ಬಳ್ಳಾರಿ: 15 ಬಾಲಕಾರ್ಮಿಕ ಮಕ್ಕಳ ರಕ್ಷಣೆ
ಬಳ್ಳಾರಿ 08: ನಗರದ ಮುಂಡರಗಿ ಪ್ರದೇಶದ ವಿಜಯ ಹನುಮಾನ್ ಕೋಲ್ಡ್ ಸ್ಟೋರೆಜ್ ಹಾಗೂ ಖಾಜಾ ಗರೀಬ್ ಜಿನ್ನಿಂಗ್ನಲ್ಲಿ ದುಡಿಯುತ್ತಿದ್ದ 15 ಜನ ಬಾಲ ಕಾರ್ಮಿಕ ಮಕ್ಕಳನ್ನು ತಹಶೀಲ್ದಾರ್ ಯು.ನಾಗರಾಜ್ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆಯ ಚಂದ್ರಶೇಖರ್ ಐಲಿ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಜಾವೀದ್ ಇನಾಂದರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.
ನಗರದ ಮುಂಡ್ರಿಗಿ ಪ್ರದೇಶದಲ್ಲಿರುವ ವಿಜಯ್ ಹನುಮಾನ್ ಕೋಲ್ಡ್ ಸ್ಟೋರೇಜ್ ಕೈಗಾರಿಕೆಯಲ್ಲಿ 7 ಮಕ್ಕಳು ಹಾಗೂ ಖಾಜಾ ಗರೀಬ್ನ ಮೇಣಸಿನಕಾಯಿ ಘಟಕದಲ್ಲಿ 5 ಜನ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಕಾಮರ್ಿಕ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡ ಜಂಟಿ ಕಾಯರ್ಾಚರಣೆ ನಡೆಸಿ ಬಾಲ ಕಾಮರ್ಿಕರನ್ನು ರಕ್ಷಿಸಿದ್ದಾರೆ.
ಕಾರ್ಯಚರಣೆ ತಂಡದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಜಾವೀದ್ ಇನಾಂದರ್, ಬಾಲಕಾಮರ್ಿಕ ಯೋಜನಾ ನಿರ್ದೇಶಕ ಎ.ಮೌನೇಶ್, ಕಾರ್ಮಿಕ ನಿರೀಕ್ಷಕರಾದ ರವಿದಾಸ್, ರಾಜೇಶ್, ಕ್ಷೇತ್ರಾಧಿಕಾರಿ ಈಶ್ವರಯ್ಯ, ದುರುಗೇಶ್ ಮಾಚನೂರು, ಭೋಜರಾಜು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 