ಅಮೃತ ಮಹೋತ್ಸವದ ಸ್ವತಂತ್ರ ನಡಿಗೆ ಕಾರ್ಯಕ್ರಮ ಉದ್ಘಾಟನೆ

ನವಲಗುಂದ: ನವಲಗುಂದ ಬ್ಲಾಕ್ ಕಾಂಗ್ರೇಸ್ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ 75 ಕಿ.ಮೀ ಸ್ವತಂತ್ರ ನಡಿಗೆ ಮೊದಲ ಭಾಗವಾಗಿ ಇಂದು ನವಲಗುಂದ ನಗರದಲ್ಲಿ ಮಹಾ ದಾನಿಗಳಾದ ಶಿರಸಂಗಿ ಲಿಂಗರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ವತಂತ್ರ ನಡಿಗೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಕಾಂಗ್ರೇಸ್ ಪಕ್ಷದ ಕೊಡುಗೆ ಅಪಾರ, ಸಂವಿಧಾನ ಹಾಗೂ ರಾಷ್ಟ್ರ ಧ್ವಜದ ಬಗ್ಗೆ ಹೆಮ್ಮೆ ಪಡುವ ಕೆಲಸ ದಿಗ್ಗಜ ಕಾಂಗ್ರೆಸ್ ನಾಯಕರು ಮಾಡಿದ್ದಾರೆಯೇ ಹೊರತು ಬಿಜೆಪಿ ಅವರಲ್ಲ. ಆರ್ಎಸ್ಎಸ್ ನವರು ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಇಲ್ಲಿಯವರೆಗೆ ಒಪ್ಪಲಿಲ್ಲ ಹಾಗೂ ಆರ್ಎಸ್ಎಸ್ ಕೇಂದ್ರ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುತ್ತಿಲ್ಲ. ಆದರೆ ಬಿಜೆಪಿ ಅವರು ಎಲ್ಲ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುವುದಿಲ್ಲ. ದೇಶ ಉಳಿಯಬೇಕಾದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕರ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ ಎಂದು ಹೆಳಿದರು.

ಸ್ವಾತಂತ್ರಕ್ಕಾಗಿ ಹಾಗೂ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ: 15 ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರೆಲ್ಲರು 1 ಲಕ್ಷಕ್ಕಿಂತ ಹೆಚ್ಚು ರಾಷ್ಟ್ರ ಧ್ವಜಗಳನ್ನು ಹಿಡಿದು ಸ್ವತಂತ್ರ ನಡುಗೆ ಮಾಡಲು ತಾವೆಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು. ಉದ್ಘಾಟನೆ ಮಾಡಿದ ನಂತರ ನವಲಗುಂದ ನಗರದ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಯ ಮಾರ್ಗವಾಗಿ ವಿವಿಧ ಓಣಿಗಳಲ್ಲಿ ರಾಷ್ಟ್ರ ಧ್ವಜದೊಂದಿಗೆ ಸ್ವತಂತ್ರ ನಡುಗೆಯನ್ನು ಮಾಡಲಾಯಿತು.

ಹೆಸರು ಬೆಳೆಯನ್ನು ವೀಕ್ಷಿಸಿದ ಸಿದ್ದರಾಮಯ್ಯ ಅವರು:

ಹುಬ್ಬಳ್ಳಿ ತಾಲ್ಲೂಕಿನ ಕಿರೆಸೂರ ಗ್ರಾಮದ ಹತ್ತಿರ ರೈತರು ಹೆಸರು ಬೆಳೆ ಹಾಳಾಗಿದ್ದನ್ನು ವೀಕ್ಷಣೆ ಮಾಡಿ ರೈತ ಸಾಲ ಸೂಲ ಮಾಡಿ ದೊಡ್ಡ ಪ್ರಮಾಣದಲ್ಲಿ ಹೆಸರು ಬೆಳೆ ಬೆಳೆದಿದ್ದರು. ಆದರೆ ಸತತವಾಗಿ ಸುರಿದ ಮಳೆಯಿಂದ ಉತ್ತರ ಕನರ್ಾಟಕದ ಎಲ್ಲ ಜಿಲ್ಲೆಗಳಲ್ಲಿ ಶೇ. 50% ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ. ರೈತರು ಹೆಸರು ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸುವ ಸಂದರ್ಭದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ಹೆಸರು ಬೆಳೆ ನಾಶವಾಗಿದ್ದು ಸಕರ್ಾರ ಇಲ್ಲಿಯವರೆಗೆ ಬೆಳೆ ಹಾನಿಯಾದ ಬಗ್ಗೆ ಸವರ್ೇ ಮಾಡಲಿಲ್ಲ, ತಕ್ಷಣ ಸರ್ವೇ ಮಾಡಿ ರೈತರಿಗೆ ಪರಿಹಾರ ನೀಡಲು ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಒತ್ತಾಯಿಸಿದರು.

ನವಲಗುಂದ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ಕೋನರಡ್ಡಿ ಆಹ್ವಾನ :

ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಫರ್ಧೆಸುತ್ತಾರೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಪ್ರಾರಂಭವಾಗಿದ್ದು ರೈತ ಬಂಡಾಯದ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಆಹ್ವಾನ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತೇವೆ ಎಂದರು.

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹೆಸರು ಬೆಳೆ ದೊಡ್ಡ ಪ್ರಮಾಣದಲ್ಲಿ ಬಿತ್ತನೆಯಾಗಿ ಸತತವಾಗಿ ಮಳೆಯಾಗಿ ಬೆಳೆ ಹಾನಿಯಾಗಿರುವುದರಿಂದ ಸರ್ಕಾರದಿಂದ ಪರಿಹಾರ ಕೊಡಿಸಲು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೋನರಡ್ಡಿ ರೈತರ ಪರವಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ, ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾ ಗ್ರಾಮೀಣ ಕಾಂಗ್ರೇಸ್ ಸಮೀತಿಯ ಅಧ್ಯಕ್ಷ ಅನೀಲಕುಮಾರ ಪಾಟೀಲ, ಮಾಜಿ ಸಚಿವ ಕೆ.ಎನ್. ಗಡ್ಡಿ, ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ ಕೆಸಿಸಿ ಬ್ಯಾಂಕ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ, ಜಿಲ್ಲಾ ಗ್ರಾಮೀಣ ಮಹಿಳಾ ಸಮೀತಿ ಅಧ್ಯಕ್ಷರಾದ ಶಾಂತಮ್ಮ ಗುಜ್ಜಳ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ್ರ ಹಿರೇಗೌಡ್ರ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ   ಸಾವಿತ್ರಿ ಭಗವತಿ, ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಸ್ಥಾಯಿ ಸಮೀತಿ ಚೇರಮನ ಸುರೇಶ ಮೇಟಿ, ಅಣ್ಣಿಗೇರಿ ಪುರಸಭೆ ಸ್ಥಾಯಿ ಸಮೀತಿ ಚೇರಮನ್ ಬಾಬಾಜಾನ ಮುಲ್ಲಾನವರ, ಸದಸ್ಯರುಗಳಾದ ಮಂಜು ಜಾಧವ, ಮಹಾಂತೇಶ ಭೋವಿ, ಮೊದೀಶ ಶಿರೂರ, ಹನಮಂತ ವಾಲಿಕರ, ಚಂದ್ರಲೇಖಾ ಮಳಗಿ, ಹುಸೇನಬಿ ಧಾರವಾಡ, ಮುದಕವ್ವಾ ಬೆಂಡಿಗೇರಿ, ಮುಖಂಡರುಗಳಾದ ರಾಜಶೇಖರ ಮೆಣಸಿನಕಾಯಿ, ವಿಜಯಗೌಡ ಪಾಟೀಲ, ಆನಂದ ಹವಳಕೋಡ, ಸಂತೋಶಗೌಡ ಪಾಟೀಲ, ಕುಮಾರ ಲಕ್ಕಮ್ಮನವರ,   ಪ್ರೇಮಾ ನಾಯ್ಕರ, ಕಿರಣ ಉಳ್ಳಿಗೇರಿ, ಗರುನಾಥ ಹಳ್ಳುರ, ಶಿವು ಪೂಜಾರ, ಹಸನಸಾಬ ಸುಂಕದ, ಇಮಾಮ ದರವಾನಿ, ಮುಂತಾದ ಚುನಾಯಿತ ಪ್ರತಿನಿಧಿಗಳೂ, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು