ಮತದಾನದ ಹಕ್ಕು ಚಲಾಯಿಸಿ: ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್

ಬಳ್ಳಾರಿ,06: ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ 07 ರಂದು ನಡೆಯಲಿರುವ ಮತದಾನ ದಿನದಂದು, ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಹೇಳಿದರು. 

ಕಂಪ್ಲಿ ತಾಲೂಕಿನ  ಸುಗ್ಗೆನಹಳ್ಳಿ ಹಾಗೂ ಮೆಟ್ರಿ  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮದಲಿಂಗ  ಕೆರೆ ನಿರ್ಮಾಣ  ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಿ ಮಾತನಾಡಿದರು. 

ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಪ್ರತಿಯೊಬ್ಬರು ವಿವೇಚನೆಯಿಂದ ಮತಚಲಾಯಿಸಬೇಕು.  ಮತದಾನ ಪ್ರಕ್ರಿಯೆಯಿಂದ ಯಾರು ಸಹ ದೂರ ಉಳಿಯಬಾರದು. ಯಾರೇ ಇರಲಿ ಎಲ್ಲರ ಮತಕ್ಕೂ ಒಂದೇ ಮೌಲ್ಯ ಇರುತ್ತದೆ. ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ನೆರೆದಿದ್ದ ಎಲ್ಲರೂ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ವಿನೋದ್, ಕಂಪ್ಲಿ ತಾಪಂ ಇಓ ಆರ್‌.ಕೆ.ಶ್ರೀಕುಮಾರ್,  ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ, ಪಿಡಿಓ ಶ್ರೀಶೈಲ ಗೌಡ, ಕೆ.ಹನುಮಂತಪ್ಪ, ಟಿಸಿ ಸಂಗಮೇಶ, ಟಿಐಇಸಿ ಹನುಮೇಶ್ ಹಾಗಲೂರು ಹೊಸಳ್ಳಿ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಕೂಲಿಕಾರ್ಮಿಕರು ಹಾಜರಿದ್ದರು.