ಸೇವಾದಳ ಘಟಕ, ಎಸ್.ಸಿ ಘಟಕದಿಂದ ಶ್ರದ್ಧಾಂಜಲಿ

ಲೋಕದರ್ಶನ ವರದಿ

ಧಾರವಾಡ15: ದೇಶವನ್ನು ಕಾಯುತ್ತಿರುವ ವೀರ ಯೋಧರನ್ನು ಹತ್ಯೆಮಾಡಿದ ಉಗ್ರರಿಗೆ ತಕ್ಕ ಶಿಕ್ಷೆಯಾಗಬೇಕು ಕೇಂದ್ರ ಸಕರ್ಾರವು ದಿಟ್ಟ ನಿರ್ಣಯವನ್ನು ತೆಗೆದುಕೊಂಡು ಉಗ್ರರ ತಾಣಗಳನ್ನು ಹುಟ್ಟಡಗಿಸಬೇಕೆಂದು ಹೇಳಿದರು. ಇದಕ್ಕೆ ಪಕ್ಷಾತೀತವಾಗಿ ದೇಶದ ಜನತೆ ತಮ್ಮೊಂದಿಗೆ ಇದ್ದಾರೆ ಮತ್ತು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸಿ ಉಗ್ರರನ್ನು ದಮನ ಮಾಡಬೇಕೆಂದು ಸೇವಾದಳ ಜಿಲ್ಲಾಧ್ಯಕ್ಷರಾದ ಮೋಹನ ಅರ್ಕಸಾಲಿ ಹೇಳಿದರು. 

 ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹತರಾದ ವೀರ ಯೋಧರಿಗೆ ಸೇವಾದಳ ಘಟಕ ಹಾಗೂ ಎಸ್.ಸಿ ಘಟಕದಿಂದ ಶ್ರದ್ಧಾಂಜಲಿಯನ್ನು ಅಪರ್ಿಸಲಾಯಿತು.

 ಎಲ್ಲರೂ ಕೂಡಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಅಪರ್ಿಸಿ ಮೌನಾಚರಣೆಯನ್ನು ಮಾಡಿದರು.

  ನಂತರ ಹುತಾತ್ಮರಾದ ವೀರ ಯೋಧರ ಕುಟುಂಬಗಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಕೊಡಲಿ ಎಂದು ಪ್ರಾಥರ್ಿಸಿದರು.

   ಈ ಸಂದರ್ಭದಲ್ಲಿ ಸೇವಾದಳ ಜಿಲ್ಲಾಧ್ಯಕ್ಷ ಮೋಹನ ಅರ್ಕಸಾಲಿ, ಶಿವ ಮಾಕಡವಾಲೆ, ರಾಜು ಸಜ್ಜನಶೆಟ್ಟಿ, ಆನಂದ ದೇಶಪಾಂಡೆ, ಶಂಕರ ದೇವರೆಡ್ಡಿ, ಪ್ರೀತಮ ಶೆಟ್ಟಿ, ರವಿ, ಮಂಜು ಭೀಮಪ್ಪನವರ, ವಿರೇಶ ನಾಯಕ, ವಿರೇಶ ದೊಡ್ಡಮನಿ, ರಾಜಶೇಖರ ಶೆಟ್ಟರ, ರಜಾಕ್ ಮುಂತಾದವರು ಶ್ರದ್ಧಾಂಜಲಿಯನ್ನು ಅಪರ್ಿಸಿದರು.