ಬಳ್ಳಾರಿ: ಕರಿಮಾರೆಮ್ಮ ದೇವಿ ಪೂಜೆ ಜಾತ್ರಾ ಮಹೊತ್ಸವ
ಲೋಕದರ್ಶನ ವರದಿ
ಬಳ್ಳಾರಿ 12: ನಗರದ ಕೌಲ್ಬಜಾರ್ ಪ್ರದೇಶದ ಮೋರಿಗಲ್ಲಿನಲ್ಲಿರುವ ಮಾತೆ ಕರಿಮಾರೆಮ್ಮ ದೇವಿಯ ಪೂಜೆ ಮತ್ತು ವಾಷರ್ಿಕ ಜಾತ್ರಾ ಮಹೋತ್ಸವವ ಕಾರ್ಯಕ್ರಮ ಜರುಗಿಸಿಲಾಯಿತೆಂದು ದೇವಸ್ಥಾನದ ಧರ್ಮಕರ್ತರಾದ ಎ.ಕುಪ್ಪಸ್ವಾಮಿ ತಿಳಿಸಿದರು.
ಶ್ರಾವಣ ಮಾಸದ ಎರಡನೇ ಸೋಮವಾರದಂದು ದೇವಿಗೆ ಅಭಿಷೇಕ, ಪುಷ್ಪಲಂಕಾರ, ಗಣಪತಿ ಹೋಮ, ದುಗರ್ಾ ಹೋಮ, ಕುಂಕಮಾರ್ಚನೆ, ಪೂಣರ್ಾಹುತಿ ಪೂಜೆಯನ್ನು ಅರ್ಚಕರಾದ ಎ.ಪದ್ಮನಾಭಶಾಸ್ತ್ರಿಯವರು ನೆರವೇರಿಸಿದರು. ಈ ಧಾಮರ್ಿಕ ಪೂಜಾ ಕಾರ್ಯ ಕ್ರಮದಲ್ಲಿ ದೇವಿಯ ಹಲವಾರು ಭಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕುಪ್ಪಸ್ವಾಮಿಯವರು ಮಾತನಾಡಿ, ನೂರಾರು ವರ್ಷಗಳ ಹಿಂದೆ ಕರಿ ಮಾರೆಮ್ಮ ಗುಡ್ಡದ ಮೇಲೆ ಉದ್ಭವಿಸಿರುವ ದೇವಿಯನ್ನು ಮೋರಿಗಲ್ಲಿಯಲ್ಲಿ ಪ್ರತಿಷ್ಟಾಪಿಸಿ ಅಂದಿನಿಂದ ಇಂದಿನವರೆಗೂ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಮ್ಮ ವಂಶಸ್ತರು ನಡೆಸುತ್ತಾ ಬಂದಿರುತ್ತಾರೆ. ಅದೇ ರೀತಿಯಲ್ಲಿ ನಾವು ಕೂಡ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ದೇವಿಯ ಕೃಪೆಯಿಂದ ಭಕ್ತರ ಬೇಡಿಕೆಗಳು ನೆರವೇರುತ್ತಿವೆ. ಅದಕ್ಕಾಗಿ ಭಕ್ತರು ಅಗ್ನಿಕುಂಡ ಪ್ರವೇಶ ಮಾಡುತ್ತಾ ತಮ್ಮ ಹರಕೆಯನ್ನು ತೀರಿಸುತ್ತಾರೆ ಎಂದರು.
ಅದೇ ರೀತಿ ಮಂಗಳವಾರದಂದು ಮುಂಜಾನೆ 9 ಗಂಟೆಗೆ ನೂರಾರು ಕಳಸಹೊತ್ತ ಮಹಿಳೆಯರೊಂದಿಗೆ ದೇವಿಯ ಉತ್ಸವ ಮೂತರ್ಿಯನ್ನು ವಿವಿಧ ಹೂವುಗಳ ಅಲಂಕಾರ ದೊಂದಿಗೆ ಉತ್ಸವವನ್ನು ನಡೆಸಲಾಗುವುದು. ಮತ್ತು ಮದ್ಯಾಹ್ನ 12 ಗಂಟೆಯಿಂದ 1 ಗಂಟೆಯ ವರೆಗೆ ಅಗ್ನಿಕುಂಡ ಪ್ರವೇಶ, ಮಹಾ ಮಂಗಳಾರತಿ ಹಾಗೂ ವಿವಿಧ ಪೂಜಾ ವಿಧಿ ವಿಧಾನ ಗಳೊಂದಿಗೆ ಧಾಮರ್ಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ದೇವಸ್ಥಾನದ ಧರ್ಮ ಕರ್ತರು ತಿಳಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 