ಲೋಕದರ್ಶನವರದಿ
ಧಾರವಾಡ04: ಗುರು ಪುರಂದರ ದಾಸರ ಆರಾಧನಾ ಮಹೊತ್ಸವದ ಉದ್ಘಾಟನೆಯು ಫೆ. 03ರಂದು ಧಾರವಾಡದ ದೇಸಾಯಿಗಲ್ಲಿ ವಿಠ್ಠಲ ಮಂದಿರದ ಪುರಂದರ ಮಂಟಪದಲ್ಲಿ ಧಾರವಾಡ ತಾಲೂಕ ಬ್ರಾಹ್ಮಣ ಅಧ್ಯಕ್ಷರಾದ ರಾಜೀವ ಪಾಟೀಲ ಕುಲಕಣರ್ಿ ಇವರಿಂದ ನೆರವೇರಿಸಲ್ಪಟ್ಟಿತು.
ಉದ್ಘಾಟನೆ ಮಾಡುತ್ತಾ ಎಲ್ಲ ಹರಿದಾಸರ ಹಾಡುಗಳಲ್ಲಿ ಅವರ ಸಮಾಜ ಸುಧಾರಣೆಯ ಕಿವಿ ಮಾತುಗಳಲ್ಲಿ ಹೇಳಿರುವರಲ್ಲಿ ಪುರಂದರರ ದಾಸರು ಅಗ್ರಗಣ್ಯರು. ನಾವು ನಮ್ಮ ಕೃತಿಯಲ್ಲಿ ಅಳವಡಿಸಿಕೊಳ್ಳುವುದು ಪ್ರಮುಖ ಎಂದರು.
ಮುಖ್ಯ ಅತಿಥಿಗಳಾಗಿ ಬಂದ ಕೃಷ್ಣ ಜೋಶಿ, ಕನರ್ಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರು, ವಿಠ್ಠಲ ಮಂದಿರದಿಂದ ಪುರಂದರ ದಾಸರ ಸಾಹಿತ್ಯವನ್ನು ಬೆಳಕಿಗೆ ತಂದ ಪಾತ್ರ ಬಹು ದೊಡ್ಡದು.
1000 ಹಾಡುಗಳನ್ನು 6 ಸಂಪುಟಗಳನ್ನು ಬಿಡುಗಡೆಗೊಳಿಸಿದ್ದು ಹೆಮ್ಮೆಯ ಸಂಗತಿ ಎಂದರು.
ರಾಮಾಚಾರ ಅಧ್ಯಾಪಕ ಪುರಂದರ ದಾಸರ ಒಂದು ಹಾಡಿನ ಒಂದು ಪಲ್ಲವಿಯಾದ "ಮಹದಾನಂದ" ವಿಶ್ಲೇಷಣೆ ಒಂದು ಗಂಟೆ ಕಾಲ ಉಪನ್ಯಾಸ ನೀಡಿ ಭಕ್ತರ ಗಮನ ಸೆಳೆದರು.
ವಿಠ್ಠಲ ಮಂದಿರ ಕಾಯರ್ಾಧ್ಯಕ್ಷ ಎಸ್.ಬಿ. ಗುತ್ತಲ ಎಲ್ಲರನ್ನೂ ಸ್ವಾಗತಿಸಿದರಲ್ಲದೇ ವಿಠ್ಠಲ ನಾಮ ಸ್ಮರಣೆಯಿಂದ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದರ ಬಗಗೆ ಮಾಹಿತಿ ನೀಡಿದರು. ಕಾರ್ಯದಶರ್ಿ ಕೆ.ಆರ್. ದೇಸಾಯಿ ವಂದಿಸಿದರು.
ಇದೇ ಸಂದರ್ಭದಲ್ಲಿ ರುಕ್ಮಿಣಿ ಪಾಂಡುರಂಗ ಭಜನಾ ಮಂಡಳಿಯಿಂದ ಭಜನೆ ಹಾಗೂ ವೀರ ನಾರಾಯಣ ಸಂಗೀತ ವಿದ್ಯಾಲಯದ ವಿದ್ಯಾಥರ್ಿಗಳಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದಲ್ಲಿ ಪಂ. ಗಿಡದಹುಬ್ಬಳ್ಳಿ ಬಂಡಾಚಾರ, ಮುತಾಲಿಕ ದೇಸಾಯಿ, ಕುಲಕಣರ್ಿ, ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.