ಧಾರವಾಡ 18: ಹಿಂದಿನ ಕಾಲದಲ್ಲಿ ಜನ ಸತ್ಯ-ಧರ್ಮದಿಂದ ಬದುಕನ್ನು ಸಾಗಿಸುತ್ತಿದ್ದರು. ಇಡೀ ಊರೇ ಒಂದು ಕುಟುಂಬದಂತೆ ಎಲ್ಲರೂ ಕೂಡಿ ಬಾಳುತ್ತಿದ್ದರು. ಆದರೆ ಈಗಿನ ಪೀಳಿಗೆಯವರು ಅವಿಭಕ್ತ ಕುಟುಂಬ ಆಯ್ಕೆ ಮಾಡಿಕೊಂಡಿದ್ದಾರೆ. ಕೂಡಿ ಬಾಳುವುದನ್ನು ಮರೆತು, ಜಾತಿ ವೈಷಮ್ಯಗಳ ನೆಪದಿಂದ ದ್ವೇಷ ಸಾರುತ್ತಿದ್ದಾರೆ. ಇಲ್ಲಿ ಎಲ್ಲರೂ ನಮ್ಮವರೇ. ಕೂಡಿ ಬಾಳುವುದರಲ್ಲಿ ಸ್ವರ್ಗ ಸುಖವಿದೆ ಎಂದು ಖ್ಯಾತ ಆಶುಕವಿ ಸಿದ್ಧಪ್ಪ ಬಿದರಿ ಹೇಳಿದರು.
ಜನಪದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಕ್ಕೆ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಮಾಸಿಕ ಕೌಟುಂಬಿಕ ಸಭೆಯಲ್ಲಿ ಪ್ರಿಮಿಯರ್ ಸಿಟಿಜನ್ಸ್ ಕ್ಲಬ್ ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮನುಷ್ಯ ಪ್ರಾಯ, ಅಧಿಕಾರ ಹಾಗೂ ಹಣವಿದ್ದಾಗ ಯಾರ ಮಾತನ್ನು ಕೇಳುವುದಿಲ್ಲ. ಹಾಗಾಗಿ ಅಹಂಕಾರದ ಜೀವನ ನಿಷ್ಪ್ರಯೋಜಕ. ಈ ಜಗವೇ ಒಂದು ನಾಟಕವಿದ್ದಂತೆ. ಇಲ್ಲಿ ನಾವೆಲ್ಲ ಪಾತ್ರಧಾರಿಗಳು. ದೇವರೇ ಇದಕ್ಕೆಲ್ಲ ಸೂತ್ರಧಾರಿ. ದೇವರು ಕಷ್ಟ ಕೊಟ್ಟಾಗ ಮರುಗದೆ, ಮುಂದೆ ಸುಖ ಕೊಟ್ಟೆ ಕೊಡುತ್ತಾನೆ ಎಂಬ ಆಶಾಭಾವನೆ ಬೆಳೆಸಿಕೊಳ್ಳಬೇಕು. ಅಂದಾಗ ಜೀವನದೊಳಗೆ ಸ್ಫೂತರ್ಿ ಬರಲು ಸಾಧ್ಯ ಎಂದು ಬಿದರಿ ಹೇಳಿದರು.
ಈ ಸಂದರ್ಭದಲ್ಲಿ ಕ್ಲಬ್ನ ಉಪಾಧ್ಯಕ್ಷ ಗುರುನಾಥ ಇನಾಮದಾರ, ಕಾರ್ಯದಶರ್ಿ ಸುಧೀಂದ್ರ ಜಾಲಿಹಾಳ ಹಾಗೂ ಕ್ಲಬ್ನ ಸದಸ್ಯರು ಹಾಜರಿದ್ದರು.