ಕನ್ನೊಳ್ಳಿ ್ಳ ಗ್ರಾಮದ ರೈತರೊಬ್ಬರ ಹೊಲದಲ್ಲಿ ವಿದ್ಯುತ್ ಟಿಸಿ ಸುಟ್ಟಿರುವ ರೈತರು ಪ್ರತಿಭಟನೆ
Farmers protest after electric TC was burnt in a farmer's field in Kannolli village
ಜಮಖಂಡಿ 21: ತಾಲ್ಲೂಕಿನ ಕನ್ನೊಳ್ಳಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ವಿದ್ಯುತ್ ಟಿಸಿ ಸುಟ್ಟಿರುವ ಹಿನ್ನೆಲೆಯಲ್ಲಿ ಹೊಸ ಟಿಸಿ ಅಳವಡಿಸಿದೆ ಇರುವ ಕಾರಣ ಕೆ,ಇ,ಬಿ ಕಚೇರಿಗೆ ಬೀಗವನ್ನು ಜಡಿದ್ದು ರೈತರು ಪ್ರತಿಭಟನೆಯನ್ನು ನಡೆಸಿದರು.
ನಗರದ ಕೆಇಬಿ ವಿದ್ಯುತ್ ಇಲಾಖೆಯ ಮುಖ್ಯ ದ್ವಾರಬಾಗಿಲಿಗೆ ಬೀಗವನ್ನು ಜಡಿದ ಪ್ರತಿಭಟನೆಯನ್ನು ನಡೆಸಿದ ರೈತರು, ಕನ್ನೊಳ್ಳಿ ಗ್ರಾಮದ ರೈತ ಸುಭಾಸ ಶಿಂಧೆ ಅವರ ಹೊಲದಲ್ಲಿ ಇರುವ ವಿದ್ಯುತ್ ಟಿಸಿ ಸುಟ್ಟು ಒಂದು ವಾರ ಗತ್ತಿಸಿದ್ದರು ಸಹ ಜಮಖಂಡಿ ಕೆಇಬಿ ಇಲಾಖೆಯ ಅಧಿಕಾರಿಗಳು ಹೊಸ ಟಿಸಿ ಅಳವಡಿಸದೆ ಹಾರಿಕೆ ಉತ್ತರ ನೀಡುತ್ತಾ ಇದ್ದಾರೆ. ಇಲ್ಲಿನ ಕೆಲವಂದಿಷ್ಟು ಅಧಿಕಾರಿಗಳು ಹಣವನ್ನು ಯಾರು ಕೊಡುತ್ತಾರೆ ಅವರ ಕೆಲಸವನ್ನು ಬೇಗನೆ ಮಾಡುತ್ತಾರೆ ಹೀಗಾಗಿ ಲಂಚದ ಬೇಡಿಕೆಯನ್ನು ಇಡುತ್ತಾರೆ ಎಂದು ಆರೋಪಿಸಿದರು.
ಇಲ್ಲಿನ ಅಧಿಕಾರಿಗಳು ಕನ್ನೋಳ್ಳಿ ಗ್ರಾಮದ ಹೊಲದಲ್ಲಿ ಹೊಸ ಟಿಸಿಯನ್ನು ಅಳವಡಿಸಿದೆ ಇದ್ದರೆ. ಕೆಇಬಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮೇತ ಬೀಗ್ ಜಡಿದ್ದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಈರ್ಪ ಹಂಚಿನಾಳ, ಶ್ರೀಶೈಲ ಭೂಮಾರ, ಹನುಮಂತ ಮಗದುಮ, ಸುಭಾಸ ಶಿಂಧೆ, ರಾಜು ನಧಾಪ, ಧರೇಪ್ಪ ದಾನಗೌಡ, ಕರೇಪ್ಪ ಜೀರಗಾಳ, ಕಲ್ಲಪ್ಪ ಬಿರಾದಾರ, ಬಸವರಾಜ ನ್ಯಾಮಗೌಡ, ಯಲ್ಲಪ್ಪ ಬಿರಾದರ, ಸಿದ್ದಪ್ಪ ಬನಜ್ಜನ್ನವರ, ಗುರುನಾಥ ಕೋರಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
]
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 