ವೈದ್ಯರ ದಿನಾಚರಣೆ ಅಂಗವಾಗಿ ಡಾ. ಟಿ.ಎಚ್‌. ಮುಲ್ಲಾಗೆ ಸನ್ಮಾನ

ವೈದ್ಯರ ದಿನಾಚರಣೆ ಅಂಗವಾಗಿ ಡಾ. ಟಿ.ಎಚ್‌. ಮುಲ್ಲಾಗೆ ಸನ್ಮಾನ Dr. T.H. Mulla felicitated on the occasion of Doctors' Day

 ಕೊಪ್ಪಳ, ಜು. 3: ವೈದ್ಯರ ದಿನಾಚರಣೆ ಅಂಗವಾಗಿ ಕೊಪ್ಪಳದ ಹಿರಿಯ ವೈದ್ಯರು ಹಾಗೂ ನಿವೃತ್ತ ಡಿಎಚ್‌ಒ ಡಾ. ಟಿ.ಎಚ್‌. ಮುಲ್ಲಾ ಅವರನ್ನು ಜಿಲ್ಲೆಯ ಯಲಬುರ್ಗಾ ಭಾಗದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿ ಶುಭಾಶಯ ಕೋರಿದರು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಟಿ.ಎಚ್‌. ಮುಲ್ಲಾ, ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ನಿವಾಸಕ್ಕೆ ಆಗಮಿಸಿ ಗೌರವ ಸಲ್ಲಿಸಿದ ಯಲಬುರ್ಗಾ ಭಾಗದ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.