ಪ್ರಯತ್ನ ಸಂಘದವರಿಂದ ಅನಾಥಾಶ್ರಮದ ಮಕ್ಕಳಿಗೆ ದೇಣಿಗೆ

ಲೋಕದರ್ಶನವರದಿ

ಬೆಳಗಾವಿ22: ನಗರದ ಪ್ರಯತ್ನ ಸಂಘದ ಅಧ್ಯಕ್ಷೆ ಶಾಂತಾ ಆಚಾರ್ಯ ಹಾಗೂ ಎಲ್ಲ ಸದಸ್ಯೆಯರೆಲ್ಲ ಕೂಡಿಕೊಂಡು ಹಿಂದವಾಡಿಯಲ್ಲಿರುವ ಕುಟುಂಬ ಕಲ್ಯಾಣ ಕೇಂದ್ರಕ್ಕೆ ಇದೇ ದಿ. 20 ಶನಿವಾರದಂದು ದೇಣಿಗೆ ನೀಡಿದರು. ಕುಟುಂಬ  ಕಲ್ಯಾಣ ಕೇಂದ್ರಕ್ಕೆ ಐದು ಹತ್ತಿಗಾದೆಗಳನ್ನು ಹಾಗೂ ಇಪ್ಪತ್ತು ತಲೆದಿಂಬು, ಬೆಡ್ಶೀಟ್,  ಹೊದ್ದುಕೊಳ್ಳಲು ಚಾದರಗಲ್ಲದೆ 15 ಕೆ.ಜಿ. ಸಕ್ಕರೆ, 5 ಲೀಟರ್ ಹಾಲು ಹೀಗೆ ಒಟ್ಟು ರೂ. 20,000 ಬೆಲೆ ಬಾಳುವ ವಸ್ತುಗಳನ್ನು ದೇಣಿಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಯತ್ನ ಸಂಘದ ಅಧ್ಯಕ್ಷೆ ಶಾಂತಾ ಆಚಾರ್ಯ ಮಾತನಾಡಿ ಪ್ರಯತ್ನ ಸಂಘ ಪ್ರಾರಂಭವಾಗಿ ಎಂಟು ವರ್ಷಗಳಾದವು. ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬಂದಿದ್ದೇವೆ. ನಮ್ಮ ಸಂಘದಿಂದ ಆನಾಥಾಶ್ರಮದ ಮಕ್ಕಳಿಗೆ, ವೃದ್ಧಾಶ್ರಮಗಳಿಗೆ ಭೇಟಿನೀಡಿ ಹಾಗೂ ಶಾಲೆಗಳಲ್ಲಿರುವ ಬಡ ಮಕ್ಕಳನ್ನು ಗುರುತಿಸಿ ಅವರವರ ಅವಶ್ಯಕತೆಗಳ ವಸ್ತುಗಳನ್ನು ನಮ್ಮದೇ ಆದ ಹಣಕಾಸಿನ ಮಿತಿಯಲ್ಲಿ ನೀಡುತ್ತ ಬಂದಿದ್ದೆ. ಈ ಕಾರ್ಯವನ್ನು ನಾವು ನಿರಂತರವಾಗಿ ನಡೆಯಿಸಿಕೊಮಡು ಹೋಗುವುದಾಗಿ ಅವರು ಹೇಳಿದರು.

ಕುಟುಂಬ ಕಲ್ಯಾಣ ಕೇಂದ್ರದ ಉಪಾಧ್ಯಕ್ಷೆ  ಶೋಭಾ ಕುಲಕಣರ್ಿಯವರು ಮಾತನಾಡಿ ಬಡವರಿಗಾಗಿಯೇ ಹಲವಾರು ಸವಲತ್ತುಗಳಿವೆ ಜನರ ಅವುಗಳ ಕುರಿತಂತೆ ತಿಳಿವಳಿಕೆ ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕೆಂದ ಕೇಳಿಕೊಂಡರು.

ಕುಟುಂಬ ಕಲ್ಯಾಣ ಕೇಂದ್ರದ ಅಧ್ಯಕ್ಷರಾದ ಅನಿತಾ ಪಾಗಾದ ಅಲ್ಲದೇ ಪ್ರಯತ್ನ ಸಂಘದ ಗೌರಿ ಸರಣೋಬತ್, ಹೇಮಾ ಮುತಾಲಿಕ ದೇಸಾಯಿ, ಪದ್ಮಾ, ವೀಣಾ ಹಾಗೂ ಎಲ್ಲ ಸದಸ್ಯರೂ ಹಾಗೂ ರವಿ ಆಚಾರ್ಯ, ವೆಂಕಟೇಶ ಸರಣೋಬತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.