂದ್ರೀಕೃತವಾಗಿದೆ. ಬಸವನ ಬಾಗೇವಾಡಿ ಕ್ಷೇತ್ರದ ಟಿಕೇಟ್ ಈ ಬಾರಿ ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತು ವರಿಷ್ಠರು ಸೇರಿ ತೀರ್ಮಾನಿಸುತ್ತಾರೆ ಎಂದರು. 

     ಅಲ್ಪ ಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ  ದಾದಾಪೀರ್ ಶೇಖ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ 3-4 ಸ್ಥಾನ ನಮ್ಮ ಪಕ್ಷ ಗಳಿಸುವುದು ನಿಶ್ಚಿತ ಎಂದರು.  ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ತಜಮುಲ್ ಖಾದ್ರಿಸಾಹೇಬ್ ಜಾಗೀರದಾರ ಬಮ್ಮನಹಳ್ಳಿ ಬಾಬು ಅವರಿಗೆ ಶಾಲು ಹೊದಿಸಿ ಆಶೀರ್ವದಿಸಿದರು. ಪ್ರಮುಖರಾದ ಸಾಹೇಬಲಾಲ್ ಕಮತಗಿ, ಬಂದೇನವಾಜ್ ಬಿಜಾಪುರ, ಲಾಲಸಾಬ್ ಹುಣಶ್ಯಾಳ, ಮಕಬೂಲ್ ಅತಾವಾಲೆ, ಅಬೂಬಕರ್ ಬಿಜಾಪುರ, ರಿಯಾಜ್ ಹತ್ತರಕಿಹಾಳ, ಇಮ್ತಿಯಾಜ್ ಹತ್ತರಕಿಹಾಳ ಮತ್ತಿತರರು ಇದ್ದರು.