ರಾಣೆಬೆನ್ನೂರು ಅಂಚೆ ಕಚೇರಿಯಲ್ಲಿ ಕೃಷ್ಣಮೃಗ ಅಭಯಾರಣ್ಯ ಚಿತ್ರ ರದ್ದತಿ ಬಿಡುಗಡೆ
ರಾಣೆಬೆನ್ನೂರು 16 : ನಾಡಿನ ಜಲ ಚರಗಳ ಜೊತೆಗೆ ಅನೇಕ ಪ್ರಾಣಿ ಪಕ್ಷಿಗಳು ನಮ್ಮ ಮಧ್ಯೆ ಪರಿಸರ ಸಹಕಾರಿಯಾಗಿ ತಮ್ಮ ಜೀವನವನ್ನು ಸಾಗಿಸುತ್ತಲಿವೆ ಇಂತಹ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳ ಕುರಿತು ಅರಿವು ಜಾಗೃತಿ ಮೂಡಿಸಬೇಕಾದ ಗುರು ತರ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಬೆಂಗಳೂರು ಡೈರೆಕ್ಟರ್ ಆಫ್ ಪೋಸ್ಟಲ್ ಸರ್ವಿಸಸ್ಸ್ ನ, ಶ್ರೀಮತಿ ವಿ. ತಾರಾ ಹೇಳಿದರು.
ಅವರು, ಇಲ್ಲಿನ ಬಾಪೂಜಿ ವೃತ್ತದಲ್ಲಿರುವ ಪ್ರಧಾನ ಅಂಚೆ, ಭವನದಲ್ಲಿ ಆಯೋಜಿಸಲಾಗಿದ್ದ, ಕೃಷ್ಣಮೃಗ ಅಭಯಾರಣ್ಯದ ಚಿತ್ರ ರದ್ಧತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಚಿತ್ರ ರದ್ದತಿಯಿಂದ ಕೃಷ್ಣಮೃಗ ಅಭಯಾರಣ್ಯ ಪ್ರಪಂಚದಾದ್ಯಂತ ಪ್ರಚಾರ ಹೊಂದಲು ಸಹಾಯಕವಾಗುತ್ತದೆ. ಈ ಕಾರ್ಯಕ್ರಮವನ್ನು, ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಏರಿ್ಡಸಲಾಗಿದ್ದು, ತಮಗೆ ಅತ್ಯಂತ ಸಂತೋಷ ನೀಡಿದೆ ಎಂದರು. ಅಂಚೆ ಅಧೀಕ್ಷಕರಾದ ಮಂಜುನಾಥ ಹುಬ್ಬಳ್ಳಿ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಅದರ ಮಹತ್ವ ಕುರಿತು ಮಾತನಾಡಿದರು. ವೇದಿಕೆಯಲ್ಲಿ ರಾಣೆಬೆನ್ನೂರು ವಲಯ ಅರಣ್ಯಾಧಿಕಾರಿ ಲಿಂಗಾರೆಡ್ಡಿ ಮಂಕಣಿ ಅವರು ಪ್ರಸ್ತುತ ರಾಜ್ಯದಲ್ಲಿ ಕೃಷ್ಣಮೃಗಗಳು ಅಧಿಕ ಪ್ರಮಾಣದಲ್ಲಿ ಅಳಿವಿನಂಚಿಲ್ಲಿ ಕಾಣುತ್ತಿದ್ದೇವೆ ಅಲ್ಲದೆ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯು ಇಲ್ಲಿನ ಅರಣ್ಯದಲ್ಲಿ ಹೊರತುಪಡಿಸಿ ಬೇರೆ ಎಲ್ಲಿ ಕಾಣದಂತಾಗಿದ್ದವು. ಅಂತಹ ಪಕ್ಷಿಗಳು ಕಳೆದ ಐದಾರು ವರ್ಷಗಳಿಂದ ಇಲ್ಲಿನ ಪರಿಸರ ಪ್ರತಿಕೂಲ ವಾತಾವರಣದಿಂದ ವಲಸೆ ಬರುತ್ತಿರುವುದು ಕಾಣದಂತಾಗಿದೆ ಎಂದು ವಿಷಾದಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಣೇಬೆನ್ನೂರು ಅಂಚೆ ಕಚೇರಿಯ ವ್ಯವಸ್ಥಾಪಕರಾದ ಶ್ರೀಮತಿ ವಾಸವಾಂಬ ಅವರು ಮಾತನಾಡಿದರು. ವೇದಿಕೆಯಲ್ಲಿ ಅಂಚೆ ನೀರೀಕ್ಷಕರಾದ ಮಂಜುನಾಥ ದೊಡ್ಡಮನಿ ಮಹಾದೇವ ಕಿತ್ತೂರ ಸೇರಿದಂತೆ ಅಂಚೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.