ಯುವಕರು ಕೃಷಿಯತ್ತ ಆಸಕ್ತಿ ವಹಿಸಿದರೆ ರಾಷ್ಟ್ರದ ಪ್ರಗತಿ: ನಾಯಿಕ್


ಕಾಗವಾಡ 16: ಇಂದಿನ ವಿಜ್ಞಾನ ಯುಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ, ತೋಟಗಾರಿಕೆ ಬೇಸಾಯ ಮಾಡುವುದು ಸೂಕ್ತ. ಕೃಷಿ ಮಾಡುವಾಗ ಪದವಿ ಶಿಕ್ಷಣ ಪಡೆದು ರೈತರಿಗೆ ಮಾರ್ಗದರ್ಶನ ನೀಡುವುದು ಆಗತ್ಯವಾಗಿದೆ. ಇದಕ್ಕೆ ಯುವಕರು ಕೃಷಿ ಬಗ್ಗೆ ಆಸಕ್ತಿ ವಹಿಸಿ ಯುವಕರು ಮುಂದು ಬಂದರೆ ದೇಶ ಮತ್ತು ರಾಜ್ಯದ ಪ್ರಗತಿಯಾಗಲಿದೆ ಎಂದು ಅರಭಾವಿಯ ಕಿತ್ತೂರ ರಾಣಿ ಚೆನ್ನಮ್ಮಾ ತೋಟಗಾರಿಕೆಯ ಮಹಾವಿದ್ಯಾಲಯದ ಡೀನ್ ಡಾ. ನಾಗೇಶ ನಾಯಿಕ್ ಕಾಗವಾಡದಲ್ಲಿ ಹೇಳಿದರು.

ಗುರುವಾರ ದಿ. 15ರಂದು ಕಾಗವಾಡದ ವಿಠ್ಠಲ ಮಂದಿರದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಡಾ. ಅವರು ಮಾತನಾಡಿದರು. ಬಾಗಲಕೋಟ ಜಿಲ್ಲೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕಿತ್ತುರ ರಾಣಿ ಚೆನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಅರಭಾವಿ, ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ ಅರಭಾವಿ, ತೋಟಗಾರಿಕೆ ಇಲಾಖೆ ಕಾಗವಾಡ ಇವರ ಸಂಯುಕ್ತಾಶ್ರಯದಲ್ಲಿ ಅರಭಾವಿಯಲ್ಲಿ ಓದುತ್ತಿರುವ ತೋಟಗಾರಿಕೆ ವಿಭಾಗದ 60 ವಿದ್ಯಾಥರ್ಿಗಳಿಗೆ ಒಂದು ತಿಂಗಳ ಕಾಗವಾಡ ಭಾಗದಲ್ಲಿ ಉಳಿದು ಇಲ್ಲಿಯ ರೈತರೊಂದಿಗೆ ಬೇರೆ, ಬೇರೆ ಬೆಳೆಗಳು, ಹಣ್ಣಿನ ತೋಟಗಳಿಗೆ ಭೇಟಿನೀಡಿ ಸಂಶೋಧನೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಉದ್ಘಾಟನೆ ನೆರವೇರಿಸಿದರು. 

ವಿದ್ಯಾಥರ್ಿಗಳಿಗೆ ಬಾಳೆ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳು ವಿಷಯದಲ್ಲಿ ಅರಭಾವಿ ಕಿರಚತೋಮ, ಹಣ್ಣು ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಎನ್.ಪಾಟೀಲ ಮಾಹಿತಿ ನೀಡಿದರು. 

ಕಾಗವಾಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸದಾಶಿವ ಚೌಗುಲೆ ಮತ್ತು ದತ್ತ ಸಕ್ಕರೆ ಕಾಖರ್ಾನೆ ಉಪಾಧ್ಯಕ್ಷ ಸಿದ್ದಗೌಡಾ ಪಾಟೀಲ ಇವರು ಸಸಿಗೆ ನೀರು ಹಾಕಿ, ಸಮಾರಂಭಕ್ಕೆ ಚಾಲನೆ ನೀಡಿದರು. ಪ್ರಗತಿಪರ ರೈತರಾದ ಸುಭಾಷ ಕಠಾರೆ, ಬಾಳಾಸಾಹೇಬ ಚೌಗುಲೆ, ಡಾ. ಸಿ.ಬಿ.ಕೌಜಲಗಿ, ಡಾ. ಕಾಂತರಾಜು, ಡಾ. ಎಸ್.ಎನ್.ಪಾಟೀಲ, ಕಾಗವಾಡ ಗ್ರಾಮದ ಅನೇಕ ತಜ್ಞ ರೈತರು ಪಾಲ್ಗೊಂಡಿದ್ದರು.