ಪ್ರತಿಯೊಬ್ಬರು ಕರಾಟೆ ಕಲಿಯುವುದು ಅತ್ಯವಶ್ಯ: ಪಾಟೀಲ

ಲೋಕದರ್ಶನ ವರದಿ

ಶೇಡಬಾಳ 07: ಮುಪ್ಪಿನಾವಸ್ಥೆ, ಮಧ್ಯ ವಯಸ್ಕರಾದ ಮೇಲೆ ಬೊಜ್ಜು ಕರಗಿಸುವಗೋಸ್ಕರ ವ್ಯಾಯಾಮ ಮಾಡುವುದರ ಬದಲಾಗಿ ಬಾಲ್ಯದಲ್ಲಿ ವಿದ್ಯಾರ್ಥಿ ಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಹಾಗೂ ಶರೀರವನ್ನು ಸದೃಢಗೊಳಿಸುವಂತೆ ಮಾಲಗಾಂವದ ಶಿಕ್ಷಣ ಮಂಡಳದ ಪ್ರಾಚಾರ್ಯ ವಿಜಯಕುಮಾರ ಪಾಟೀಲ ಕರೆ ನೀಡಿದರು.

ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಮಾಲಗಾಂವ ಗ್ರಾಮದಲ್ಲಿ ರವಿವಾರ ದಿ. 6ರಂದು ಬೆಳಗಾವಿ ಜಿಲ್ಲಾ ರಾಣಿ ಚೆನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋಟ್ಸ್ ಅಸೋಸಿಯೆಶನ್ ಆಯೋಜಿಸಿದ್ದ ಕರಾಟೆ ಸ್ಪರ್ಧೆ  ಮತ್ತು ಬೆಲ್ಟ್ ವಿತರಣೆ 

ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಇಂದಿನ ದಿನಮಾನಗಳಲ್ಲಿ ಮನೆಯಿಂದ ಹೊರಗೆ ಹೋದ ವಿದ್ಯಾರ್ಥಿನಿಯರು, ಮಹಿಳೆಯರು ಸುರಕ್ಷಿತವಾಗಿ ಮನೆಗೆ ಬರುತ್ತಾರೆಂಬ ನಂಬಿಕೆ ಪಾಲಕರಲ್ಲಿ ಇಲ್ಲದಂತಾಗಿದೆ. ದಿನಾಲು ಜೀವಹಾನಿ, ಮಾನಹಾನಿ, ಅತ್ಯಾಚಾರ ಪ್ರಕರಣಗಳು ಜರುಗುತ್ತಲೇ ಇವೆ. ಇವೆಲ್ಲದರಿಂದ ತಮ್ಮ ಪ್ರಾಣ ಹಾಗೂ ಮಾನ ರಕ್ಷಣೆ ಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರು ಕರಾಟೆ ಕಲಿಯುವುದು ಅತ್ಯವಶ್ಯವಾಗಿದೆ ಎಂದು ಅವರು ಹೇಳಿದರು. 

 ಬೆಳಗಾವಿ ಜಿಲ್ಲಾ ರಾಣಿ ಚೆನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋಟ್ಸ್ಅಸೋಸಿಯೆಶನ್ ಸಂಸ್ಥಾಪಕ ಜುಗೂಳದ ರಾಜು ಪಾಟೀಲ ಮಾತನಾಡುತ್ತಾ ವಿದ್ಯಾರ್ಥಿ- ವಿದ್ಯಾಥರ್ಿನಿಯರು ಕ್ರೀಡಾಕೂಟಗಳಲ್ಲಿ ಭಾಗವಹಿಸುವದರಿಂದ ಶಾರೀರಿಕವಾಗಿ ಸದೃಢವಾಗುವುದರ ಜತೆಗೆ ಮಾನಸಿಕವಾಗಿಯೂ ಸದೃಢವಾಗಿರುತ್ತಾರೆ. ಮಹಿಳೆಯರು ತಮ್ಮ ಮಾನ, ಪ್ರಾಣ ರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯವಾಗಿದೆ. ಅದೇ ಕಾರಣದಿಂದ ಗ್ರಾಮೀಣ ವಿದ್ಯಾರ್ಥಿನಿಯರಿಗಾಗಿ ಗ್ರಾಮೀಣ ಭಾಗದಲ್ಲಿ ಕರಾಟೆ ಟ್ರೇನಿಂಗ್ ಸ್ಕೂಲ್ ಪ್ರಾರಂಭಿಸಲಾಗಿದೆ. ಅದರಂತೆ ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿಯೂ ನಮ್ಮ ಸಂಸ್ಥೆಯು ನೂತನವಾಗಿ ಕರಾಟೆ ಟ್ರೇನಿಂಗ್ ಸ್ಕೂಲ್ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದು, ಇದರ ಸದುಪಯೋಗವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಹೇಳಿದರು.


***ಕರಾಟೆ ಸ್ಪರ್ಧೆಯಲ್ಲಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಕಿರಿ ವಯಸ್ಸಿನ 8 ವರ್ಷದ ಉಗಾರ ಬುದ್ರುಕ ಗ್ರಾಮದ ಸಂದೇಶ ಜೂಜಗಾಂವ ಇತನು ಉಗಾರ ಖುರ್ದ ಪಟ್ಟಣದಲ್ಲಿರುವ ಕರಾಟೆ ಟ್ರೇನಿಂಗ್ ಸ್ಕೂಲ್ನಲ್ಲಿ ತರಬೇತಿ ಪಡೆಯುತ್ತಿದ್ದು, ಈಗಾಗಲೇ 5 ಬೆಲ್ಟ್ಗಳನ್ನು ಪಡೆದುಕೊಂಡು ಇಂದು ಬ್ರೌನ್ ಥರ್ಡ ಬೆಲ್ಟ್ ಪಡೆದು ವಿಶೇಷ ಸಾಧನೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಇತನ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ರಾಜು ಪಾಟೀಲ, ಅನಿಲ ಭಜಂತ್ರಿ, ರೋಹಿತ ಮಾಳಿ, ಪ್ರಜ್ವಲ ಘಟಕಾಂಬಳೆ, ಇನ್ನಿತರ ಸನ್ಸೈ, ಸಂಪಾಯಿಗಳು ಸಂದೇಶ ಜೂಜಗಾಂವ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೆರೆದ ಅತಿಥಿ, ಗಣ್ಯಮಾನ್ಯರ ಮುಂದೆ ಕರಾಟೆ ಪಟುಗಳು ತಮ್ಮ ಕರಾಟೆ ಪ್ರತಿಭೆಯನ್ನು ಪ್ರದರ್ಶಿಸಿ ನೆರೆದ ಜನಸ್ತೋಮವನ್ನು ಮಂತ್ರಮುಗ್ಧಗೊಳಿಸಿದರು.

ಶಿಕ್ಷಣ ಮಂಡಳದ ಪ್ರಾಚಾರ್ಯ ವಿಜಯಕುಮಾರ ಪಾಟೀಲ, ಶೈಕ್ಷಣಿಕ ಮಂಡಳ ಸಂಚಾಲಕ ಅಶೋಕ ಪಾಟೀಲ, ಬಸವೇಶ್ವರ ಕೋಲೆ, ಸಾಮಾಜಿಕ ಕಾರ್ಯಕರ್ತ ಮಯೂರ ನಾಯ್ಕೋಡೆ, ಯುವ ಉದ್ಯಮಿ ಪ್ರಕಾಶ ಮಹಾಜನ, ನಿರ್ದೇಶಕ ಅನಿಲ ಭಜಂತ್ರಿ, ಕಿರಣ ಭಜಂತ್ರಿ, ರೋಹಿತ ಮಾಳಿ, ಕುಮಾರ ಭಜಂತ್ರಿ, ಅಭಿಷೇಕ ಅನೂರೆ, ದೀಪಕ ಪಾಟೀಲ, ಪ್ರೀಯಂಕಾ ಪಾಟೀಲ, ಪ್ರಶಾಂತ ಅಗಸರ, ಪ್ರಜ್ವಲ ಘಟಕಾಂಬಳೆ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು, ಕರಾಟೆ ಪಟುಗಳು ಅಪಾರ ಸಂಖ್ಯೆಯಲ್ಲಿ ಇದ್ದರು.

ಶ್ರಾವಣಿ ಜಾಧವ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು