ಹೈಕೋರ್ಟ್‌ಗೆ ಬಾಂಬ್ ಬೆದರಿಕೆ! ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕೋರ್ಟ್‌ಗಳಲ್ಲಿ ತಪಾಸಣೆ
Bomb threat to High Court! Inspections conducted in all courts in Uttara Kannada district
ಮುಂಡಗೋಡ 07: ಧಾರವಾಡ ಉಚ್ಚ ನ್ಯಾಯಾಲಯ ಪೀಠ, ಬಾಗಲಕೋಟೆ ಹಾಗೂ ಮೈಸೂರು ಜಿಲ್ಲಾ ನ್ಯಾಯಾಲಯಗಳನ್ನು ಮಂಗಳವಾರ ಮಧ್ಯಾಹ್ನ 1.55ರ ವೇಳೆಗೆ ಖಾಲಿ ಮಾಡಿಸಿ ಬಾಂಬ್ ಸ್ಫೋಟ ಅಥವಾ ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಬೆದರಿಕೆ ಇ-ಮೇಲ್ ಮೂಲಕ ಹೈಕೋರ್ಟ್‌ನ ಎಆರಿ್ಜ (ಂಖಉ) ಗೆ ಬಂದ ಹಿನ್ನೆಲೆಯಲ್ಲಿ, ಹೈಕೋರ್ಟ್ ಪೀಠ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಯಿತು.
ಈ ಹಿನ್ನೆಲೆಯಲ್ಲಿ ಮುಂಡಗೋಡ ಜೆಎಂಎಂಸಿ ನ್ಯಾಯಾಲಯಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳವು ನ್ಯಾಯಾಲಯದ ಪ್ರತಿಯೊಂದು ಭಾಗ, ಮೂಲೆಮೂಲೆ ಹಾಗೂ ಹೊರ ಆವರಣದ ಎಲ್ಲಾ ಪ್ರದೇಶಗಳನ್ನು ಸೂಕ್ಷ್ಮವಾಗಿ ಪರೀಶೀಲಿಸಿತು. ಇದೇ ರೀತಿಯಲ್ಲಿ ಜಿಲ್ಲೆಯ ಇತರೆ ನ್ಯಾಯಾಲಯಗಳಲ್ಲಿಯೂ ಪರೀಶೀಲನೆ ನಡೆಸಲಾಯಿತು.
ಈ ವೇಳೆಗೆ ಎ ಆರ್ ಎಸ್ ಐ ಸಂಜಯ ಭೋವಿ, ಎ ಆರ್ ಎಸ್ ಐ ಜಗನ್ನಾಥ ನಾಯ್ಕ್, ಆನಂದ ನಾಯ್ಕ್, ಸಂತೋಷ್ ನಾಯ್ಕ್, ಮಹೇಶ್ ನಾಯ್ಕ್, ಮಾಬ್ಲು ಗೌಡ, ನಿತ್ಯ ಗೌಡ, ಪ್ರಶಾಂತ್ ಮತ್ತು ಡಾಗ್ ಅಣಶಿ ಪರೀಶೀಲನೆ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 