ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ಮುಟ್ಟಬೇಕು : ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿಗ್ಗಾವಿ16 : ಉತ್ತರ ಕರ್ನಾಟಕ ಹೆಚ್ಚು ಹೆಚ್ಚು ಅಭಿವೃದ್ಧಿಯಾಗಬೇಕಾದರೆ ಶಿಗ್ಗಾವಿಯ ಶಾಸಕ ಯಾಸೀರಖಾನ ಪಠಾಣ ಅವರಂತೆ ಜನಪ್ರತಿನಿಧಿಗಳು ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸವನ್ನು ಮಾಡಬೇಕು ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿದರು. ಪಟ್ಟಣದ ಆಡಳಿತ ಕಚೇರಿಯ ಸಂಕೀರ್ಣದ ಸಭಾಭವನದಲ್ಲಿ ಆಯೋಜಿಸದ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದವತಿಯಿಂದ ನಡೆಯುತ್ತಿ ರುವ ಬೃಹತ ಹಕ್ಕು ಪತ್ರ ವಿತರಣಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಕಂದಾಯ ಗ್ರಾಮ ಯೋಜನೆಯನ್ನು ಶಿಗ್ಗಾವಿಯಲ್ಲಿ ಯಾಸೀರಖಾನ ಪಠಾಣಅತ್ಯುತ್ತಮವಾಗಿ ಅನುಷ್ಠಾನ ಗೊಳಿಸುತ್ತಿದ್ದಾರೆ. ಇದರಿಂದ ತಾಲೂಕಿನ 20 ಸಾವಿರ ಕುಟುಂಬಗಳು ತಮ್ಮ ಮನೆಯ ಹಕ್ಕು ಪತ್ರ ಪಡೆಯಲಿದ್ದಾರೆ. ಪೂಡಿ ಮುಕ್ತ ಗ್ರಾಮ, ರೈತರ ರಸ್ತೆ ಸಮಸ್ಯೆಗಳು ಸೇರಿದಂತೆ ಅನೇಕ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು. ಶಾಸಕ ಯಾಸೀರಖಾನ ಪಠಾಣ ಮಾತನಾಡಿ ದಿ. 20ರಂದು ಹೊಸಪೇಟೆಯಲ್ಲಿ ನಡೆಯುತ್ತಿರುವ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕಿನ 530 ಜನರಿಗೆ ಹಕ್ಕುಪತ್ರ ವಿತರಣೆಯಾಗಲಿದ್ದು, 108 ರೈತರಿಗೆ ಪೂಡಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ 21 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಜನಸಾಮಾನ್ಯರ ಬಹಳಷ್ಟು ಸಮಸ್ಯೆಗೆ ಇದ್ದು ಅವುಗಳನ್ನು ಬಗೆ ಹರಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ರಾಮನಗರ ಮಾಜಿ ಶಾಸಕ ಕೆ.ರಾಜು, ತಹಶಿಲ್ದಾರ ರವಿ ಕೊರವರ, ಎಸ್.ಎಫ್.ಮಣಕಟ್ಟಿ, ಗುಡ್ಡಪ್ಪ ಜಲದಿ, ಗೌಸಖಾನ ಮುನಸಿ, ಸಿದ್ದಾರ್ಥ ಪಾಟೀಲ, ಕಿರಣಗೌಡ ಪಾಟೀಲ, ಶಂಭು ಅಜೂರ, ಮಾಲತೇಶ ಸಾಲಿ, ಮಲ್ಲಮ್ಮಾ ಸೋಮನಕಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.