ಬೆಳಗಾವಿ 13; ರಾಮತೀರ್ಥ ನಗರದ ಶಿವಾಲಯ ರಸ್ತೆಯಲ್ಲಿ ಪತಂಜಲಿ ಸಮಿತಿ ಹಾಗೂ ಲಿಟಲ್ ಫಾಮ್ಸ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಯೋಗ ಶಿಬಿರ ಸೋಮವಾರ ದಿ. 13ರಂದು ಪ್ರಾರಂಭವಾಯಿತು.
ಶಿಬಿರದಲ್ಲಿ ಮಗನಬಾಯ್, ಪುರುಷೋತ್ತಮ, ಬಾಗೇವಾಡಿ, ಲಕ್ಷ್ಮೀ, ಸಮಿತಾ, ಪ್ರತಿಭಾ, ಜಯಕುಮಾರ ಸೇರಿದಂತೆ ಅಪಾರ ಜನರು ಪಾಲ್ಗೊಂಡಿದ್ದರು.
ಶಿಬಿರವು ಇನ್ನೂ ಏಳು ದಿನಗಳವರೆಗೆ ಜರುಗಲಿದ್ದು, ಆಸಕ್ತರು ಇದರ ಲಾಭ ಪಡೆಯಬಹುದಾಗಿದೆ.