ದಾಂಡೇಲಿ ದಂಡಕಾರಣ್ಯ ಉದ್ಯಾನದ ರಸ್ತೆ ದುರಸ್ತಿಗೆ ಆಗ್ರಹ

ದಾಂಡೇಲಿ ದಂಡಕಾರಣ್ಯ ಉದ್ಯಾನದ ರಸ್ತೆ ದುರಸ್ತಿಗೆ ಆಗ್ರಹ Demand for repair of the road in Dandeli's Dandakaranya Park

ಲೋಕದರ್ಶನ ವರದಿ 

  ದಾಂಡೇಲಿ  24: ಸ್ಥಳೀಯ ದಂಡಾಕಾರಣ್ಯ ಉದ್ಯಾನವನದ ರಸ್ತೆಯನ್ನು ಶಿಘ್ರ್ರದಲ್ಲಿ ದುರಸ್ಥಿಗೊಳಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಮಾನವ ಹಕ್ಕುಗಳ ಆಯೋಗದ ನಿರ್ದೇಶಕ ಫಿರೋಜ ಫಿರಜಾದೆ ಎಚ್ಚರಿಸಿರುತ್ತಾರೆ. ಈ ಉದ್ಯಾನವನಕ್ಕೆ ಪ್ರವಾಸಿಗರು ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುತ್ತಲಿದ್ದು, ರಸ್ತೆಯ ಅವ್ಯವಸ್ಥೆ ಕಂಡು ತಮ್ಮ ಬೇಸರವನ್ನು  ವ್ಯಕ್ತ ಪಡಿಸಿರುತ್ತಾರೆ. ಎಂದು ನುಡಿದ ಫಿರಜಾದೆ ಪ್ರವಾಸೋದ್ಯಮ ಹೆಸರಿಗೆ ಕಳಂಕ ಬರದಂತೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ನಗರಸಭೆ ಮುಂದಾಗಬೇಕೆಂದು ಒತ್ತಾಯಿಸಿರುತ್ತಾರೆ.