ಚಾಕಾಪೂರ ಹರ್-ಫರ್-ಜಲ್ ಗ್ರಾಮವೆಂದು ಘೋಷಣೆ
ಶಿಗ್ಗಾವಿ 16 : ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾಕಾಪುರ ಗ್ರಾಮವನ್ನು "ಹರ್-ಫರ್-ಜಲ್" ಗ್ರಾಮವೆಂದು ಘೋಷಿಸಲು ಚಾಕಾಪೂರದಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರುಗಳು, ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತಿಯಲ್ಲಿಚಾಕಾಪುರ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಒಟ್ಟು 419 ಮನೆಗಳಿದ್ದು ಅವುಗಳ ಪೈಕಿ 417 ಮನೆಗಳಿಗೆ 01 ಶಾಲೆಗಳಿಗೆ 01 ಅಂಗನವಾಡಿ ಕೇಂದ್ರಗಳಿಗೆ 419 ಕಾರ್ಯಾತ್ಮಕ ನಳ ಸಂಪರ್ಕಗಳನ್ನು ಕಲ್ಪಿಸಲಾಗಿದ್ದು ಗ್ರಾಮದ ಎಲ್ಲಾ ಭಾಗಗಳಿಗೆ ಸಮರ್ಕವಾಗಿ ನೀರು ಪೂರೈಕೆ ಆಗುತ್ತಿದ್ದು, ಗ್ರಾಮದ ಸಮಸ್ತ ಜನರ ಒಪ್ಪಿಗೆಯ ಮೇರೆಗೆ ಜಲ ಜೀವನ್ ಮಿಷನ್ ಯೋಜನೆಯಡಿ ಚಾಕಾಪುರ ಗ್ರಾಮವನ್ನು ಹರ್-ಘರ್-ಜಲ್ ಗ್ರಾಮವೆಂದು ದಿ 13-05-2025 ರಂದು ಘೋಷಿಸಲಾಯಿತು. ಈ ಸಂದರ್ಭದಲ್ಲಿ ಎ.ಇ.ಇ ಚನ್ನಬಸವೇಶ್ವರ ಜಿನಗಾ, ಪ್ರಭಾರ ಪಂಚಾಯತ ರಾಜ್ಯ ಸಹಾಯಕ ನಿರ್ದೇಶಕ ಪ್ರಕಾಶ ಓಂಧಕರ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಸಿ.ಪಾಟೀಲ,ಮುದುಕಪ್ಪ ಬಾಳೇಹೊಸುರ, ಕುಸುಮವ್ವ ಪಾಟೀಲ,ಇಂಜಿನಿಯರ್ ವರುಣ, ಗುತ್ತಿಗೆದಾರ ಎಂ.ಎಸ್.ಪಾಟೀಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.