ಎಂಎಲ್‌ಎ ಹೇಳಿದ್ದು ಕೇಳ್ಬೇಡಿ, ನಮ್ಮಲ್ಲಿ ಯಾವ ಗೊಂದಲವಿಲ್ಲ
Don't listen to what the MLA said, we have no confusion
ಮೈಸೂರು: ಅಧಿಕಾರ ಹಂಚಿಕೆ ವಿಚಾರ ಊಹಾಪೋಹಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ಮಾಧ್ಯಮದವರು ಮಾತ್ರ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ, ಯಾವ ಸಮಸ್ಯೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿದರು. ತಮಿಳುನಾಡು ಪ್ರವಾಸ ಹೊರಟ ರಾಹುಲ್ ಗಾಂಧಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಬಳಿಕ ಬೀಳ್ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾರೋ ಶಾಸಕರು ಏನೂ ಗೊತ್ತಿಲ್ಲದೆ ಏನೋ ಹೇಳುತ್ತಾರೆ. ಮಾತನಾಡಬೇಕಿರುವುದು ನಾನು ಮತ್ತು ಡಿ ಕೆ ಶಿವಕುಮಾರ್. ಅವರು ಏನಾದರೂ ಮಾತನಾಡಿದ್ದಾರಾ? ನಾನೇನಾದರು ಮಾತನಾಡಿದ್ದೇನಾ? ಯಾರೋ ಮಾಹಿತಿ ಇಲ್ಲದ ಎಂಎಲ್ಎಗಳು ಹೇಳಿದ್ದನ್ನು ಕೇಳಿದರೆ ಹೇಗೆ. ನಮ್ಮಲ್ಲಿ ಯಾವ ಗೊಂದಲಗಳು ಇಲ್ಲ. ಯಾವ ಬೇರೆ ರೀತಿಯ ಚರ್ಚೆಗಳು ಇಲ್ಲ. ಇರುವುದೆಲ್ಲ ಮಾಧ್ಯಮಗಳಲ್ಲಿ ಎಂದರು.
ಖರ್ಗೆ ಜೊತೆ ಮಾತನಾಡಿದ್ದೇನೆ. ಡಿ ಕೆ ಶಿವಕುಮಾರ್ ಜೊತೆಯಲ್ಲೂ ಮಾತನಾಡಿದ್ದೇನೆ. ಎಲ್ಲೂ ಯಾವತ್ತೂ ಯಾರ ಅಪಸ್ವರಗಳು ಇಲ್ಲ, ಯಾವ ಸಮಸ್ಯೆಗಳಿಲ್ಲ. ಏನೇ ತೀರ್ಮಾನಗಳಿದ್ದರೂ ಅದನ್ನು ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾನು ಮತ್ತು ಡಿ ಕೆ ಶಿವಕುಮಾರ್ ಬದ್ದ ಎಂದು ಹೇಳಿದ್ದೇವೆ. ಸದ್ಯಕ್ಕೆ ನಾನೇನು ದೆಹಲಿಗೆ ಹೋಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾರ್ಚ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಬಜೆಟ್ ಮಂಡಿಸುತ್ತೇನೆ. ಅದಕ್ಕೆ ಎಲ್ಲಾ ತಯಾರಿಗಳು ನಡೆದಿದೆ ಎಂದ ಸಿಎಂ ಸಿದ್ದರಾಮಯ್ಯ, ಬಜೆಟ್ ಮಂಡನೆಗೂ ಮುನ್ನವೇ ಸರ್ಕಾರದ ಸಾಧನಾ ಸಮಾವೇಶವನ್ನು ಮಾಡುತ್ತೇವೆ. ಫೆಬ್ರವರಿ 13 ರಂದು ಹಾವೇರಿಯಲ್ಲಿ ಸಮಾವೇಶ ಮಾಡಲು ತಯಾರಿ ನಡೆಯುತ್ತಿದೆ ಎಂದರು.
ವಿಶೇಷ ಅಧಿವೇಶನ ಕರೆಯುವ ಬಗ್ಗೆ ನಾಳೆ ತೀರ್ಮಾನ ಮಾಡುತ್ತೇವೆ. ನಾಳೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಅಧಿವೇಶನದ ದಿನಾಂಕದ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.
ಎಚ್ ಡಿ ಕುಮಾರಸ್ವಾಮಿ ಇತ್ತೀಚೆಗೆ ಮತ್ತೆ ಸಕ್ರಿಯರಾಗಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿಗೆ ಆರೋಗ್ಯ ಸುಧಾರಿಸಲಿ. ಅವರಿಗೆ ಹುಷಾರಿಲ್ಲ ಎಂದು ಕೇಳಿದೆ. ಈಗ ಅವರು ಹುಷಾರಿಗಿದ್ದಾರೆ. ಕುಮಾರಸ್ವಾಮಿ ಏನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಿಲ್ಲ. ನೀವೇ ಮಾಧ್ಯಮದವರು ಅವರ ಹಾವಭಾವ ನೋಡಿ ಮಾತಿನ ಏರಿಳಿತ ನೋಡಿ ಹೇಳುತ್ತಿದ್ದೀರಾ. ಆ ರೀತಿಯಾಗಿ ಹಾವ ಭಾವದ ಮೇಲೆ ಎಲ್ಲಾ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು.
ನಾವು ಪಾಲಿಕೆ ಚುನಾವಣೆಗೆ ಸಿದ್ದರಾಗಿದ್ದೇವೆ. ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿದರೂ ನಮಗೆ ಸಮಸ್ಯೆ ಇಲ್ಲ. ಇರುವುದು ಎರಡೇ, ಒಂದು ಕಾಂಗ್ರೆಸ್ ಮತ; ಮತ್ತೊಂದು ಕಾಂಗ್ರೆಸ್ ವಿರೋಧಿ ಮತ. ಇಲ್ಲಿ ಜೆಡಿಎಸ್ ಮತ ಬೇರೆ ಬಿಜೆಪಿ ಮತ ಬೇರೆ ಎಂದಿರುವುದಿಲ್ಲ. ಎರಡು ಪಕ್ಷದ ಮತಗಳು ಒಂದೇ ಅಭ್ಯರ್ಥಿಗೆ ಬಿದ್ದರೆ ಕಾಂಗ್ರೆಸ್ ಗೆ ಸಮಸ್ಯೆಯಾಗುತ್ತದೆ ಎಂಬುದು ತಪ್ಪು ಅಭಿಪ್ರಾಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 