ಅನುಮೋದಿತ ಕ್ರಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸಿ: ಶಿರೂರ

ಧಾರವಾಡ 17: ಇಲಾಖಾವಾರು ಅನುಮೋದಿತ ಕ್ರಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಚೈತ್ರಾ ಶಿರೂರ ಹೇಳಿದರು.

ಅವರು ಇಂದು ಮಧ್ಯಾಹ್ನ ಜಿಲ್ಲಾ ಪಂಚಾಯತ ಸಭಾಗಂಣದಲ್ಲಿ ಜರುಗಿದ ಜಿಲ್ಲಾ ಪಂಚಾಯತ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಜಿಲ್ಲಾ ಪಂಚಾಯತದಿಂದ ಅನುಮೋದಿತ ಕ್ರೀಯಾಯೋಜನೆ ಅನುಸಾರ ಕ್ರಮಕೈಗೊಳ್ಳಬೇಕು. ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದರೆ ಎಲ್ಲ ರೀತಿಯ ಸಮಸ್ಯಗಳು ಪರಿಹಾರವಾಗುತ್ತವೆ. ಆಸಕ್ತಿಯಿಂದ ಅಧಿಕಾರಿಗಳು ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಹಾಗೂ ಕುಡಿಯುವ ನೀರು, ಹೆಸ್ಕಾಂ, ತೋಟಗಾರಿಕೆ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪಂಚಾಯತ ರಾಜ್ ಇಂಜನೀಯರಿಂಗ್ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಕುರಿತು ಚಚರ್ಿಸಲಾಯಿತು. ಮತ್ತು ಸಿ.ಎಂ.ಜಿ.ಎಸ್.ವಾಯ್ ಯೋಜನೆ ಅನುದಾನ 53.50 ಲಕ್ಷ ರೂ.ಗಳ ಹಾಗೂ ಎಮ್.ಜಿ.ಎನ್.ಆರ್.ಇ.ಜಿ.ಎ ಯೋಜನೆಯ ಅನುದಾನ 53.50 ಲಕ್ಷ ರೂ.ಗಳ ಒಗ್ಗೂಡಿಸುವಿಕೆ ಕ್ರಿಯಾ ಯೋಜನೆ ಮತ್ತು 2018-19ನೇ ಸಾಲಿನ ಜಿಲ್ಲಾ ಪಂಚಾಯತ ಕಚೇರಿ ಕಟ್ಟಡ ನಿಮರ್ಾಣ ಮತ್ತು ನಿರ್ವಹಣೆ ಅನುದಾನದ ಕ್ರೀಯಾ ಯೋಜನೆಯಲ್ಲಿನ ಕಾಮಗಾರಿಗಳ ಪ್ರಗತಿ ಕುರಿತು ಸಭೆಯಲ್ಲಿ ಚಚರ್ಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿ.ಪಂ. ಸಿ.ಇ.ಓ ಡಾ.ಬಿ.ಸಿ.ಸತೀಶ ಹಾಗೂ ಉಪಕಾರ್ಯದಶರ್ಿ ಎಸ್.ಜಿ.ಕೋರವರ ಉಪಸ್ಥಿತರಿದ್ದರು. ಉಪಕಾರ್ಯದಶರ್ಿ ಎಸ್.ಜಿಕೋರವರ ಸ್ವಾಗತಿ, ಸಭೆ ನಿರ್ವಹಿಸಿದರು.