ಪ್ರಾಚಾರ್ಯರಾಗಿ ಚೇತನ ಡಾಗಾ ಅಧಿಕಾರ ಸ್ವೀಕಾರ

ರಬಕವಿ-ಬನಹಟ್ಟಿ : ರಬಕವಿ-ಬನಹಟ್ಟಿಯ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಚೇತನ ಬ್ರಿಜ್ಮೋಹನ ಡಾಗಾ ಮದನಮಟ್ಟಿಯ ಕಾಲೇಜಿನಲ್ಲಿ ಅಧಿಕಾರ ಸ್ವೀಕರಿಸಿದರು. ಹಿಂದಿನ ಪ್ರಾಚಾರ್ಯ ಶಂಕರ ಅರಬಳ್ಳಿ ವರ್ಗಾವಣೆಯಾದ ಹಿನ್ನಲೆಯಲ್ಲಿ ಚೇತನ ಡಾಗಾ ಕಾಲೇಜಿನ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದರು.

 ಕಾಲೇಜಿನ ಪ್ರಾಧ್ಯಾಪಕರಾದ ಮಹಾಂತೇಶ ರಡ್ಡೇರಹಟ್ಟಿ, ಅಪ್ಪಣ್ಣ ಪೂಜಾರಿ, ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಡಿ.ಬಿ. ಕಾಂಬಳೆ, ರಾಜಶೇಖರ ಬೀಳಗಿ, ವಿನೋದ ಘಟ್ಟೆ, ಗೀತಾ ಗೊಂದಕರ (ಕೋಪರ್ಡ್ ), ಅನಿತಾ ಹೊನವಾಡ, ದೀಪಾ ಜಾಗೀರದಾರ, ನಡಕಟ್ಟಿನ, ಓಂಕಾರ ಯರಗಟ್ಟಿಕರ, ಶ್ರೀಶೈಲ ಬಾಗೇವಾಡಿ, ಚೇತನ ಚೋಪಡೆ, ಪ್ರಭು ಮಾಸ್ತಿ, ಸುವರ್ಣ ವರದಾಯಿ, ತನುಜಾ ಪೋಳ ಹಾಗೂ ಕಾಲೇಜಿನ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಜಂಟಿ ನಿರ್ದೇಶಕರ ಕಚೇರಿ, ಕಾಲೇಜು ಶಿಕ್ಷಣ ಇಲಾಖೆ, ಧಾರವಾಡದಲ್ಲಿ ವಿಶೇಷಾಧಿಕಾರಿಗಳಾಗಿ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ತೇರದಾಳ ಹಾಗೂ ಹುಲಸೂರುದಲ್ಲಿ ಸೇವೆ ಸಲ್ಲಿಸಿರುವ ಚೇತನ ಡಾಗಾ ಅವರು ಬನಹಟ್ಟಿಯ ಹಿಂದೂ ನೇತಾರ ಮತ್ತು ವಾಣಿಜ್ಯೋದ್ಯಮಿ ಬ್ರಿಜ್ಮೋಹನ ಡಾಗಾರವರ ಪುತ್ರರಾಗಿದ್ದಾರೆ.