ಡಂಗಿ ಜ್ವರ ಕಾಣಿಸಿ ಕೊಂಡಾಗ ತಕ್ಷಣೇ ವೈದ್ಯರಲ್ಲಿ ಪರೀಕ್ಷೀಸಿ

If you develop dengue fever, see a doctor immediately.

ಡಂಗಿ ಜ್ವರ ಕಾಣಿಸಿ ಕೊಂಡಾಗ ತಕ್ಷಣೇ ವೈದ್ಯರಲ್ಲಿ ಪರೀಕ್ಷೀಸಿ                                  

ಕಂಪ್ಲಿ:ಮೇ.16. ಡೆಂಗಿ?ಜ್ವರವು?ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ಒಳಾಂಗಣದಲ್ಲಿ ಮತ್ತು ಹೊರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ವೈದ್ಯಾಧಿಕಾರಿ ಡಾ.ರವೀಂದ್ರ ಕನಿಕೇರಿ ಹೇಳಿದರು.ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ತ್ರೀಯ ಡೆಂಗ್ಯೂ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವ ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಡೆಂಗಿ ತಡೆಗೆ ಕಡ್ಡಾಯವಾಗಿ ಸೊಳ್ಳೆ ಪರದೆ?ಬಳಸಬೇಕು. ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಬೇಕು.? ಡಂಗಿ ಜ್ವರ ಕಾಣಿಸಿ ಕೊಂಡಾಗ ತಕ್ಷಣೇ ವೈದ್ಯರಲ್ಲಿ ಪರೀಕ್ಷೀಸಿ ಸೂಕ್ತ ಚಿಕಿತ್ಸೆ ಪಡೆಯಲು ಮುಂದಾಗಿ ಸೊಳ್ಳೆಯ ಕಡಿತದಿಂದ ಒಬ್ಬರಿಂದ ಇನ್ನೊಬ್ಬರಿಗೆ ಡೆಂಗಿ ಮತ್ತು ಮಲೇರಿಯಾ ಹರಡುತ್ತದೆ. ಸ್ವಚ್ಛ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತದೆ. ಡೆಂಗಿ ತಡೆಗೆ ಬನ್ನಿ ಎಲ್ಲರೂ ಕೈಜೋಡಿಸೋಣ’ ಎಂಬ ಘೋಷ ವಾಕ್ಯದೊಂದಿಗೆ ಡೆಂಗು ಮುಕ್ತಗೊಳಿಸಬೇಕು. ಸೊಳ್ಳೆಯಿಂದ ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ, ಆನೆಕಾಲು ರೋಗವು ಹರಡುತ್ತದೆ. ಈ ರೋಗಗಳ ನಿಯಂತ್ರಣಕ್ಕೆ ಸಮುದಾಯ ಸಹಭಾಗಿತ್ವ ಅತಿ ಮುಖ್ಯ’ ಎಂದರು.ಈ ಸಂದರ್ಭದಲ್ಲಿ ವೈದ್ಯಾರಾದ ಡಾ.ಮಲ್ಲೇಶಪ್ಪ, ಡಾ.ವಿರೇಶ, ಡಾ.ಪ್ರಕಾಶಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶೋಭಾ, ತಾಲೂಕು ಆರೋಗ್ಯ ನೀರೀಕ್ಷಕ ಬಸವರಾಜ, ಹೆಚ್‌ಐಒ ಚನ್ನಬಸವರಾಜ, ಆರ್‌.ದೇವರಾಜ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.ಮನೆ ಮನೆಗೆ ಜಾಗೃತಿ : ಇಲ್ಲಿನ 3 ಮತ್ತು 4ನೇ ವಾರ್ಡಿನಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಹೆಚ್‌ಐಒರಾದ ಚನ್ನಬಸವರಾಜ,ಆರ್‌.ದೇವರಾಜ.ಈ.ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.