'ಘಾರ್ಗಾ' ಚಿತ್ರದ ಬಂಗಾರಿ ಸಾಂಗ್ ಸೆಲೆಬ್ರೇಟ್ ಮಾಡುತ್ತಿರುವ ದರ್ಶನ್ ಅಭಿಮಾನಿಗಳು
Darshan's fans celebrating the Bangari song from the movie 'Gharga'
ಫೆಬ್ರವರಿ 6ರಂದು ತೆರೆಗೆ ಬರಲಿರುವ 'ಘಾರ್ಗಾ' ಚಿತ್ರದಲ್ಲಿ 'ಬಂಗಾರಿ ಯಾರೇ ನೀ ಬುಲ್ ಬುಲ್' ಸಾಂಗ್ ರಿಮಿಕ್ಸ್ ಮಾಡಿ ಬಳಕೆ 2008ರಲ್ಲಿ ತೆರೆಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಗಜ' ಚಿತ್ರದಲ್ಲಿ 'ಬಂಗಾರಿ ಯಾರೇ ನೀ ಬುಲ್ ಬುಲ್ ...' ಸಾಂಗ್ ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ಗೀತೆಯನ್ನು ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ತಮ್ಮ ಮಗ ಅರುಣ್ ರಾಮ್‌ಪ್ರಸಾದ್ ಅಭಿನಯದ 'ಘಾರ್ಗಾ' ಚಿತ್ರದಲ್ಲಿ ರಿಮಿಕ್ಸ್ ಮಾಡಿ ಬಳಸಿಕೊಂಡಿದ್ದಾರೆ. ನಿನ್ನೆಯಷ್ಟೇ ಈ ಗೀತೆಯನ್ನು ದರ್ಶನ್ ಅಭಿಮಾನಿಗಳಿಗಾಗಿಯೇ ಎ.ಆರ್.ಸಿ ಮ್ಯೂಸಿಕ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಹಾಡಿಗೆ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿ. ಹರಿಕೃಷ್ಣ ಸಂಗೀತವಿದೆ. ರಿಮಿಕ್ಸ್ ಗೀತೆಯನ್ನು ನದೀರಾ ಬಾನು ಹಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್, 'ಪ್ರಾರಂಭದಲ್ಲಿ ಬೇರೆ ಸಾಂಗ್‌ಗಳ ಬಗ್ಗೆ ಮಾತುಕತೆ ನಡಿತಾ ಇತ್ತು. ಆಗ ನಾನು ಈ ಬಂಗಾರಿ ಹಾಡನ್ನು ಕೊಟ್ಟೆ. ನಮ್ಮ ಹತ್ತಿರವೇ ಈ ಹಾಡಿನ ರೈಟ್ಸ್ ಇದ್ದಿದ್ದರಿಂದ ಬಳಸಿಕೊಂಡ್ವಿ. ದರ್ಶನ್ ಸರ್‌ಗೆ 'ಮೆಜೆಸ್ಟೀಕ್' ನಾವೇ ಮಾಡಿದ್ವಿ. ಅವರ ಅಭಿಮಾನಿಗಳಿಗಾಗಿಯೇ ಈ ಹಾಡನ್ನು ಮಾಡಬೇಕು ಎಂದು ರಿಮಿಕ್ಸ್ ಮಾಡಿ ನಿಮ್ಮ ಮುಂದೆ ತಂದಿದ್ದೇವೆ. ಇದೇ ಫೆಬ್ರವರಿ 6 ನಮ್ಮ 'ಘಾರ್ಗಾ' ಚಿತ್ರ ಬಿಡುಗಡೆ ಇದೆ. ದಯವಿಟ್ಟು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ. ಎಲ್ಲರು ಸಿನಿಮಾ ಹಾಗೂ ಈ ಹಾಡನ್ನು ಎಂಜಾಯ್ ಮಾಡುತ್ತಿರಾ' ಎಂದು ಹೇಳಿದರು. ನಂತರ ನಟ ಅರುಣ್ ರಾಮ್ ಪ್ರಸಾದ್ ಮಾತನಾಡಿ, 'ನಮ್ಮ ಸಿನಿಮಾಗೆ ಒಂದು ಹಾಡು ಬೇಕಿತ್ತು. ಚರ್ಚೆ ಮಾಡುವಾಗ ಬಾಸ್ ಸಾಂಗ್ ತಗೊಳೋನಾ ಅಂತ ಹಲವು ಸಾಂಗ್ ಹುಡುಕಿದ್ವಿ. ಅದೇ ಟೈಮ್‌ಗೆ ತಂದೆ ಬಂದರು. ಅವರು ಗಜ ಚಿತ್ರದ ಬಂಗಾರಿ ಸಾಂಗ್ ಕೊಟ್ಟರು. ಹಾಡಿನ ಪ್ರೋಮೋ ಬಿಟ್ಟಾಗಿಂದ ತುಂಬಾ ಜನ ಪ್ರೀತಿ ತೋರಸ್ತಾ ಇದ್ದಾರೆ. ಬಾಸ್ ಹಾಗೂ ಅಭಿಮಾನಿಗಳ ಆಶೀರ್ವಾದ ನಮ್ಮ ತಂಡದ ಮೇಲಿದೆ. ದಯವಿಟ್ಟು ಎಲ್ಲರು ಫೆ. 6ರಂದು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ' ಎಂದು ಕೇಳಿಕೊಂಡರು.
'ಘಾರ್ಗಾ' ಚಿತ್ರದ ಮೂಲಕ ಯಶಸ್ವಿ ಸಿನಿಮಾಗಳ ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಅವರ ಮಗ ಅರುಣ್ ರಾಮ್‌ಪ್ರಸಾದ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಫಾರ್ಗಾ ಒಂದು ಊರಿನ ಹೆಸರಾಗಿದ್ದು, ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹ ಚಿತ್ರಕ್ಕಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಸಿನಿಮಾ ಮೇಲಿನ ನೀರೀಕ್ಷೆಯನ್ನು ಹೆಚ್ಚಿಸಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಅಭಿನಯ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ರೆಹಾನ ಅಭಿನಯಿಸಿದ್ದಾರೆ. ಎಂ. ಶಶಿಧರ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಆರ್.ಪಿ.ಪಟ್ನಾಯಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಘಾರ್ಗಾ ಒಂದು ಅಡ್ವೆಂಚರಸ್ ಡ್ರಾಮಾ, ಹಾರರ್ ಚಿತ್ರವಾಗಿದ್ದು, ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಎನ್. ಕುಮಾರ್ ಅವರು ರೀಲೀಸ್ ಮಾಡುತ್ತಿದ್ದಾರೆ. ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದ್ದು, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 