ಸಿಲಿಂಡರ್ ಸ್ಫೋಟ: ಅರುಣ ಕಾರಜೋಳ 1ಲಕ್ಷ ಪರಿಹಾರ
ರನ್ನ ಬೆಳಗಲಿ 26: ಪಟ್ಟಣದ ರೇಖಾ ಯಲ್ಲಪ್ಪ ಕಂಠಿಯವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಂಪೂರ್ಣ ಮನೆ ಸುಟ್ಟ ಕಾರಣ ಮುಧೋಳ ಬಿಜೆಪಿ ಮಂಡಲ ವತಿಯಿಂದ ಒಂದು ಲಕ್ಷ ಪರಿಹಾರವನ್ನು ಅರುಣ ಕಾರಜೋಳ ಅವರು ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಗ್ರಾಮೀಣ ಅಧ್ಯಕ್ಷರಾದ ಸಂಗನಗೌಡ ಕಾತರಕಿ, ಕೆ ಎಂ ಎಫ್ ನಿರ್ದೇಶಕರಾದ ರಾಜುಗೌಡ ಪಾಟೀಲ, ಪಕ್ಷದ ಮುಖಂಡರಾದ ಧರೆಪ್ಪ ಸಾಂಗಲಿಕರ, ಅಶೋಕ್ ಸಿದ್ದಾಪುರ, ರಾಜು ಯಡಹಳ್ಳಿ, ಪಂಡಿತ ಪೂಜೇರಿ, ಸಿದ್ದು ಪಾಟೀಲ, ಪ್ರವೀಣ್ ಬರಮನಿ, ಮಹಾಲಿಂಗ ಗುಂಜಿಗಾಂವಿ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.