ಗೀತಾ ಉಮಚಗಿಗೆ ಬಂಗಾರ ಪದಕ

ಲೋಕದರ್ಶನ ವರದಿ

ಧಾರವಾಡ 13:  ಗಾಯನ ಕ್ಷೇತ್ರದ ಯುವ ಪ್ರತಿಭೆ  ಗೀತಾ ಬಸಪ್ಪ ಉಮಚಗಿ ಸ್ನಾತಕೋತ್ತರ ಸಂಗೀತ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರಯುಕ್ತ, ಕವಿವಿಯ 69ನೇ ಘಟಿಕೋತ್ಸವದಲ್ಲಿ ಫೆ.4ರಂದು ಬಂಗಾರ ಪದಕದೊಂದಿಗೆ ಗೌರವಿಸಲ್ಪಟ್ಟಿದ್ದಾರೆ. 

                              ಗಾಯನ (ಠುಮರಿ) ವಿಭಾಗದಲ್ಲಿ ವಿದುಷಿ ದಿ. ಜಾನಕಿ ಅಯ್ಯರ್ ಸ್ಮರಣಾರ್ಥ ಬಂಗಾರ ಪದಕ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದಾರೆ. ಹೊಸ ದಿಲ್ಲಿಯ ಸಿಎಸ್ಐಆರ್ ಮಹಾನಿದರ್ೇಶಕ ಹಾಗೂ ಡಿಎಸ್ಐಆರ್ ಕಾರ್ಯದಶರ್ಿ ಪ್ರೊ. ಶೇಖರ ಮಂಡೆ, ಕುಲಪತಿ ಪ್ರೊ. ಪ್ರಮೋದ ಗಾಯಿ, ಕುಲಸಚಿವರಾದ ಪ್ರೊ. ವಿಜಯಲಕ್ಷ್ಮೀ ಅಮ್ಮಿನಬಾವಿ, ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ಎನ್. ಸಾಲಿ ಗೀತಾ ಉಮಚಗಿ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು. 

ಸ್ನಾತಕೋತ್ತರ ಸಂಗೀತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ವೀರಣ್ಣ ಹೂಗಾರ, ಪ್ರಾಧ್ಯಾಪಕ ಡಾ. ಮೃತ್ಯುಂಜಯ ಅಗಡಿ ಹಾಗೂ ಶಿಕ್ಷಕ ವರ್ಗ ಅವರ ಸಾಧನೆಗೆ ಅಭಿನಂದಿಸಿದ್ದಾರೆ.