ಮಹಲಿಂಗಪುರ

ಡಿ. 15 ರಂದು ಮುಖ್ಯಮಂತ್ರಿ ಭೇಟಿಯಾಗಲು ನಿಯೋಗ ಭೇಟಿಗೆ ಅವಕಾಶ

ಡಿ. 15 ರಂದು ಮುಖ್ಯಮಂತ್ರಿ  ಭೇಟಿಯಾಗಲು ನಿಯೋಗ ಭೇಟಿಗೆ ಅವಕಾಶ

ಮಹಾಲಿಂಗಪುರ 06  : ನಗರದಲ್ಲಿ ಕಳೆದ 1336 ದಿನಗಳಿಂದ ನಡೆಯುತ್ತಿರುವ ತಾಲೂಕಾ ಬೇಡಿಕೆ ಹೋರಾಟಗಾರರು ಇದೆ 8 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲ್ಲಿರುವ ಚಳಿಗಾಲದ ಅಧಿವೇಶನದಲ್ಲಿ ದಿ 15 ರಂದು ಮುಖ್ಯಮಂತ್ರಿ ಭೇಟಿಯಾಗಲು ನಿಯೋಗ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದು ಆದರ ಪ್ರಯುಕ್ತ ಹೋರಾಟಗಾರರ ನಿಯೋಗ ತೆರಳಲು ತಯಾರಿ ಮಾಡಿಕೊಂಡಿದ್ದಾರೆ.  

ಇಂದು ನೀಲಕಂಟೇಶ್ವರ ದೇವಸ್ಥಾನದಲ್ಲಿ ನಡೆದ ಹೋರಾಟ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಸಂಗಪ್ಪ ಹಲಿ ನಮ್ಮ ಹೋರಾಟ ತಾಲೂಕಾಗುವವರೆಗೆ ಮುಂದುವರೆಯುತ್ತದೆ, ಯಾವುದೇ ಸಂದರ್ಭದಲ್ಲಿಯೂ ತಾಲೂಕು ಆಗುವ ವರೆಗೂ ನಮ್ಮ ಈ ಹೋರಾಟ ನಿರಂತರವಾಗಿದೆ ಎಂದು ಹೋರಾಟ ಸಮಿತಿಯ ತಿಳಿಸಿದರು. 

ಇಂದಿನ ಸಭೆಯಲ್ಲಿ ಮುಖಂಡರಾದ  ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಮುಖಂಡರಾದ ಧರೆಪ್ಪ ಸಾಂಗ್ಲಿಕರ, ಗಂಗಾಧರ ಮೇಟಿ, ಪರ​‍್ಪ ಬ್ಯಾಕೋಡ, ಸಿದ್ದುಗೌಡ ಪಾಟೀಲ, ಶಿವನಗೌಡ ಪಾಟೀಲ,ಮಹಾದೇವ ಮಾರಾಪುರ, ವೀರೇಶ ಆಸಂಗಿ,ಹಣಮಂತ ಜಮಾದಾರ,ಮಹಾಲಿಂಗ ಅವರಾಧಿ, ಸಿದ್ದು ಶಿರೋಳ, ರಫೀಕ್ ಮಾಲಾದರ, ನಿಂಗಪ್ಪ ಬಾಳಿಕಾಯಿ, ದುಂಡಪ್ಪ ಇಟ್ನಾಳ ಮಹದೇವ್ ಹೊಸಕೋಟಿ, ಎಸ್ ಸತ್ತಿಗೇರಿ, ಎಂ ಪುರಾಣಿಕ,ಎಂ ಬಿ ಹುಲಿಕಟ್ಟಿ,ಸೇರಿ ಹಲವರು ಇದ್ದರು. 


ಸುದ್ದಿ ಓದಿ