ಬೆಳಗಾವಿ, 8: ನಾಗನೂರು ರುದ್ರಾಕ್ಷಿ ಮಠಕ್ಕೆ ಉತ್ತರಾಧಿಕಾರಿಯಾಗಿ ಜಮಖಂಡಿ ತಾಲೂಕಿನ ತುಬಚಿಯ ಶಿವಲಿಂಗೇಶ್ವರ ಮಠದ ಡಾ:ಸಾವಳಗೀಶ್ವರ ದೇವರನ್ನು ಆಯ್ಕೆ ಮಾಡಲಾಗಿದೆ ಎಂದು ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು ತಿಳಿಸಿದರು.
ಪತ್ರಿಕಾ ಪರಿಷತ್ತಿನಲ್ಲಿಂದು ಮಾತನಾಡಿದ ಅವರು ಡಾ:ಸಿದ್ಧರಾಮ ಸ್ವಾಮಿಜಿ ಅವರು ಗದುಗಿನ ಮಠಕ್ಕೆ ಪೀಠಾಧಿಕಾರಿಗಳಾಗಿ ನೇಮಕವಾಗುವುದಕ್ಕಿನ್ನ ಮುಂಚೆಯೆ ನಾಗನೂರು ಮಠಕ್ಕೆ ಉತ್ತರಾಧಿಕಾರಿಗಳ ಆಯ್ಕೆಗಾಗಿ ಮಠದ ಭಕ್ತರ ಸಮೀತಿಯೊಂದನ್ನು ನೇಮಕ ಮಾಡಿದ್ದರು, ಉತ್ತರಾಧಿಕಾರಿ ಆಯ್ಕೆಯಾಗುವ ಮುನ್ನವೇ ಗದುಗಿನ ಶ್ರೀಗಳು ಲಿಂಗೈಕ್ಯರಾಗಿ ಅನಿರೀಕ್ಷಿತವಾಗಿ ಡಾ:ಸಿದ್ಧರಾಮ ಸ್ವಾಮಿಜಿ ಅವರು ಗದುಗಿನ ಮಠಕ್ಕೆ ನೇಮಕವಾದರು ಎಂದು ಶ್ರೀಗಳು ವಿವರಿಸಿದರು.
ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು ,ಶಾಸಕ ಮಹಾಂತೇಶ ಕೌಜಲಗಿ, ಮಠದ ಕಾರ್ಯದಶರ್ಿ ಶಿವಕುಮಾರ ಸಂಬರಗಿ, ಎಂ.ಆರ್.ಉಳ್ಳೆಗಡ್ಡಿ, ಡಾ:ಎಚ್.ಬಿ ರಾಜಶೇಖರ, ಡಾ.ಏಫ್.ವಿ.ಮಾನವಿ, ಬಿ.ಬಿ.ವಣ್ಣೂರ, ಉಮೇಶ ಪಾಟೀಲ, ಡಿ.ಎಂ.ಪಾಟೀಲ, ಚನಬಸಪ್ಪ ತಲ್ಲೂರ,ಎಸ್.ಡಿ.ಗಾಡವಿ,ಶ್ರೀಮತಿ ರತ್ನಪ್ರಭಾ ಬೆಲ್ಲದ, ಮುಂತಾದ 13 ಜನರ ಸಮಿತಿಯೊಂದನ್ನು ನೇಮಕ ಮಾಡಲಾಗಿತ್ತು.ಈ ಸಮೀತಿಯು ಈ ಭಾಗದ ವಿವಿಧ ಪ್ರದೇಶಗಳಲ್ಲಿನ ಮಠಗಳಿಗೆ ಭೇಟಿ ನೀಡಿ ಸಾವಳಗೀಶ್ವರ ದೇವರ ಪೂವರ್ಾಶ್ರಮದ ತಂದೆ ತಾಯಿಗಳು,ಗ್ರಾಮದ ಹಿರಿಯರ ಒಪ್ಪಿಗೆಯನ್ನು ಪಡೆದ ನಂತರ ಅತ್ಯಂತ ಸಮರ್ಥ ಉತ್ತರಾಧಿಕಾರಿಗಳನ್ನು ಆಯ್ಕ ಮಾಡಲಾಗಿದೆ ಎಂದವರು ವಿವರಿಸಿದರು.
ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರು 30 ವರ್ಷಗಳ ಹಿಂದೆ ನಾಗನೂರು ಮಠಕ್ಕೆ ಡಾ:ಸಿದ್ಧರಾಮ ಶ್ರೀಗಳು ಅಂದು ಉತ್ತರಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.ಈಗ ಅವರು ಇಚ್ಛೆಯಂತಯೆ ಯಾವೂದೇ ಒತ್ತಡ,ಒತ್ತಾಯವಿಲ್ಲದ ಆಯ್ಕೆ ಇದಾಗಿದ್ದು ಡಾ:ಸಿದ್ಧರಾಮ ಶ್ರೀಗಳಿಗೆ ಎರಡೂ ಮಠಗಳನ್ನು ಸಂಭಾಳಿಸುವದು ಕಷ್ಟವಾಗಿದ್ದರಿಂದಾಗಿ ಈ ಆಯ್ಕೆಯನ್ನು ತಡಮಾಡದೇ ಮಾಡಲಾಗಿದೆ ಎಂದು ವಿವರಿಸಿದರು.
ನಾಗನೂರು ರುದ್ರಾಕ್ಷಿ ಮಠಕ್ಕೆ ಉತ್ತರಾಧಿಕಾರಿಯಗಿ ತುಬಚಿ ಶಿವಲಿಂಗೇಶ್ವರ ಮಠದ ಡಾ:ಸಾವಳಗೀಶ್ವರ ದೇವರು ನಾಗನೂರು ರುದ್ರಾಕ್ಷಿ ಮಠದ ಬೆಳಗಾವಿಯ ಕುಮಾರೇಶ್ವರ ಪ್ರಸಾದ ನಿಲಯದಲ್ಲಿ ಮತ್ತು ತುಬಚಿಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದಾರೆ.ತಂದೆ ಬಸಯ್ಯ ಮತ್ತು ತಾಯಿ ವಿಜಯಲಕ್ಷ್ಮೀ,ಇವರ ಜನ್ಮವಾಗಿದ್ದು 1987 ರ ಅಕ್ಟೋಬರ 2 ರಂದು. ಶಿವಯೋಗಮಂದಿರದಲ್ಲಿ 1999 ರಿಂದ 2003 ರವರೆಗೆ ಮಾಧ್ಯಮಿಕ ಹಾಗೂ ಧಾಮರ್ಿಕ ಶಿಕ್ಷಣ ಪಡೆದರು. 2004 ರಿಂದ 2009 ರವರೆಗೆ ಧಾರವಾಡದ ಕನರ್ಾಟಕ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ, 2012 ರಲ್ಲಿ ಕನರ್ಾಟಕ ವಿಶ್ವ ವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕ ಪದವಿ (ಚಿನ್ನದ ಪದಕ ವಿಜೇತರು),2019 ರಲ್ಲಿ "ಬಸವಣ್ಣ ಮತ್ತು ಮಾಟರ್ಿನ ಲೂಥರ ಚಿಂತನೆಗಳ ತೌಲನಿಕ ಅಧ್ಯಯನ" ಎಂಬ ವಿಷಯದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಪಡೆದರು.ಕಳೆದ 15 ವರ್ಷಗಳಿಂದ ನಾಗನೂರು ರುದ್ರಾಕ್ಷಿ ಮಠದಲ್ಲಿದ್ದುಕೊಂಡು ಸೇವಾಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ.
ಪತ್ರಿಕಾ ಪರಿಷತ್ತಿನಲ್ಲಿ ಶಾಸಕ ಮಹಾಂತೇಶ ಕೌಜಲಗಿ,ಮಠದ ಕಾರ್ಯದಶರ್ಿ ಶಿವಕುಮಾರ ಸಂಬರಗಿ, ಡಾ.ಏಫ್.ವಿ.ಮಾನವಿ, ಬಿ.ಬಿ.ವಣ್ಣೂರ, ಉಮೇಶ ಪಾಟೀಲ ,ರತ್ನಪ್ರಭಾ ಬೆಲ್ಲದ,ಮುಂತಾದವರು ಉಪಸ್ಥಿತರಿದ್ದರು.
ಬಸವಾದಿ ಶರಣರ ತತ್ತ್ವಾದರ್ಶಗಳ ನಿರಂತರ ಬೋಧನೆ. ಧಾಮರ್ಿಕ ಸಂಸ್ಕಾರ ಶಿಬಿರಗಳ ಸಂಯೋಜನೆ. ಕಳೆದ 15 ವರ್ಷಗಳಿಂದ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಸಾಧಕರಾಗಿದ್ದುಕೊಂಡು ಶ್ರೀಮಠದ ಸೇವಾಕಾರ್ಯಗಳಲ್ಲಿ ಸಹಭಾಗಿ.ಜಮಖಂಡಿ ತಾಲೂಕ ತುಬಚಿ ಗ್ರಾಮದ ಶಿವಲಿಂಗೇಶ್ವರಮಠದ ಜೀಣರ್ೋದ್ಧಾರ ಹಾಗು ಧಾಮರ್ಿಕ ಆಚರಣೆಗಳ ನಿರ್ವಹಣೆ. ಸ್ವಭಾವತಃ ನಿರಹಂಕಾರಿ, ನಿಗವರ್ಿ, ಸಮಾಜಪ್ರೇಮಿ, ಸೇವಾಮನೋಭಾವಿ ಸದ್ಗುಣಿ-ಸದಾಚಾರಿ.ಬಸವಾದಿ ಶರಣರ ವಚನ ಸಾಹಿತ್ಯ ಹಾಗು ಇತರ ಧರ್ಮಗ್ರಂಥಗಳ ಅಧ್ಯಯನ ಮಾಡಿದವರು.
ಕ್ರಿಯಾಶೀಲರು, ವೈಚಾರಿಕ ಪ್ರಜ್ಞೆ ಹಾಗು ವೈಜ್ಞಾನಿಕ ಮನೋಭಾವವುಳ್ಳವರು. ದಕ್ಷತೆ ಹಾಗು ಕರ್ತವ್ಯ ನಿಷ್ಠೆಯನ್ನು ಮೈಗೂಡಿಸಿಕೊಂಡವರು. ಾಡಿನ ಅನೇಕ ಹಿರಿಯ ಮಹಾಸ್ವಾಮಿಗಳವರ ಪ್ರೀತ್ಯಾದರಗಳನ್ನು ಸಂಪಾದಿಸಿದವರು.ಉತ್ತಮ ನಡೆ-ನುಡಿ, ಚಾರಿತ್ರ್ಯಶೀಲತೆಯಿಂದಾಗಿ ಒಳ್ಳೆಯ ಮಠಾಧಿಪತಿಯಾಗುವ ಭರವಸೆಯ ಯುವಯತಿಗಳು.