ಲೋಕದರ್ಶನ ವರದಿ
ಕಾಗವಾಡ 25: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಮಹಾವೀರ ನಗರದಲ್ಲಿಯ ಭಗವಾನ್ ಮಹಾವೀರ ಜೈನ ಮಂದಿರದ ಬೀಗ ಮುರಿದು ಅಜ್ಞಾತ ಕಳ್ಳರು ಚಿನ್ನ ಹಾಗೂ ಬೆಳ್ಳಿಯ ಮತ್ತು ದಾನ ನೀಡಿರುವ ಹಣ ಹೀಗೆ ಸುಮಾರು 2 ಲಕ್ಷ ರೂ. ಕಳ್ಳತನ ಮಾಡಿರುವ ಘಟಣೆ ಸಂಭವಿಸಿದೆ.
ರವಿವಾರ ರಾತ್ರಿ ಭಗವಾನ್ ಮಹಾವೀರ ಜೈನ ಮಂದಿರದ ಮುಖ್ಯ ದ್ವಾರದ ಕಟಾವಣೆಯಿಂದ ಬೀಗ್ ಮುರಿದು ಮಂದಿರದಲ್ಲಿಯ ಪದ್ಮಾವತಿ ದೇವಿಯ ಮೂತರ್ಿಗೆ ಆಲಂಕರಿಸಿದ 20 ಗ್ರಾಂದ ಚಿನ್ನದ ಮಂಗಳಸೂತ್ರ ಮತ್ತು ತೀರ್ಥಂಕರರಿಗೆ ನಿಮರ್ಿಸಿದ ತಲಾ ಒಂದು ಕೇಜಿ ಬೆಳ್ಳಿಯ ಭಾಂಗಾಡದ ಛತ್ರಿ ಮತ್ತು ಶ್ರಾವಕರು ದಾನವಾಗಿ ನೀಡಿರುವ ಹಣ ಎರಡು ದಾನಪೇಟಿಗಳಲ್ಲಿ ಸಂಗ್ರಹಿಸಿದ ಸುಮಾರು 30 ಸಾವಿರ ರೂ. ಹೀಗೆ 2 ಲಕ್ಷ ರೂ. ಮೌಲ್ಯದ ಅಜ್ಞಾತ ಕಳ್ಳರು ದರೋಡೆ ಮಾಡಿದ್ದಾರೆ.
ಈ ಬಗ್ಗೆ ಆರ್ಚಕ ಸುನೀಲ ಉಪಾಧ್ಯೆ ಇವರು ಶ್ರಾವಕರಿಗೆ ಮಾಹಿತಿ ನೀಡಿದಾಗ ಮಂದಿರದ ಸಮೀತಿ ಅಧ್ಯಕ್ಷ ದೇವಗೌಡಾ ಪಾಟೀಲ ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪಿಎಸ್ಐ ಹನುಮಂತ ಶಿರಹಟ್ಟಿ ಮತ್ತು ಸಿಬ್ಬಂದಿದವರು ಘಟಣಾ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಕೂಡಲೆ ಬೆಳಗಾವಿಯ ಶ್ವಾನದಳ ಮತ್ತು ಬೆರಳೆಚ್ಚು ತಜ್ಞರಿಗೆ ಮಾಹಿತಿ ನೀಡಿ ಕರೆ ಮಾಡಿದರು. ಕೂಡಲೆ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಶ್ವಾನ ಮಂದಿರದಿಂದ ನೆರೆಯ ಓರ್ವ ತೋಟದಲ್ಲಿ ಹೋಗಿ ಮರಳಿ ಬಂತು. ಶ್ರಾವಕರು ಈ ಘಟಣೆಯಿಂದ ನೊಂದಿದ್ದಾರೆ.
ಉಗಾರ ಗ್ರಾಮದ ಮುಖಂಡರು, ಪದ್ಮಾವತಿ ಮಂದಿರದ ಮುಖ್ಯಸ್ಥರಾದ ಶೀತಲ ಪಾಟೀಲ ಇವರು ಆರೋಪಿಸಿ, ಇದೇ ಉಗಾರದ ಜೈನ ಮಂದಿರದಲ್ಲಿ ಎರಡು ಸಲಹ ಶೇಡಬಾಳದ ಕಲ್ಲಾಳ ಜೈನ ಮಂದಿರದಲ್ಲಿ ಮತ್ತು ಪರಿಸರದ ಜೈನ ಮಂದಿರಗಳಲ್ಲಿ ಕಳ್ಳತನ ಪದೇ ಪದೇ ನಡೆದಿದೆ. ಇದರಲ್ಲಿ ಮಂದಿರದಲ್ಲಿರುವ ಚಿನ್ನ, ಬೆಳ್ಳಿ ಕಳ್ಳತನಮಾಡಿಕೊಂಡು ಹೋಗಿದ್ದಾರೆ. ಈ ವರೆಗೆ ಈ ಪ್ರಕರಣಗಳು ತನಿಖೆ ಮಾಡಲು ಪೊಲೀಸ್ ಇಲಾಖೆ ಅಪಯಶವಾಗಿದೆ. ದೇವರ ಮಂದಿರಗಳಲ್ಲಿ ಕಳ್ಳತನ ಮಾಡುವ ಘಟಣೆಗಳು ಗಂಭೀರವಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟವಾಗಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕೇಳಿಕೊಂಡಿದ್ದಾರೆ.
ಅವರೊಂದಿಗೆ ಘಟಣೆ ತನಿಖೆವಾಗಲೆಬೇಕೆಂದು ರಾಹುಲ ಶಹಾ, ಅಪ್ಪಾಸಾಹೇಬ ಚೌಗುಲೆ, ವಸಂತ ಖೋತ, ಪೋಪಟ ಲಟ್ಟೆ, ರಾವಸಾಹೇಬ ಗಿಡಸಕನ್ನವರ, ತಾತ್ಯಾಸಾಹೇಬ ಗಿಡಸಕನ್ನವರ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರಕಾಶ ಸಾಜನೆ, ಮುಂತಾದ ಅನೇಕ ಶ್ರಾವಕರು ತಮ್ಮ ಅಭಿಪ್ರಾಯ ಹೇಳಿದರು.