ಹುಕ್ಕೇರಿ: ದೇವಸ್ಥಾನದ ಪೂಜೆ ವಿಚಾರವಾಗಿ ವಿವಾದ; ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಸಭೆ
Hukkeri: Dispute over temple rituals; meeting at the Tahsildar's office on Saturday
ಲೋಕದರ್ಶನ ವರದಿ
ಹುಕ್ಕೇರಿ .22: ಪಟ್ಟಣದ ಗ್ರಾಮ ದೇವತೆ ಲಕ್ಷ್ಮೀದೇವಿ ದೇವಸ್ಥಾನದ ಪೂಜೆ ವಿಚಾರವಾಗಿ ಎರಡು ಅರ್ಚಕರ ಕುಟುಂಬಗಳ ನಡುವೆ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ಸಭೆ ನಡೆಯಿತು. ದೇವಸ್ಥಾನದ ಪೂಜಾ ಕಾರ್ಯವನ್ನು ಸಂಪೂರ್ಣವಾಗಿ ಅರ್ಚಕರ ಜವಾಬ್ದಾರಿಯಲ್ಲಿಯೇ ನಡೆಸಬೇಕು. ಯಾವುದೇ ಕಾರಣಕ್ಕೂ ಪೂಜೆ ಸ್ಥಗಿತಗೊಳಿಸಿ ಭಕ್ತರಿಗೆ ತೊಂದರೆ ನೀಡಬಾರದು ಎಂದು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಸೂಚಿಸಿದರು.
ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಸಾರ್ವಜನಿಕ ಆಸ್ತಿಯಾಗಿದ್ದು, ಸಂಪ್ರದಾಯದಂತೆ ಪೂಜೆ ನಡೆಸಲಾಗುತ್ತಿದೆ. ಅರ್ಚಕರ ಅವಧಿ ಮುಗಿದರೂ ಮತ್ತೊಂದು ಕುಟುಂಬಕ್ಕೆ ಪೂಜಾ ಅವಕಾಶ ನೀಡದಿರುವುದೇ ವಿವಾದಕ್ಕೆ ಮೂಲ ಕಾರಣವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ದೇವಸ್ಥಾನ ಯಾರೊಬ್ಬರ ಖಾಸಗಿ ಆಸ್ತಿಯಲ್ಲ. ಭಕ್ತರು ಹಾಗೂ ಟ್ರಸ್ಟ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿದ್ದು, ಅರ್ಚಕರು ಜಗಳ ಬಿಟ್ಟು ಪಾಲು ಪದ್ಧತಿಯಂತೆ ಹೊಂದಾಣಿಕೆ ಮಾಡಿಕೊಂಡು ಪೂಜೆ ನಡೆಸಬೇಕು ಎಂದು ಸಲಹೆ ನೀಡಲಾಯಿತು. ಪ್ರತಿ ಕುಟುಂಬಕ್ಕೂ ವರ್ಷಕ್ಕೊಮ್ಮೆ ಪೂಜೆ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಯಿತು.
ಪೂಜೆ ವಿಚಾರದಲ್ಲಿ ಹಠಕ್ಕೆ ಬಿದ್ದು ದೇವಸ್ಥಾನಕ್ಕೆ ಬೀಗ ಹಾಕಿದರೆ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಲಾಯಿತು. ಮೊದಲು ಪಂಚರ ಸಭೆ ಕರೆದು ಎರಡೂ ಕುಟುಂಬಗಳಿಗೆ ನೋಟಿಸ್ ನೀಡಬೇಕು. ಇದಕ್ಕೆ ಮಣಿಯದಿದ್ದರೆ ತಾಲೂಕು ಆಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಸಭೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶಿವಾನಂದ ಗಣಾಚಾರಿ, ಜಾತ್ರಾ ಸಮಿತಿ ಅಧ್ಯಕ್ಷ ಪಾಪು ನಾಯಕ್, ಜಯಗೌಡ ಪಾಟೀಲ, ಎ.ಕೆ. ಪಾಟೀಲ, ಶಿವಾನಂದ ಗಜಬರ, ಸದಾನಂದ ಬಸ್ತವಾಡೆ, ಸಂಜೀವ ಮುತಾಲಿಕ, ರವಿ ಕರಾಳೆ, ರಾಜೇಂದ್ರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಬಸವರಾಜ ಹುಂಡೇಕರ, ರವಿ ನಾಯಕ್, ರಾಜು ಕೋಟಬಾಗಿ, ಗೀರೀಶ ಕುಲಕರ್ಣಿ, ಅಶೋಕ ನಾಯಕ್, ಪ್ರಮೋದ ಹುಕ್ಕೇರಿ, ಗಜಾನನ ಬಡಿಗೇರ ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 