ಅನಧಿಕೃತ ಗ್ಯಾಸ್ ರಿಫಿಲೀಂಗ್ ಮಾಡುವವರ ಮೇಲೆ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ

District Collector T. Bhoobalan issues instructions for strict action against those who do unauthor

ಅನಧಿಕೃತ ಗ್ಯಾಸ್ ರಿಫಿಲೀಂಗ್ ಮಾಡುವವರ ಮೇಲೆ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ 

ವಿಜಯಪುರ.16: ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಗ್ಯಾಸ್ ರಿಫಿಲಿಂಗ್ ಸ್ಥಳಗಳನ್ನು ಗುರುತಿಸಿ, ದಾಳಿ ನಡೆಸುವ ಮೂಲಕ ಅನಧಿಕೃತ ಗ್ಯಾಸ್ ರಿಫಿಲಿಂಗ್ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.  

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಗೃಹ ಬಳಕೆ ಎಲ್ಪಿಜಿ ಗ್ಯಾಸ್ ಅನಧೀಕೃತವಾಗಿ ಅಟೋಗಳಿಗೆ, ಹೋಟೆಲಗಳಲ್ಲಿ, ಬೀದಿಬದಿ ಆಹಾರ ತಯಾರಿಕೆ ವ್ಯಾಪಾರಸ್ಥರು ಬಳಕೆ ಮಾಡುವುದು ಅಲ್ಲದೇ ವಾಣಿಜ್ಯೋದ್ಯಮ ಸಿಲಿಂಡರಗಳಿಗೆ ಮರುಭರ್ತಿ ಮಾಡಿ ಮಾರಾಟ ಮಾಡುತ್ತಿರುವುದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೂವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  

  ಅನಧೀಕೃತವಾಗಿ ಎಲ್ಪಿಜಿ ಬಳಕೆಯಿಂದ ಇತ್ತೀಚೆಗೆ ಒಂದು ಘಟನೆಯಲ್ಲಿ  22 ವರ್ಷದ ವ್ಯಕ್ತಿ ಪ್ರಾಣವನ್ನು ಕಳೆದುಕೊಂಡಿರುವ ಕುರಿತು ವಿವರಿಸಿದ ಅವರು, ಆಯಾ ಸಂಬಂಧಿಸಿದ ಇಲಾಖೆಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಅಧಿಕಾರವನ್ನು ಬಳಸಿ ನಗರದಾಧ್ಯಂತ ಅಕ್ರಮವಾಗಿ ಗೃಹಬಳಕೆ ಎಲ್ಪಿಜಿ ಗ್ಯಾಸನ್ನು ಅಟೋಗಳಿಗೆ, ಹೋಟೆಲಗಳಲ್ಲಿ, ಬೀದಿಬದಿ ಆಹಾರ ತಯಾರಿಕೆ ವ್ಯಾಪಾರಸ್ಥರು ಬಳಕೆ ಮಾಡುವುದು ಅಲ್ಲದೇ ವಾಣಿಜ್ಯೋದ್ಯಮ (ಕಮರ್ಶಿಯಲ್) ಸಿಲಿಂಡರಗಳಿಗೆ ಮರುಭರ್ತಿ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸಬೇಕು. ಅನಧಿಕೃತ ಕಟ್ಟಡಗಳಲ್ಲಿ ನಡೆಯುತ್ತಿರುವ  ಅಕ್ರಮ ಗ್ಯಾಸ್ ರಿಫಿಲಿಂಗ್ ಸ್ಥಳಗಳನ್ನು ಪಾಲಿಕೆ ವತಿಯಿಂದ ತೆರವುಗೊಳಿಸಿ, ಇಂತಹ ಸ್ಥಳಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.  

 ನಗರದಲ್ಲಿ  7 ಅಧಿಕೃತ ಗ್ಯಾಸ್ ಎಜೆನ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ಏಜೆನ್ಸಿಗಳೂ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಿ ಗ್ಯಾಸ್ ವಿತರಣೆಗೆ ಕ್ರಮ ವಹಿಸಬೇಕು. ನಿಯಮಗಳನ್ನು ಪಾಲಿಸದ ಏಜೆನ್ಸಿಗಳ ಮೇಲೆಯೂ ಸಹ ಪ್ರಕರಣ ದಾಖಲಿಸಿ ಲೈಸನ್ಸ್‌ ರದ್ಧತಿಗೆ ಕ್ರಮ ವಹಿಸಲಾಗುವುದು. ನಗರದಲ್ಲಿ ಯಾವ ಯಾವ ಸ್ಥಳಗಳಲ್ಲಿ ಅನಧೀಕೃತ ಗ್ಯಾಸ್ ರಿ ಪಿಲ್ಲಿಂಗ್ ಮಾಡಲಾಗುತ್ತಿದೆ ಎಂಬುದರ ಕುರಿತು ಪರೀಶೀಲನೆ ನಡೆಸಿ, ಸಮಗ್ರ ಮಾಹಿತಿ ಒದಗಿಸಲು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸುವಂತೆ ಅವರು ಸೂಚನೆ ನೀಡಿದರು.ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿರು ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಗೆ ಗ್ಯಾಸ ಒದಗಿಸುವಾಗ ನಿಗದಿತ ಗ್ರಾಹಕರಿಗೆ ಗ್ಯಾಸ್ ತಲುಪಿರುವ ಕುರಿತು ಖಾತರಿ ಪಡಿಸಿಕೊಳ್ಳಲು ಮೊಬೈಲ್ ಆಪನ್ ಕ್ಯೂಆರ್ ಕೋಡ್ ಬಳಸಿಕೊಂಡು ಗ್ರಾಹಕರಿಗೆ ಗ್ಯಾಸ್ ವಿತರಿಸಿದ ಕುರಿತು ನಂತರ ಖಾಲಿಯಾದ ಗ್ಯಾಸ ಟಾಕಿ ಮರಳಿ ಪಡೆಯುವಾಗ  ಅದೇ ಯುನಿಕ್ ನಂಬರ್ ಇರುವುದರ ಕುರಿತು ಮನವರಿಕೆ ಮಾಡಿಕೊಳ್ಳಬೇಕು ಹೀಗೆ ಮಾಡಿದ್ದಲ್ಲಿ ಏಜೆನ್ಸಿದಾರರು ಕೂಡ ಸುರಕ್ಷತೆ ಪಾಲಿಸಿದಂತಾಗುತ್ತದೆ. ಗ್ರಾಹಕರಿಗೆ ಗ್ಯಾಸ ವಿತರಿಸಲು ತಾಂತ್ರಿಕ ವ್ಯವಸ್ಥೆ ಕುರಿತು ಏಜೆನ್ಸಿಯವರಿಗೆ ತಾಂತ್ರಿಕತೆ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆ ತಿಳಿಸಿದ ಅವರು,  ಬರುವ ಜೂನ್ 1 ರಿಂದ ಏಜೆನ್ಸಿ ದಾರರರು ಈ ರೀತಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

ಅನಧೀಕೃತವಾಗಿ ಗೃಹಬಳಕೆ ಎಲ್ಪಿಜಿ ಗ್ಯಾಸನ್ನು ಅಟೋಗಳಿಗೆ, ಹೋಟೆಲಗಳಲ್ಲಿ, ಬೀದಿಬದಿ ಆಹಾರ ತಯಾರಿಕೆ ವ್ಯಾಪಾರಸ್ಥರು ಬಳಕೆ ಮಾಡುವುದು ಅಲ್ಲದೇ ವಾಣಿಜ್ಯೋದ್ಯಮ (ಕಮರ್ಶಿಯಲ್) ಸಿಲಿಂಡರಗಳಿಗೆ ಮರುಭರ್ತಿ ಮಾಡುವುದು  ಐಡಣಜಜಿಜಜ ಕಜಣಡಿಠಜಣಟ ಉಛಿ (ಖಜರಣಟಚಿಣಠ ಠ ಖಣಠಿಠಿಟಥಿ ಚಿಟಿಜ ಆಣಡಿಛಣಣಠ) ಓಡಿಜಜಡಿ, 2000 ಕ್ಲಾಜ್ 3 ರ ಅನ್ವಯ ಅಪರಾಧವಾಗಿದ್ದು, ಇಂತಹ ಪ್ರಕರಣ ಕಂಡು ಬಂದಲ್ಲಿ ಅಂತಹವರ ವಿರುದ್ದ ಕಾಯ್ದೆ ಉಲ್ಲಂಘನೆ ಮೇರೆಗೆ ಸದರಿ ಸಿಲಿಂಡರಗಳನ್ನು ಜಪ್ತಿ ಮಾಡುವುದಲ್ಲದೇ, ಅಗತ್ಯ ವಸ್ತುಗಳ ಕಾಯ್ದೆ 1955 ರ ಸೆಕ್ಷನ್ 3/7 ರ ಮೇರೆಗೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷಣ ನಿಂಬರಗಿ ಮಾತನಾಡಿ ಅನಧೀಕೃತ ಗ್ಯಾಸ್ ರಿಪಿಲ್ಲಿಂಗ್ ತೊಡಗಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.  

ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ ಅವರು ಸಭೆಗೆ ಮಾಹಿತಿ ನೀಡಿ, ಪೋಲಿಸ ಇಲಾಖೆ ಸಹಾಯದೊಂದಿಗೆ ಹಾಗೂ  ಖಚಿತ ಮಾಹಿತಿ ಮೇರೆಗೆ  ನಗರದಾದ್ಯಂತ  2024ನೇ ನವೆಂಬರ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 19 ಪ್ರಕರಣಗಳನ್ನು ದಾಖಲಿಸಿ ಸುಮಾರು 146 ಸಿಲಿಂಡರಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.  

ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳ ಗುರುನಾಥ ದಡ್ಡೆ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ, ಡಿವೈಎಸ್ ಪಿ ಬಸವರಾಜ ಯಲಿಗಾರ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮ ಬಾಬಾ, ಸೇರಿದಂತೆ ಇತರರು ಉಪಸ್ಥಿತರಿದ್ದರು.ವಸತಿನಿಲಯ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ 

ವಿಜಯಪುರ 16: 2025-26ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ  ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ಆ???ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜೂನ್ 16  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ಣಣಠಿ:/ಠಿ.ಞಚಿಡಿಟಿಚಿಣಚಿಞಚಿ.ರಠ.ಟಿ /ಛಛಿತಿಜ ಮೂಲಕ ಅರ್ಜಿ ಸಲ್ಲಿಸಬಹುದು. 

ಹೆಚ್ಚಿನ ಮಾಹಿತಿಗಾಗಿ ಸಹಾವಾಣಿ ಸಂಖ್ಯೆ 8050770004 ಮತ್ತು 8050770005 ಹಾಗೂ ಜಿಲ್ಲಾ ಕಚೇರಿ ಸಂಪರ್ಕಿಸುವಂತೆ   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.