ಬಸಾಪೂರಕ್ಕೆ 2 ರಂದು ಕೋಪ್ಪಳದ ಗವಿ ಶಿದ್ದೇಶ್ವರ
ಹಾವೇರೀ 30: ತಾಲೂಕಿನ ಬಸಾಪೂರ ಗ್ರಾಮಕ್ಕೆ ಕೋಪ್ಪಳದ ಶ್ರೀಮ.ನಿಪ್ರ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇದೇ ದಿ.2.ರಂದು (2-2-2025) ಆಗಮಿಸಲಿದ್ದಾರೆ.
ಜ.31 ರಿಂದ ಫೆ.4.ನೇ ತಾರಿಖಿನವರಿಗೂ ನಡೆಯಲಿರುವ ಬಸಾಪೂರ ಗ್ರಾಮದ ಆಲದಮ್ಮದೇವಿ ಹಾಗೂ ದುರ್ಗಾದೇವಿಯ ನೂತನ ದೇವಸ್ಥಾನ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋ ಹಣ ಕಾರ್ಯಕ್ರಮವು ಆರಂಭಗೊಂಡಿದೆ, ದಿ.2.ರಂದು ಬೆಳೆಗ್ಗೆ 10.30 ಕ್ಕೆ ನಡೆಯುವ ಧರ್ಮಸಭೆಯ ಕಾರ್ಯಕ್ರಮವು ಕೋಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆರ್ಶಿವಚನ ನೀಡಲಿದ್ದಾರೆ,
ಅಗಡಿಯ ಅಕ್ಕಿಮಠದ ಮ.ನಿ.ಪ್ರ ಗುರುಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಲಿದ್ದಾರೆ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ಆಲದಮ್ಮದೇವಿ ಭಕ್ತಸಮೊಹ ಮಂಡಳಿ ಪ್ರತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.