ಸ್ಪಧರ್ಾತ್ಮಕ ಪರೀಕ್ಷೆಗಳ ಮಾಹಿತಿ ಕಾಯರ್ಾಗಾರ
ಲೋಕದರ್ಶನ ವರದಿ
ಗೋಕಾಕ 29: ವಿದ್ಯಾಥರ್ಿಗಳು ಜೀವನದಲ್ಲಿ ಉನ್ನತ ಹುದ್ದೆಗಳ ಕನಸು ಕಾಣುವುದರೊಂದಿಗೆ ಅದನ್ನು ನಿಧರ್ಿಷ್ಟ ಗುರಿಯೊಂದಿಗೆ ಪ್ರಯತ್ನಶೀಲರಾಗಿ ನನಸಾಗಿಸಿಕೊಳ್ಳುವಂತೆ ಬೆಳಗಾವಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಹೇಳಿದರು.
ಅವರು ನಗರದ ನ್ಯೂ ಇಂಗ್ಲೀಷ ಸ್ಕೂಲ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರು ಹಮ್ಮಿಕೊಂಡ ವಸತಿ ನಿಲಯದ ಪದವಿ ಹಾಗೂ ಸ್ನಾತಕೊತರ ಅಂತಿಮ ವರ್ಷದ ವಿದ್ಯಾಥರ್ಿಗಳಿಗೆ ಒಂದು ದಿನದ ಸ್ಪಧರ್ಾತ್ಮಕ ಪರೀಕ್ಷೆಗಳ ಮಾಹಿತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಖಾಲಿ ಹೊಟ್ಟೆ ನೂರು ಪಾಠಗಳನ್ನು ಕಲಿಸುತ್ತದೆ, ತುಂಬಿದ ಹೊಟ್ಟೆ ನೂರು ಆಟಗಳನ್ನು ಕಲಿಸುತ್ತದೆ.ಜ್ಷಾನದ ಹಸಿವಿನಿಂದ ಪ್ರಯತ್ನಶೀಲರಾದರೆ ಉನ್ನತ ಹುದ್ದೆ ಪಡೆಯಲು ಸಾಧ್ಯ. ಸಕರ್ಾರ ಕೆಎಎಸ್,ಐಎಎಸ್,ಐಪಿಎಸ್ ನಂತಹ ಹುದ್ದೆಗಳ ಮಾಹಿತಿ ನೀಡಿ ವಿದ್ಯಾಥರ್ಿಗಳನ್ನು ಜಾಗೃತಗೊಳಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಲು ಇಂತಹ ಕಾಯರ್ಾಗಾರವನ್ನು ಹಮ್ಮಿಕೊಳ್ಳುತ್ತಿರುವುದು. ಇದರ ಸದುಪಯೋಗದಿಂದ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ ಕೊಳ್ಳುವುದರೊಂದಿಗೆ ತಂದೆತಾಯಿಗಳ ಕನಸನ್ನು ನನಸಾಗಿಸಿಕೊಳ್ಳಿರೆಂದು ಹಾರೈಸಿದರು.
ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಾಮನಗೌಡ ಕಲ್ಲೋಳ್ಳಿ, ರಾಯಚೂರಿನ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡರ, ಧಾರವಾಡದ ಗಾಂಧಿ ಅಧ್ಯಯನ ಸಂಸ್ಥೆ ಉಪನ್ಯಾಸಕ ತಿರುಪತಿ ಪಾಟೀಲ ಈ ಕಾಯರ್ಾಗಾರದಲ್ಲಿ ಉಪನ್ಯಾಸ ನೀಡಿದರು. ಗೋಕಾಕ, ಸವದತ್ತಿ,ರಾಮದುರ್ಗ,ಬೈಲಹೊಂಗಲ ತಾಲೂಕಗಳ ವಿದ್ಯಾಥರ್ಿಗಳು ಕಾಯರ್ಾಗಾರದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಆರ್.ಕೆ.ಬಿಸಿರೊಟ್ಟಿ, ಬಿ.ಕೆ.ಜಟಗೊಂಡ, ಎಸ್.ಆರ್.ಮರಿಗೌಡರ, ಇಲಾಖೆಯ ಪದವಿ ಅಂತಿಮ ವರ್ಷದ ನಿಲಯಾಧಿಕಾರಿಗಳು ಇದ್ದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 