ಉತ್ತಮ ಕರ್ತವ್ಯ ನಿರ್ವಹಣೆಗೆ ಎಡಿಜಿಪಿ ಅಲೋಕಕುಮಾರ ಅವರಿಂದ ಪ್ರಶಂಸನಾ ಪತ್ರ ವಿತರಣೆ

ಲೋಕದರ್ಶನ ವರದಿ

ಕಲಕೇರಿ 22: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ ಎಸ್. ದೊಡಮನಿ ಹಾಗೂ ಮಲ್ಲಿಕಾರ್ಜುನ ಹಂದ್ರಾಳಯವರಿಗೆ ವಿಜಯಪುರದ ಪರೇಡ್ ಮೈದಾನದಲ್ಲಿ ನಡೆದ ಪರೇಡ್ ಪರೀವಿಕ್ಷಣಾ ಕಾರ್ಯಕ್ರಮದಲ್ಲಿ  ಜೂನ-ಜುಲೈ ತಿಂಗಳಲ್ಲಿ ಉತ್ತಮ ಪೊಲೀಸ್ ಕರ್ತವ್ಯ ನಿರ್ವಹಿಸಿದಂತಹ ಸಿಬ್ಬಂದಿಯವರಿಗೆ ವಿಜಯಪುರ ಎಡಿಜಿಪಿ ಅಲೋಕಕುಮಾರ ಅವರಿಂದ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಯಿತು.

 ಈ ಪ್ರಶಸ್ತಿ ಪಡೆದಿರುವುದಕ್ಕೆ ಕಲಕೇರಿ ಪೊಲೀಸ್ ಠಾಣೆಯ ಪಿ.ಎಸ್.ಐ ರವಿ ಯಡವಣ್ಣವರ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು