ಇಂದು, ನಾಳೆ ಉಚಿತ ಆರೋಗ್ಯ ತಪಾಸಣೆ ಶಿಬಿರ
ಮಹಾಲಿಂಗಪುರ 08: ಪಟ್ಟಣದ ಪುರಸಭೆ ಮಾಜಿ ಉಪಾಧ್ಯಕ್ಷ ಚನಬಸು ಹುರಕಡ್ಲಿ ಅವರ ತಂದೆ, ತಾಯಿಯ ಸ್ಮರಣಾರ್ಥವಾಗಿ ಸಿ.ಎಂ ಹುರಕಡ್ಲಿ ಫೌಂಡೇಶನ್ ವತಿಯಿಂದ ಕಳೆದ 17 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು, ನ.9, 10ರಂದು ಸ್ಥಳೀಯ ಶ್ರೀ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಅಂಗವಿಕಲರಿಗೆ ಕೃತಕ ಕೈ-ಕಾಲು ಜೋಡಣೆ, ಕ್ಯಾಲಿಪರ್ ಬಗಲು ಬಡಿಗೆ ವಿತರಣೆ, ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ, ಅಗ್ನಿಕರ್ಮ, ವಿದ್ದಕರ್ಮ, ಆಯುರ್ವೇದ ಚಿಕಿತ್ಸೆ, ರಕ್ತದಾನ ಶಿಬಿರ, ದಂತ ಚಿಕಿತ್ಸೆ ಶಿಬಿರ,ಕಲರ್ ಥೆರಪಿ ಮತ್ತು ಆಕ್ಯುಪ್ರೇಶರ್ ಶಿಬಿರ, ಕೈ ಕಾಲು ಬೆನ್ನು ನೋವಿಗೆ ಮಸಾಜ್ ಚಿಕಿತ್ಸೆ ಜೊತೆಗೆ 10 ದಿನದ ಚೈತನ್ಯ ವಿಶೇಷ ಯೋಗ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಎಲ್ಲ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥಾಪಕ ಚನ್ನಬಸು ಹುರಕಡ್ಲಿ ತಿಳಿಸಿದ್ದಾರೆ.