ನೆರೆಹಾವಳಿಯಿಂದ ಹಾನಿ: 700ಕ್ಕೂ ಅಧಿಕ ಭತ್ತದ ಚೀಲಗಳ ವಿತರಣೆ
ಲೋಕದರ್ಶನ ವರದಿ
ಗೋಕಾಕ: ನೆರೆ ಹಾವಳಿಯಿಂದ ಹಾನಿಗೊಳಗಾದ ಸುಮಾರು 15 ಲಕ್ಷಕ್ಕೂ ಹೆಚ್ಚು ಬೆಲೆಯ 700ಕ್ಕೂ ಅಧಿಕ ಭತ್ತದ ಚೀಲಗಳನ್ನು ರೈತರ ಜಾನುವಾರುಗಳಿಗೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ,
ಇಲ್ಲಿಯ ವಾಲ್ಮೀಕಿ ವೃತ್ತದ ಎಪಿಎಮ್ಸಿ ರಸ್ತೆಯಲ್ಲಿ ಕಳೆದ ಕೆಲದಿನಗಳ ಹಿಂದೆ ಬಂದ ಪ್ರವಾಹದಿಂದ ಚುನಮರಿ ಬಟ್ಟಿಯಲ್ಲಿ ಶೇಖರಿಸಿಟ್ಟ ಬತ್ತದ ಚೀಲಗಳು ನೀರಿನಲ್ಲಿ ತೊಯ್ದು ಹೋಗಿದ್ದವು. ಚುನಮರಿ ಬಟ್ಟಿಯ ಮಾಲಿಕ ಮಾರುತಿ ಗೌಡರ ಅವರು ಬತ್ತದ ಚೀಲಗಳನ್ನು ಒಣಗಿಸಿ ಮರುಬಳಕೆ ಮಾಡಬಹುದಾಗಿತ್ತು. ಆದರೆ ಅದಕ್ಕೆ ಅವರು ಮಹತ್ವವನ್ನು ನೀಡದೇ ಪ್ರವಾಹದಿಂದಾಗಿ ಆಗಿರುವ ಮೇವಿನ ಕೊರತೆಯನ್ನು ಅರಿತು ರೈತರನ್ನು ಕರೆದು ಕಳೆದ 4 ದಿನಗಳಿಂದ ರೈತರ ಜಾನುವಾರುಗಳಿಗೆ ಆಹಾರವಾಗಿ ಉಪಯೋಗಿಸಲು ಉಚಿತವಾಗಿ ವಿತರಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಬಸಪ್ಪ ರಂಕನಕೊಪ್ಪ, ಈರಪ್ಪ ನೇರಲಿ ಸೇರಿದಂತೆ ಅನೇಕ ರೈತರು ಇದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 