ಜಿ. ಪಂ. ಸಿಇಓ ರಾಹುಲ್ ಶಿಂಧೆ ಸೊಪ್ಪಡ್ಲ ಗ್ರಾಮಕ್ಕೆ ಭೇಟಿ
G. Pt. CEO Rahul Shinde visits Soppadla village
ಜಿ. ಪಂ. ಸಿಇಓ ರಾಹುಲ್ ಶಿಂಧೆ ಸೊಪ್ಪಡ್ಲ ಗ್ರಾಮಕ್ಕೆ ಭೇಟಿ
ಯರಗಟ್ಟಿ 30: ಸೊಪ್ಪಡ್ಲ ಗ್ರಾಮ ಪಂಚಾಯತಿಯ ಸೊಪ್ಪಡ್ಲ ಗ್ರಾಮಕ್ಕೆ ಭೇಟಿ ನೀಡಿ ಜಲ ಜೀವನ ಮಿಷನ ಯೋಜನೆಯ ಕಾಮಗಾರಿಗಳನ್ನು ವಿವರವಾದ ಯೋಜನಾ ವರದಿ ಪ್ರಕಾರ ಕಾಮಗಾರಿ ಆಗಿರುವ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿಡಿಓ, ಅವರಿಂದ ಮಾಹಿತಿಯನ್ನು ಪಡೆದು ಕಾರ್ಯಾತ್ಮಕ ನಳ ಸಂಪರ್ಕ ಪರೀಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದರು.ನಂತರ ತಡಸಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಲಕಿ ಗ್ರಾಮಕ್ಕೆ ಭೇಟಿ ನೀಡಿ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ವಿವರವಾದ ಯೋಜನಾ ವರದಿ ಪ್ರಕಾರ ಕಾಮಗಾರಿ ಆಗಿರುವ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚೆ ಮಾಡಿ ಮಾಹಿತಿಯನ್ನು ಪಡೆದುಕೊಂಡರು. ಕಾರ್ಯಾತ್ಮಕ ನಳ ಸಂಪರ್ಕ ಪರೀಶೀಲಿಸಿ ಬಳಿಕ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ್ಘ ನೈರ್ಮಲ್ಯ ಬೆಳಗಾವಿ ವಿಭಾಗ ಕಿರಣ ಗೋರೆ್ಡ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಆನಂದ ಬಡಕುಂದ್ರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾ.ಕು.ನೀ.್ಘ ನೈರ್ಮಲ್ಯ ಬಿ. ವಿ. ಅಯ್ಯನಗೌಡರ, ತಾ. ಪಂ. ಸಹಾಯಕ ನಿರ್ದೇಶಕ (ಗ್ರಾ.ಉ) ಆರ್. ಬಿ. ರಕ್ಕಸಗಿ, ತಾಪಂ ಸಹಾಯಕ ನಿರ್ದೇಶಕ (ಪಂ.ರಾ) ಶ ಆರ್ ಎ ಪಾಟೀಲ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಹಿದಾ ಮುಲ್ಲಾ, ಗ್ರಾಮ ಪಂಚಾಯತಿ ಅಧ್ಯಕ್ಷ ಸತ್ಯವ್ವ ಗೋರಗುದ್ದಿ ಸೇರಿದಂತೆ ಗ್ರಾ. ಪಂ. ಸದಸ್ಯರು, ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.30 ಯರಗಟ್ಟಿ 01ಪೋಟೋ ಶೀರ್ಷಿಕೆಸೊಪ್ಪಡ್ಲ ಮತ್ತು ತಡಸಲೂರ ಗ್ರಾಮಗಳಿಗೆ ಭೇಟಿ ನೀಡಿ ಜಲಜೀವನ ಮಿಷನ್ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರೀಶೀಲಿಸಿದ ಜಿಲ್ಲಾ ಪಂಚಾಯತ ಸಿಇಓ ರಾಹುಲ್ ಶಿಂಧೆ, ತಾ.ಪಂ.ಇಓ ಆನಂದ ಬಡಕುಂದ್ರಿ, ಗ್ರಾ.ಕು.ನೀ.್ಘ ನೈರ್ಮಲ್ಯ ಬಿ. ವಿ. ಅಯ್ಯನಗೌಡರ, ಪಿಡಿಓ ವಹಿದಾ ಮುಲ್ಲಾ,
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 