ಮಹಲಿಂಗಪುರ

ಎಪಿಎಂಸಿ ಪ್ರಾಂಗಣದಲ್ಲಿ ಸಮಿತಿ ನಿಧಿ ಅಡಿಯಲ್ಲಿ ಬೋರವೆಲ್

ಎಪಿಎಂಸಿ ಪ್ರಾಂಗಣದಲ್ಲಿ ಸಮಿತಿ ನಿಧಿ ಅಡಿಯಲ್ಲಿ ಬೋರವೆಲ್


ಮಹಾಲಿಂಗಪುರ 31: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೇಸಿಗೆ ಕಾಲದಲ್ಲಿ ರೈತರಿಗೆ, ಮಾಲೀಕರಿಗೆ ಮತ್ತು ವ್ಯಾಪಾರಸ್ಥರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ಸ್ಥಳೀಯ ಎಪಿಎಂಸಿ ಆಡಳಿತ ಮಂಡಳಿಯು ಶುಕ್ರವಾರ ದಿವಸ ಬೋರ್ವೆಲ್ ಕೊರೆಸಿತು. 2024-25 ನೇ ಸಾಲಿನ ಸಮಿತಿ ನಿಧಿ ಅಡಿಯಲ್ಲಿ ಅನುದಾನ 4 ಲಕ್ಷ ರೂಗಳ ವೆಚ್ಚದ ಬೋರವೆಲ್ ಇದಾಗಿದ್ದು, ಬಹಳ ವರ್ಷಗಳಿಂದ ಎಪಿಎಂಸಿಯಲ್ಲಿ ನೀರಿನ ತೊಂದರೆಯೂ ಸಾಕಷ್ಟಿತ್ತು. ಹಲವಾರು ಬಾರಿ ಇಲ್ಲಿಯ ಮಾಲೀಕರು, ರೈತರು ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಬೋರ್ವೆಲ್ ಹಾಕುವ ಕಾರ್ಯ ಮಾತ್ರ ಕೈಗೂಡದೆ ನೆನೆಗುದಿಗೆ ಬಿದ್ದಿತ್ತು.

ಈಗ ಕಾಲ ಕೂಡಿ ಬಂದಿದ್ದು ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿದರೆ ಸಾಕಪ್ಪ ಸಾಕು ಎನ್ನುವಂತಾಗಿದೆ ಎಂದು ಮಾಲೀಕರೊಬ್ಬರು ಹೇಳುತ್ತಾರೆ.ಸಮಿತಿ ಅಧ್ಯಕ್ಷರಾದ ದೇವಲ್ ದೇಸಾಯಿ, ಉಪಾಧ್ಯಕ್ಷರಾದ ಎಸ್‌. ಎಮ್‌.ಪಾಟೀಲ್ ಮತ್ತು ನಿರ್ದೇಶಕರಾದ ದುಂಡಪ್ಪ ಜಾಧವ, ರಾಮನಗೌಡ ಉಳ್ಳಾಗಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಪ್ಪ ಸಿಂಗಾಡಿ ಹಾಗೂ ಮುಖಂಡರಾದ ಸಿದ್ರಾಮಣ್ಣ ಯರಗಟ್ಟಿ, ಬಸವರಾಜ ಕೊಪ್ಪದ, ಸಮಿತಿ ಕಾರ್ಯದರ್ಶಿ ಧನರಾಜ್ ಪಟ್ಟಣಶೆಟ್ಟಿ, ಪ್ರಶಾಂತ್ ಮುಖ್ಖೆನ್ನವರ ಇನ್ನೂ ಅನೇಕರಿದ್ದರು. ಕಾರ್ಯದರ್ಶಿ ಮತ್ತು ಪದಾಧಿಕಾರಿಗಳನ್ನು ಸಿಬ್ಬಂದಿಗಳು ಗೌರವ ಸನ್ಮಾನ ನೀಡಿದರು. 


ಸುದ್ದಿ ಓದಿ