ಭಾರತೀಯ ಸಂಸ್ಕೃತಿ ಉತ್ಸವ-7 ದೇಶದ ಚಿತ್ರಣವನ್ನು ಬದಲಿಸುವ ಕಾರ್ಯಕ್ರಮ - ಡಿ. ಆರ್. ಪಾಟೀಲ
ಗದಗ 04 : ಮಾಜಿ ಸಂಸದರು ಬಸವರಾಜ ಪಾಟೀಲ ಸೇಡಂ ಹಾಗೂ ಭಾತರ ವಿಕಾಸ ಸಂಗಮದ ಸಂಸ್ಥಾಪಕರಾದ ಕೆ. ಎನ್. ಗೋವಿಂದಾಚಾರ್ಯರರ ನೇತೃತ್ವದಲ್ಲಿ ನಾವು ಏನು ಏನು ಅಭಿವೃದ್ಧಿಯನ್ನು ನಮ್ಮ ನಮ್ಮ ಮಟ್ಟದಲ್ಲಿ ನಮ್ಮ ಸಂಘಟನೆಯಿಂದ ಹಾಗೂ ಗ್ರಾಮದಲ್ಲಿ ಹೇಗೆ ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡಬಹುದು ಎಂದು ಈ ರೀತಿಯ ಭಾರತೀಯ ಸಂಸ್ಕೃತಿ ಉತ್ಸವ ಮಾಡುವ ಮೂಲಕ ಮಾರ್ಗದರ್ಶನ ಮಾಡುತ್ತಿರುವುದು ನಮಗೆ ಹೆಮ್ಮ ಪ್ರೇರಣೆ ಕೊಡುವಂತಹ ಮತ್ತು ಸಂತೋಷದ ವಿಷಯ ಹಾಗೂ ನಾವು ಅವರು ರಾಜಕೀಯವಾಗಿ ಭಿನ್ನಾಭಿಪ್ರಾಯವನ್ನು ಹೊಂದಿದವರು ಆದರು ಕೂಡ ಅವರು ಮಾಡುವ ರಚನ್ಮಾತಕ ಹಾಗೂ ಗ್ರಾಮೀಣಾಭೀವೃದ್ಧಿ ಕಾರ್ಯಕ್ರಗಳನ್ನು ನೋಡಿದ್ದಾಗ ನಮಗೆ ಹೆಮ್ಮ ಆಗುತ್ತದೆ ಈ ಕಾರ್ಯಕ್ರಗಳನ್ನು ನಮ್ಮ ನಮ್ಮ ಮಟ್ಟದಲ್ಲಿ ಮಾಡಿದಲ್ಲಿ ದೇಶ ಬದಲಾವಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ರಾಜಕೀಯದಲ್ಲಿ ಬಸವರಾಜ ಪಾಟೀಲರಂತವರನ್ನು ಮುಂದೆ ತರಲು ಸಮಾಜ ಯಾವಾಗಲೂ ಕಟ್ಟಿಬದ್ಧವಾಗಿರಬೇಕು ಇಲ್ಲವಾದರೇ ಇಂದು ರಾಜಕೀಯ ಪರಿಸ್ಥಿತಿಯಾವ ಮಟ್ಟಿಗೆ ಇದೇ ಎಂದು ನೋಡಿದಿ ಎಂದು ತಿಳಿಸಿ ತೋಂಟದಾರ್ಯ ಮಠದ ಮುಂಭಾಗದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವ-7 ರ ಪ್ರಚಾರ ವಾಹನ ಚಾಲನೆ ಕಾರ್ಯಕ್ರಮದಲ್ಲಿ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಮಾಜಿ ಶಾಸಕರಾದ ಡಿ. ಆರ್. ಪಾಟೀಲರು ಮಾತನಾಡಿದರು ಜೊತೆಗ ಈ ಕಾರ್ಯ ನನಗೆ ಸಂತೋಷವನ್ನು ಉಂಟು ಮಾಡಿದ್ದೆ ಎಂದು ಸಂತಸ ವ್ಯಕ್ತಪಡಿಸಿದರು.ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಮ್, ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿ, ಕಲಬುರಗಿ, ರಾಜೀವ ದಿಕ್ಷೀತ ವಿಚಾರ ವೇದಿಕೆ, ಕರ್ನಾಟಕ ಹಾಗೂ ಉದಾತ್ತ ಜನರು ಹಾಗೂ ಸಂಸ್ಥೆಗಳು ಆಯೋಜಿಸುತ್ತಿರುವ ವೈಶಿಷ್ಟಪೂರ್ಣ ಕಾರ್ಯಕ್ರಮವಾದ ಭಾರತೀಯ ಸಂಸ್ಕೃತಿ ಉತ್ಸವ-7 ಇದು ದಿನಾಂಕ 29 ಜನೇವರಿ 2025 ರಿಂದ 06 ಫೆಬ್ರುವರಿ 2024 ರ ವರಗೆ 9 ದಿನಗಳ ಕಾಲ ಸೇಡಂನ ಬೀರನಹಳ್ಳಿ ಕ್ರಾಸ್ ಬಳಿ ಇರುವ ಪ್ರಕೃತಿ ನಗರದಲ್ಲಿ ಆಯೋಜಿಸಿದ್ದು ಈ ಕಾರ್ಯಕ್ರಮ ಸುಮಾರು 250 ಎಕರೆ ಜಾಗದಲ್ಲಿ, 25 ಲಕ್ಷಕ್ಕೂ ಹೆಚ್ಚು ಜನ ಸೇರಿಸುವ ಹಾಗೂ 9 ವಿಷಯಗಳ ಪ್ರದರ್ಶನ, 90 ವಿಷೇಶ ಚಿಂತನೆಯ ನಾಯಕರ, 9000 ಸ್ವಯಂ ಸೇವಕರ ಪಾಲ್ಗೊಳುವ ಕಾರ್ಯಕ್ರಮ ಇದ್ದಾಗಿದೆ ಹಾಗೂ ಈ ಬಾರಿ 2 ಲಕ್ಷ ಜನರಿಂದ ಮಕ್ಕಳಿಗೆ ಕೈ ತುತ್ತು ಉಣ್ಣಬಡಿಸು ಮೂಲಕ ಗೀನಿಸ್ ರೀಕಾರ್ಡ್ ಮಾಡುವ ಕಾರ್ಯಕ್ರಮ ಇದ್ದಾಗಿದೆ ಎಂದು ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಖಜಾಂಚಿ ಹಾಗೂ ರಾಜ್ಯ ಸಂಚಾಲಕರು ಸಿಎ ಸಿ. ಆರ್. ಢವಳಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಿ. ಮರ್ಚಂಟ್ಸ್ ಅರ್ಬನ್ ಕೋ-ಆಫ್ ಬ್ಯಾಂಕ್ ಲಿ., ಗದಗ ಅಧ್ಯಕ್ಷರಾದ ಸಿಎ ಕೆ. ಎಸ್. ಚೆಟ್ಟಿ, ಜಗದ್ಗುರು ತೋಂಟದಾರ್ಯ ಮಠದ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಪಟ್ಟಣಶೆಟ್ಟಿ, ಗುರಣ್ಣ ಬಳಗಾನೂರ, ವಾಹನ ಚಾಲಕ ದಿ. ರಾಜೀವ ದಿಕ್ಷೀತರವರ ವಾಹನ ಸಾರಥಿ ಮಲ್ಲಾಪೂದ ಶ್ರೀ ನೀಲಪ್ಪಗೌಡ ಮೇ. ದಾನಪ್ಪಗೌಡ್ರ. ಲಿಂಗಾಯತ ಪ್ರಗತೀಶೀಲ ಸಂಘ ಪದಾಧಿಕಾರಿಗಳು ಹಾಗೂ ಸದಸ್ಯರು, ಕರ್ನಾಟಕ ರಾಜ್ಯ ಹಿರಿಯ ನಾಗರೀಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗದಗ ಜಿಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿರು. ಕಾರ್ಯಕ್ರಮವನ್ನು ರಾಜೀವ ದಿಕ್ಷೀತ ವಿಚಾರ ವೇದಿಕೆ ಸದಸ್ಯರಾದ ವಿಶ್ವನಾಥ ಗ. ಶೀರಿ ಕಾರ್ಯಕ್ರಮವನ್ನು ನಿರ್ವಹಿಸಿ ಮಾಡಿದರು.