ಇಂಪ್ಲಾಂಟ ಅಳವಡಿಕೆಯ ಮಾಸ್ಟರ್ ಟ್ರೇನರ್ಗೆ ತರಬೇತಿ

 ಧಾರವಾಡ: ಕೇಂದ್ರ ಆರೋಗ್ಯ ಸಚೀವಾಲಯ, ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಪಾಯಿಗೋ ಇವರ ಸಂಯುಕ್ತ ಆಶ್ರಯದಲ್ಲಿ ಇಂಪ್ಲಾಂಟ ಅಳವಡಿಕೆಯ ಕುರಿತು ಮಾಸ್ಟರ್ ಟ್ರೇನರ್ ಗೆ 2 ದಿನಗಳ ತರಬೇತಿಯನ್ನು  ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ, ಧಾರವಾಡ ಶಾಖೆಯಲ್ಲಿ ಏರ್ಪಡಿಸಲಾಗಿತ್ತು.

ತರಬೇತಿ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಇಂಪ್ಲಾಂಟ ಗರ್ಭನಿರೋಧಕ ಮುಂದಿನ ದಿನಗಳಲ್ಲಿ ಸರ್ಕಾರ ಇದನ್ನು ಹೆಚ್ಚಿನ ಮಹಿಳೆಯರಿಗೆ ಅಳವಡಿಸುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಹಯೋಗದಲ್ಲಿ ಮಾಸ್ಟರ್ ಟ್ರೇನರ್ಗೆ ತರಬೇತಿ ನಡೆಯುತ್ತಿರುವದು ಸಂತೋಷದ ಸಂಗತಿ, ಎಲ್ಲ ರಂಗದಲ್ಲಿ ಸಹಕಾರ ನೀಡುವದಾಗಿ ತಿಳಿಸಿದರು.

ರಾಷ್ಟ್ರ ಮಟ್ಟದ ತರಬೇತುದಾರರಾದ ಮತ್ತು ಎಫ್.ಪಿ.ಎ.ಐ ನ ರಾಷ್ಟ್ರೀಯ ಅದ್ಯಕ್ಷರು ಆದ ಡಾ. ರತ್ನಮಾಲಾ ಎಂ.ದೇಸಾಯಿ ದೀರ್ಘಾವಧಿಯವರೆಗೆ ಉಪಯೋಗಿಸುವ ಒಂದು ಕಡ್ಡಿಯಂತಿರುವ ಇಂಪ್ಲಾಂಟನ್ನು ಚರ್ಮದ ಕೆಳಭಾಗದಲ್ಲಿ ಹಾಕುವ ಹೊಸ ಗರ್ಭನಿರೋಧಕ ವಿಧಾನ. ಇಂಪ್ಲನೋನ ಒಂದು ಬೆಂಕಿ ಕಡ್ಡಿ ಗಾತ್ರ ಹೊಂದಿದ್ದು, ಪ್ರೋಜಸ್ಟ್ರಾನಂತಹ ಇಟಿನೋಜಸ್ಟ್ರಾಲ್ ಎಂಬ ಹಾರ್ಮೋನನ್ನು ಹೊಂದಿದೆ. ಇದನ್ನು ಒಂದು ನವೀನತೆವುಳ್ಳ ಉಪಕರಣದ ಮೂಲಕ ಅಳವಡಿಸಲಾಗುತ್ತದೆ. ಇಂಪ್ಲನೋನ ಓಘಿಖಿ ಬಹಳ ಪರಿಣಾಮಕಾರಿಯಾದ ಗರ್ಭನಿರೋಧಕ. ಇದನ್ನು ಅಳವಡಿಸಿಕೊಂದಿರುವ ಅವಧಿಯಲ್ಲಿ ಮಹಿಳೆ ಗರ್ಭಧರಿಸುವುದಿಲ್ಲ ಅಂದರೆ ಇದರ ವಿಫಲತೆ ಬಹಳ ಕಡಿಮೆ ಇರುತ್ತದೆ ಎಂದು ಹೇಳಬಹುದು. ಇಂಪ್ಲನೋನ ಓಘಿಖಿ ಅಳವಡಿಸಿದ ಮೇಲೆ ಮೂರು ವರ್ಷದವರೆಗೆ ಪರಿಣಾಮಕಾರಿಯಾಗಿರುತ್ತದೆ. ಇದನ್ನು ತೋಳಿನ ಮೆಲ್ಬಾಗದಲ್ಲಿ ತರಬೇತಿಯಾದ ವೈದ್ಯರು ಅಳವಡಿಸುತ್ತಾರೆ. ಈ ಕ್ರೀಯೆಯು ಬಹಳ ಸರಳವಾಗಿದ್ದು, ನೋವಿಲ್ಲದೇ, ಕಡಿಮೆ ಅವಧಿಯಲ್ಲಿ ಮುಗಿಯುತ್ತದೆ. ಇಂಪ್ಲಾಂಟನ್ನು ಶುಚಿಯಾದ ಸ್ಥಳದಲ್ಲಿ ಅಥವಾ ಹೊರರೋಗಿ ತಪಾಸಿಸುವ ಸ್ಥಳದಲ್ಲಿ ಅಳವಡಿಸಬಹುದು. ಇಂಪ್ಲಾಂಟ ಹಾಕುವ ಜಾಗವನ್ನು ಮರಗಟ್ಟಿಸಲಾಗುವದು. ಇದನ್ನು ಬೇಡವೆಂದಾಗ ತಗೆಯಬೇಕೆಂದರೆ ಆ ಜಾಗವನ್ನು ಪುನಃ ಮರಗಟ್ಟಿಸಿ ತಗೆಯಲಾಗುವದು.

 ಇನೋರ್ವ ರಾಷ್ಟ್ರ ಮಟ್ಟದ ತರಬೇತುದಾರ  ಡಾ. ಸುನಿತಾ ಸಿಂಗಲ್ ಮಾತನಾಡಿ ಭಾರತ ಸಕರ್ಾರವು ಎಫ್.ಪಿ.ಎ.ಐ ಮತ್ತು ಜಪಾಯಿಗೋ ಸಹಕಾರದಿಂದ ಈ ತರಬೇತಿಯನ್ನು ನೀಡುತ್ತಿದ್ದು, ಎಫ್.ಪಿ.ಎ.ಐ ಸಂಸ್ಥೆಯು ಅರ್ಥಗಳನ್ನು ಪ್ರೇರೆಪಿಸುವ ಮತ್ತು ಗುಣಮಟ್ಟದ ತರಬೇತಿ ನೀಡುವ ಶಕ್ತಿಯನ್ನು ಹೊಂದಿದೆ. ಇಂಪ್ಲನೋನ ಓಘಿಖಿ ವಿಧಾನವು ಅತ್ಯಂತ ಸುರಕ್ಷಿತ, ಪರಿಣಾಮಕಾರಿಯಾಗಿದ್ದು 99ರಷ್ಟು ಯಶಸ್ವಿಯಾಗಿದೆ. ವಿಶ್ವದಲ್ಲಿ 25 ಮಿಲಿಯನ್ ಜನರು ಈ ವಿಧಾನವನ್ನು ಉಪಯೋಗಿಸುತ್ತಿದ್ದಾರೆ, ಇದನ್ನು ತರಬೇತಿ ಹೊಂದಿದ ವೈದ್ಯರು ಅಳವಡಿಸಬಹುದು.ಇದರ ಬೆಲೆ ಮತ್ತು ರಿಯಾಯಿತಿಯನ್ನು ಸರಕಾರ ನಿರ್ಧರಿಸಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಪ್.ಪಿ.ಎ.ಐ ರಾಷ್ಟ್ರೀಯ ಪೋಷಕರಾದ ಡಾ. ಎಂ.ಎನ್. ತಾವರಗೇರಿ ಮಾತನಾಡಿ ಕೆಲವು ದೇಶಗಳಲ್ಲಿ ಮಹಿಳೆಯರು ಈ ವಿಧಾನವನ್ನು ಹೆಚ್ಚು ಅನುಸರಿಸುತ್ತಿದ್ದು ಇದನ್ನು ಭಾರತದಲ್ಲಿ ಹೆಚ್ಚಿನ ಮಹಿಳೆಯರಗೆ ಸೇವೆಯನ್ನು ವಿಸ್ತರಿಸುವ ದೃಷ್ಟಿಯಿಂದ ಈ ತರಬೇತಿಯನ್ನು ಹಮ್ಮಿಕೋಳ್ಳಲಾಗಿದೆ. ಹೆಚ್ಚು ಕೌಶಲ್ಯದಿಂದ ಇತರರಿಗೆ ತರಬೇತಿ ನೀಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಎಫ್.ಪಿ.ಎ.ಐ ನ ಧಾರವಾಡ ಶಾಖೆಯ ಪೋಷಕರಾದ ಡಾ. ರಾಜನ್ ದೇಶಪಾಂಡ್ಯೆ ಮಾತನಾಡಿ ಎಫ್.ಪಿ.ಎ.ಐ ಸಕರ್ಾರದ ಜೋತೆ ಸ್ವಯಂಸೇವಾ ಸಂಸ್ಥೆಗಳು ಸೇರಿದಾಗ ಡಬಲ್ ಇಂಜನ್ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ಹೆಚ್ಚು ವೈದ್ಯರಿಗೆ ತರಬೇತಿ ನೀಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡೈರೇಕ್ಟರ್ ಜನರಲ್ ಡಾ. ಕಲ್ಪನಾ ಆಪ್ಟೆ ಮಾತನಾಡಿ ವೈದ್ಯರಾದ ನಾವು ಅನೇಕ ರೀತಿಯ ತರಬೇತಿ ಹೊಂದಿದ್ದು ಇಂಪ್ಲನೋನ ಓಘಿಖಿ ಅಳವಡಿಸುವ ಸಣ್ಣ ಪುಟ್ಟ ಕೌಶಲ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. 2018ರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅಳವಡಿಸಲಾಯಿತು. 2019 ರಿಂದ ಎಫ್.ಪಿ.ಎ.ಐ ಆಸ್ಪತ್ರೆಗಳಲ್ಲಿ ಇಂಪ್ಲನೋನ ಅಳವಡಿಸಲಾಗುತ್ತಿದೆ. ವಿಶಾಲ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಇದರ ಕುರಿತು ಜಾಗೃತಿ ಅವಶ್ಯಕ. ವೈದ್ಯರಿಗೆ ತರಬೇತಿಗಾಗಿ ಕೈಪಿಡಿಯನ್ನು ಮಾಡಲಾಗಿದೆ. 30 ವೈದ್ಯರನ್ನು ಮಾಸ್ಟರ್ ಟ್ರೇನರ್  ನಾಗಿ ಮಾಡಲಾಗುವದು. ಅವರು ಉಳಿದ ವೈದ್ಯರಿಗೆ ತರಬೇತಿ ನೀಡುತ್ತಾರೆ. ಮಾಸ್ಟರ್ ಟ್ರೇನರ್ ಗೆ ಟ್ರೇನರ್ ಆಗಿ ಡಾ. ರತ್ನಮಾಲಾ ದೇಸಾಯಿ ಮತ್ತು ಸುನಿತಾ ಸಿಂಗಲ್ ರು ತರಬೇತಿಯನ್ನು ನೀಡುತ್ತಿರುವದಕ್ಕೆ ಸಂತಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಹೇಮಲ್ ದೇಸಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಶಾಖಾ ವ್ಯವಸ್ಥಾಪಕಿ ಸುಜಾತಾ ಎಸ್. ಆನಿಶೆಟ್ಟರ ವಂದಿಸಿದರು,

ಕಾರ್ಯಕ್ರಮದಲ್ಲಿ ಎಸ್.ಬಿ.ನಿಂಬಣ್ಣವರ, ಅನೀಲ ಥಾಮಸ್, ಡಾ. ನಿಲೇಶ ಪಾಟೀಲ, ಸಂಜನಾ,ಪಲ್ಲವಿ, ದೆಹಲಿ,ಗುಜರಾತ,ತಮಿಳನಾಡು ಮತ್ತು ಕನರ್ಾಟಕ ಸೇರಿ 11 ವೈದ್ಯರು, ಎಫ್.ಎ.ಐ.ನ ಕಾರ್ಯಕಾರಿ ಸದಸ್ಯರು ಹಾಗೂ ಎಫ್.ಪಿ.ಎ.ಐ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು