ನಿತ್ಯ ನಿಮ್ಮ ಕರ್ತವ್ಯವನ್ನು ನೀವು ಸರಿಯಾಗಿ ಮಾಡಿ: ಶಾಸಕ ಸಿದ್ದು ಸವದಿ
Do your duty properly every day: MLA Siddu Savadi
ಮಹಾಲಿಂಗಪುರ 31: ನಿತ್ಯವೂ ಎಲ್ಲ ವಾರ್ಡಗಳಲ್ಲಿನ ಮೂಲ ಭೂತ ಸೌಕರ್ಯಗಳು ಎಲ್ಲರಿಗೂ ತಲುಪುತ್ತಿವೇಯೇ ಎಂದು ಪುರಸಭೆಯ 2-3 ಸಿಬ್ಬಂದಿಗಳನ್ನು ವಾರ್ಡಗಳಲ್ಲಿ ತಿರುಗಾಡಿಸಿ ಗಮನ ಹರಿಸಬೇಕು ಎಂದು ತೇರದಾಳ ಮತ ಕ್ಷೇತ್ರ ಶಾಸಕರಾದ ಸಿದ್ದು ಸವದಿ ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
ಬುಧವಾರ ಮುಂಜಾನೆ ಪುರಸಭೆಯಲ್ಲಿ ಎಲ್ಲ ಸಿಬ್ಬಂದಿಗಳ ಸಭೆ ಕರೆದು ಮಾತನಾಡಿದ ಅವರು ಪುರಸಭೆಯ ಎಲ್ಲ ಸಿಬ್ಬಂದಿಗಳು ನೀವು ನಾನು ಹೇಳಿದಾಗ ಮಾತ್ರ ನಿಮ್ಮ ಕೆಲಸಗಳನ್ನು ಮಾಡದೆ ನಿತ್ಯವು ನಿಮ್ಮ ನಿಮ್ಮ ಕರ್ತವ್ಯೆಗಳನ್ನು ಸರಿಯಾಗಿ ಮಾಡಿದರೆ ಸಾಕು ಪಟ್ಟಣ ಅಂದವಾಗಿ ಮತ್ತು ಸ್ವಚ್ಚವಾಗಿ ಕಾಣುವುದರಲ್ಲಿ ಯಾವ ಸಂದೇಹವಿಲ್ಲ. ಸಾರ್ವಜನಿಕರು ಇಲ್ಲಿ ಬಂದು ನಮಗೆ ನೀರು ಬಂದಿಲ್ಲ, ವಾರ್ಡಿನಲ್ಲಿ ವಿದ್ಯುತ ಇಲ್ಲ. ಗಟಾರ ಸ್ವಚ್ಚವಾಗಿಲ್ಲ ಎಂದು ಹೇಳುವ ಮೋದಲೆ ನೀವು ನಿತ್ಯವು 2-3 ವಾರ್ಡಗಳನ್ನು ತಿರುಗಾಡಿ ಅಲ್ಲಿನ ಗಟಾರ ಸ್ವಚ್ಚತೆ, ವಿದ್ಯುತ ದೀಪ, ನೀರೀನ ಸರಿಯಾದ ಪೂರೈಕೆಯಾಗುತ್ತಿದೆಯೇ, ಇಲ್ಲವಾದಲ್ಲಿ ಕೂಡಲೆ ಅವುಗಳನ್ನು ದುರಸ್ಥೀ ಮಾಡಿ ಸಾರ್ವಜನಿಕರಿಗೆ ಸರಿಯಾದ ಸಮಯದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಿಮ್ಮ ಕೆಲಸ, ಇದಕ್ಕೆ ತಪ್ಪಿದವರ ವಿರುದ್ದ ಕ್ರಮ ಜರುಗಿಸಲಾಗುವುದು.
ಅಲ್ಲದೆ ಒಂದು ವರ್ಷಗಳ ಕಾಲ ಯಾವ ಯಾವ ಸಿಬ್ಬಂದಿಗಳು ಸರಿಯಾಗಿ ಚಾಚುತಪ್ಪದೆ ಕೆಲಸ ಮಾಡುತ್ತಾರೋ ಅಂತವರನ್ನು ಸನ್ಮಾನ ಮಾಡಿ ಗೌರವಿಸಿರಿ. ಮತ್ತು 20 ವಾರ್ಡಿ ಮಹಿಳೆಯರು ಇಲ್ಲಿಗೆ ಬಂದು ಹೇಳಿದ ಹಾಗೆ ಕೂಡಲೇ ಅವರ ವಾರ್ಡಿಗೆ ಹೋಗಿ ಅವರಿಗೆ ನೀರಿನ ವ್ಯೆವಸ್ಥೆ ಮಾಡಿರಿ, ಅಲ್ಲದೆ 24 * 7 ದವರು ಅಲ್ಲಲ್ಲಿ ಪೈಪಗಳ ಅಳವಡಿಕೆ ಸಲುವಾಗಿ ರಸ್ತೆ ಅಗೆದು ಅಲ್ಲಿನ ನಮ್ಮ ಪೈಪಗಳನ್ನು ಕಟ್ಟ ಮಾಡಿದರೆ, ಅಥವಾ ಕೆಡಿಸಿದರೆ,
ಮತ್ತು ಗುತ್ತಿಗೆದಾರರು ರಸ್ತೆ ಮತ್ತು ಇನ್ನಿತರ ಕಾಮಗಾರಿಗಳನ್ನು ಮಾಡುವಾಗ ನಮ್ಮ ಪುರಸಭೆ ನೀರಿನ ಪೈಪ ಕೆಡಿಸಿದ್ದರೆ ಅವುಗಳನ್ನು ಅವರಿಂದೆ ರಿಪೇರಿ ಮಾಡಿಸಿರಿ ನಮ್ಮ ಪುರಸಭೆ ನೀರಿನ ಖರ್ಚಿನಲ್ಲಿ ಸಮಾನು ತಂದು ರಿಪೇರಿ ಮಾಡಿಸಕೂಡದೆ, ಅಲ್ಲದೆ 10-15 ಮನೆಗಳಿಗೆ ಒಂದುರಂತೆ ಮಾತ್ರ ಸಾರ್ವಜನಿಕ ನಳಗಳನ್ನು ಕೊಡಿರಿ, ಹೆಚ್ಚು ಸಾರ್ವಜನಿಕ ನಳಗಳ ಜೋಡನೆಯಿಂದ ಪುರಸಭೆಗೆ ನಷ್ಟವಾಗುತ್ತದೆ. ಸಾದ್ಯವಾದಷ್ಟು ಎಲ್ಲ ಕಡೆಗಳಲ್ಲಿ ಎಲ್.ಇ.ಡಿ ದೀಪಗಳನ್ನು ಬಳಸಿರಿ. ಒಮ್ಮಲೆ ಎಲ್ಲ ಕೆಲಸಗಳು ಆಗದಿದ್ದರು. ಹಂತಹಂತವಾಗಿ ಕೆಲಸ ಮಾಡಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಮುಖಂಡರಾದ, ಜಿ.ಎಸ್ ಗೊಂಬಿ, ಶಿವಾನಂದ ಅಂಗಡಿ, ಮಲ್ಲಪ್ಪ ದಲಾಲ, ಮಹೇಶ ಜಿಡ್ಡಿಮನಿ, ಬಸವರಾಜ ಮಡಿವಾಳ ಮತ್ತು ಪುರಸಭೆಯ ಮುಖ್ಯಾಧಿಕಾರಿ ನಾಮದೇವ ಲಮಾಣಿ, ಎಸ್ ಎನ್ ಪಾಟೀಲ, ಪಿ ವೈ ಸೊನ್ನದ, ಚಿದಾನಂದ ಮಠಪತಿ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 