ಶಾಲಾ ಆವರಣದಲ್ಲಿಯೇ ಬಿಸಿಬಿಸಿ ಇಡ್ಲಿ,ವಡಾ,ಬಜಿ; ತಿನ್ನುವುದರಲ್ಲಿ ಬಿಜಿ

ಶಾಲಾ ಆವರಣದಲ್ಲಿಯೇ ಬಿಸಿಬಿಸಿ ಇಡ್ಲಿ,ವಡಾ,ಬಜಿ; ತಿನ್ನುವುದರಲ್ಲಿ ಬಿಜಿ Idli, vada, and baji are hot in the school premises; busy eating

ಲೋಕದರ್ಶನ ವರದಿ 

ಮಹಾಲಿಂಗಪುರ 07 : ಶನಿವಾರ ಬೆಳಿಗ್ಗೆಯೇ ಶಾಲೆಯ ಆವರಣದಲ್ಲಿ ಬಿಸಿಬಿಸಿ ಇಡ್ಲಿ, ವಡಾ, ಬಜಿ, ಪಾನಿಪೂರಿ, ಗುಲಾಬ್ ಜಾಮೂನು ಮತ್ತು ಸ್ಟೇಷನರಿ, ಅಲಂಕಾರಿಕ ವಸ್ತುಗಳ ಮಾರಾಟ ಮಳಿಗೆಗಳು ತಲೆಯೆತ್ತಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಿಂಡಿ ತಿನ್ನುವುದರಲ್ಲಿ, ಎಳನೀರು ಮಜ್ಜಿಗೆ ಕುಡಿಯುವುದರಲ್ಲಿ, ಬಜಿ ಜಾಮೂನು ಸವಿಯುದರಲ್ಲಿ ಬಿಜಿಯಾಗಿದ್ದು ಕಂಡುಬಂತು. 

ಸಮೀಪದ ಮಧಭಾವಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಭಾಗ್ಯಶ್ರೀ ಜ್ಯೋತೆಪ್ಪನವರ, ದೀಪಾ ಸಂಗಾನಟ್ಟಿ, ಪಲ್ಲವಿ ಬಿಳಿಕುರಿ, ಸೃಷ್ಟಿ ವಗ್ಗರ, ಸಂತೋಷ ಉಳ್ಳಾಗಡ್ಡಿ, ಸಾಗರ ಒಂಟಿ, ಪವನ ಪಾಟೀಲ, ರೋಹಿತ ಚಿಂಚಖಂಡಿ, ಶ್ರವಣ ಬೆಳಕೂಡ, ಪ್ರಜ್ವಲ ಮಂಟೂರ, ಸಪ್ನಾ ಮೇಟಿ, ನೌಶಾದ್ ನದಾಫ್,ಆನಂದ ಸುತಾರ, ನರೇಂದ್ರ ಚಿಕ್ಕೋಡಿ, ಐಶ್ವರ್ಯ ಸುತಾರ, ಲಾವಣ್ಯ ಡುಮ್ಮಣ್ಣವರ, ಸೌಂದರ್ಯ ತೇಲಿ, ಲಕ್ಷ್ಮಿ ಕಬ್ಬೂರ ಮುಂತಾದವರು ತಾವೇ ತಯಾರಿಸಿದ ಖಾದ್ಯಗಳ ಅಂಗಡಿಗಳನ್ನು ತೆರೆದು ಭರಪೂರ ವ್ಯಾಪಾರ ಮಾಡಿ ಭರ್ಜರಿ ಆದಾಯ ಗಳಿಸಿ ಖುಷಿ ಹಂಚಿಕೊಂಡರು. 

ಗಂಗೋತ್ರಿ ಬ್ಯೂಟಿ ಪಾರ್ಲರ್ ನ ವತಿಯಿಂದ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಯಿತು. ಪತ್ರಕರ್ತ ನಾರಾಯಣಗೌಡ ಉತ್ತಂಗಿ, ಉದ್ಯಮಿ ಶ್ರೀನಾಥ ಹಲಗಿಗೌಡರ,  ರಸೂಲ್ ಸಿರಗುಪ್ಪಿ ಮಕ್ಕಳಿಗೆ ವೃತ್ತಿ ಮಾರ್ಗದರ್ಶನದ ಉಪನ್ಯಾಸ ನೀಡಿದರು. 

ಎಸ್ ಡಿಎಂಸಿ ಅಧ್ಯಕ್ಷ ಸದಾಶಿವ ಪಟ್ಟಣಶೆಟ್ಟಿ, ಉಪಾಧ್ಯಕ್ಷ ನಾರಾಯಣ ಸುತಾರ, ಮುಖ್ಯೋಪಾಧ್ಯಾಯ ಐ.ಜಿ.ಯರಗಾಣಿ, ಮುಖಂಡರಾದ ವಿನೋದಗೌಡ ಉಳ್ಳಾಗಡ್ಡಿ, ಸುಭಾಷ್ ತಿಮ್ಮಾಪುರ, ಮಲ್ಲಪ್ಪ ಉರಬಿನ್ನವರ, ಸಂಗಪ್ಪ ವಡರಟ್ಟಿ, ಸಂಜು ಮಾಳಿ, ಸದಾಶಿವ ಕೋಳೆಕಾರ, ಮುತ್ತಪ್ಪ ವಗ್ಗರ, ಸತ್ಯಪ್ಪ ಮುಧೋಳ ಸದಾಶಿವ ಮ. ಪಟ್ಟಣಶೆಟ್ಟಿ ಎಸ್‌. ಎಸ್‌.ಮಾಳಿ ಇತರರಿದ್ದರು.