ದಂತ ಚಿಕಿತ್ಸೆ ನಿರ್ಲಕ್ಷಿಸಿದರೆ ಶರೀರ ಕ್ಷೀಣ: ದೊಡಮನಿ

ಲೋಕದರ್ಶನ ವರದಿ

ಧಾರವಾಡ 14 :ಭಾರತ ವಿಕಾಸ ಪರಿಷತ್ ಶಾಲ್ಮಲಾ ಮತ್ತು ಮಲಪ್ರಭಾ ಶಾಖೆಗಳ, ಡಾ. ರಾಮನಗೌಡರ ಆಸ್ಪತ್ರೆ ಮತ್ತು ಡಾ. ದೊಡಮನಿ ಹಲ್ಲಿನ ದವಾಖಾನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಾ ದಂತ ಚಿಕಿತ್ಸೆ ನಿರ್ಲಕ್ಷಿಸಿದರೆ ಶರೀರ ಕ್ಷೀಣ ಎಂದು ಡಾ. ಅವಿನಾಶ ದೊಡಮನಿ ಹೇಳೀದರು.

   ಹುಟ್ಟಿದ 6 ತಿಂಗಳ ನಂತರ ಮಕ್ಕಳಲ್ಲಿ ಹಲ್ಲುಗಳು ಬರಲು ಪ್ರಾರಂಭವಾಗುತ್ತವೆ, 6 ರಿಂದ 7 ನೇ ವರ್ಷಕ್ಕೆ ಈ ಹಲ್ಲುಗಳು ಬಿದ್ದು ಶಾಸ್ವತ ಹಲ್ಲುಗಳು ಬೆಳೆಯುತ್ತವೆ, 12 ರಿಂದ 13 ವರ್ಷಕ್ಕೆ ಬೆಳೆಯುವಾಗ ವಕ್ರದಂತಗಳು, ಅಥವಾ ಹಲ್ಲುಬ್ಬು  ಏನಾದರೂ ಕಂಡು ಬಂದಲ್ಲಿ ಪಾಲಕರು ಮಕ್ಕಳಿಗೆ ಚಿಕಿತ್ಸೆ ನೀಡುವಲ್ಲಿ ಮುಂದಾಗಬೇಕೆಂದರು, ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ನೀಡವುದರಿಂದ ಹಲ್ಲುಗಳು ಸರಿಯಾಗಿ ಬೆಳೆಯಲು ಸಾಧ್ಯ, ದಿನನಿತ್ಯ ಹಲ್ಲುಗಳ ಶುಚಿತ್ವಗೊಳಿಸಲು ಮಕ್ಕಳಿಗೆ ತಿಳಿಸಿ, ಬ್ರಶ್ ಮಾಡುವಾಗ ವೃತ್ತಾಕಾರದಲ್ಲಿ ಬ್ರಶ್ ಮಾಡುವುದು ಉತ್ತಮ, ಹಲ್ಲುಗಳು ಸುರಕ್ಷಿತವಾಗಿದ್ದರೆ ಮಾತ್ರ ಚಯಾ ಪಚನಕ್ರೀಯೆ ಸರಿಯಾಗಿ ಆಗುತ್ತದೆ, ಇದರಿಂದ ಶರೀರ ಸದೃಢವಾಗಲು ಸಾಧ್ಯ. ಹೀಗಾಗಿ ಹಲ್ಲುಗಳ ರಕ್ಷಣೆಗೆ ಆದ್ಯತೆ ನೀಡಿ, 50 ವರ್ಷಕ್ಕೆ ಹಲ್ಲಿನ ಗಟ್ಟಿತನ ಕಡಿಮೆಯಾಗುತ್ತದೆ, ಆದಷ್ಟು ಹಸಿರು ತರಕಾರಿ, ನಯವಾದ ಆಹಾರ ಪದ್ಧತಿ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು. 

     ಡಾ. ವಾಣಿ ರಾಮನಗೌಡರ, ರೋಗಿಗಳ ರಕ್ತದ ಬಡಿತ, ಸಕ್ಕರೆ ಕಾಯಿಲೆ ಪರೀಕ್ಷಿಸಿದರು.  ತುಳಸಿ ಗೌಡನಹಳ್ಳಿ, ತನುಶ್ರೀ ಹೀರೆಮಠ, ನರ್ಮದಾ ಗುರುಕಾಳೆ, ರೇಖಾ ಕಿತ್ತೂರ, ತಬಸ್ಸುಮ ಶೇಖ್, ಈಶ್ವರ ದೊಡಮನಿ, ಸಹಾಯಕರಾಗಿ ಸೇವೆ ಸಲ್ಲಿಸಿದರು.  

   ಜಗದೀಶ ಮಳಗಿ, ಸುನೀತ ಪುರೋಹಿತ, ಇಂದಿರಾ.ಜೆ.ಮಳಗಿ, ಶ್ರೀಲಕ್ಷ್ಮೀ ಘಂಟೆನ್ನವರ, ವೆಂಕಟೇಶ ಶಿವಪೂಜೆ, ಶಿರೀಶ ಮನ್ನೂರಕರ, ಶೈಲಾ ಕರಗುದರಿ, ಸುಮನ ಘಂಟೆನ್ನವರ, ಶಾಲಿನಿ ಶಿವಪೂಜಿ, ಎಮ್. ಸುದರ್ಶನರಾಜ, ವಿಜಯಲಕ್ಷ್ಮಿ ಬಾರೆಕರ, ಸಿ.ಎಮ್. ಹೆಗಡೆ, ಶ್ರೀಧರ ಕುಲಕಣರ್ಿ, ಗಜಾನನ ಪುರೋಹಿತ ಉಪಸ್ಥಿತರಿದ್ದರು.