ಮಕ್ಕಳು ಶಿಕ್ಷಣವಂತರಾಗಬೇಕು: ಗುರುದೇವಿ ಹುಲಿಗೆಪ್ಪನವರಮಠ
Children should become educated: Gurudevi Huligeppanavaramath
ಯರಗಟ್ಟಿ 11: ಮಕ್ಕಳು ಶಿಸ್ತು, ಸ್ವಪ್ರಯತ್ನ ಮತ್ತು ಉತ್ತಮ ನಡವಳಿಕೆಯೊಂದಿಗೆ ಶಿಕ್ಷಣವಂತರಾಗಬೇಕು. ಪೋಷಕರು ಪ್ರೀತಿಯಿಂದ ಮಾರ್ಗದರ್ಶನ ನೀಡಿ, ಅವರಲ್ಲಿ ಜವಾಬ್ದಾರಿ, ಕೌಶಲ್ಯ ಮತ್ತು ಆತ್ಮವಿಶ್ವಾಸ ಬೆಳೆಸಬೇಕು ಎಂದು ಗುರುದೇವಿ ಹುಲಿಗೆಪ್ಪನವರಮಠ ಹೇಳಿದರು.ಪಟ್ಟಣದ ಪೃಥ್ವಿ ಸೆಂಟ್ರಲ್ ಸ್ಕೂಲ್ ನಲ್ಲಿ ಹಮ್ಮಿಕೊಂಡ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕ, ಸಾಂಪ್ರದಾಯಿಕ ಇತಿಹಾಸ ನಿರ್ಮಿಸಿದ ಕ್ಷೇತ್ರವಾಗಿದೆಶಿಕ್ಷಣ ಸಂಸ್ಥೆಯಲ್ಲಿ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಜೀವನದಲ್ಲಿ ಬಹಳಷ್ಟು ಮುಖ್ಯ. ಶಿಕ್ಷಣ ಮತ್ತು ಜ್ಞಾನಕ್ಕೆ ಬೆಲೆ ಇದೆ. ನಮ್ಮ ಮಕ್ಕಳು ಶಿಕ್ಷಣವಂತರಾದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ, ಶಿಕ್ಷಣಕ್ಕಾಗಿ ಪಣತೊಟ್ಟಿದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಸರ್ಕಾರದ ಸೌಲಭ್ಯ ಪಡೆಯುವ ಮೂಲಕ ಜೀವನ ನಿರ್ವಹಣೆ ಸಾದ್ಯವಿದೆ ಎಂದರು.ಈ ವೇಳೆ ಕೆ.ಎಂ.ಎಫ್ ನಿರ್ದೇಶಕ ಅಜೀತಕುಮಾರ ದೇಸಾಯಿ, ಉದ್ಯೆಮಿ ರಾಜೇಂದ್ರ ಶೆಟ್ಟಿ, ಮಂಜುನಾಥ ಹುಂಡೇಕಾರ, ಶಿವಾಪೂರ ಶಾಲಾ ಪ್ರಧಾನ ಗುರುಗಳಾದ ಮಂಜುನಾಥ ಕುಡ್ಲಿಂಗಪ್ಪಗೋಳ, ಸಮಾಜಸೇವಕಿ ದೀಪಾ ಸಂಗಪ್ಪನವರ, ಹನಮಂತ ಭೂಮನ್ನವರ, ಮಂಜುನಾಥ ಗೌಡರ, ಪ್ರಗತಿಪರ ರೈತರಾದ ಪ್ರವೀಣ ಬಿಷ್ಟನ್ನವರ, ರವಿ ಸಣ್ಣಗೌಡರ, ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀ ಕಳ್ಳಿಗುದ್ದಿ, ಸಾಹಿತಿ ಡಾ. ರಾಜಶೇಖರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ,ಡಾ. ಕಾರ್ತಿಕ ವಾಲಿ, ಶಾಲೆಯ ಮುಖ್ಯೋಪಾದ್ಯ ಬಸನಗೌಡ ಅಣ್ಣಿಗೇರಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಮಕ್ಕಳ ಪಾಲಕರು, ಶಿಕ್ಷಣ ಪ್ರೇಮಿಗಳು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 