ಬೆಳಗಾವಿ: ಜೈನ ಕಾಲೇಜ್ ವತಿಯಿಂದ ಎನ್ಎಸ್ಎಸ್ ಶಿಬಿರ Belgaum: NSS camp by Jaina College
Lokadrshan Daily
4/12/25, 10:43 PM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಬೆಳಗಾವಿ02: ನಗರದ ಜೆಜಿಐ ಸಂಸ್ಥೆಯ ಜೈನ ಬಿಬಿಎ, ಬಿಸಿಎ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್. ಘಟಕದ ವತಿಯಿಂದ ಇತ್ತೀಚೆಗೆ ಖಾನಾಪೂರ ತಾಲೂಕಿನ ರೂಮೆವಾಡಿ ಗ್ರಾಮದಲ್ಲಿ ಒಂದುವಾರದ ವರೆಗೆ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ವಿದ್ಯಾಥರ್ಿ ಗಳಿಂದ ಗ್ರಾಮದ ಸ್ವಚ್ಛತೆ, ರಸ್ತೆ ಸುಧಾರಣೆ ಮಾಡಲಾಯಿತು. ಗ್ರಾಮದ ಪ್ರಾಥಮಿಕ ಶಾಲೆಯ ಸೌಂದರೀಕರಣ ಹಾಗೂ ಸುಣ್ಣಬಣ್ಣ ಬಳೆಯಲಾಯಿತು. ಒಂದು ದಿನ ಗ್ರಾಮದ ಜನತೆ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಿಗೆ ವೇಣುಗ್ರಾಮ ಆಸ್ಪತ್ರೆಯ ವೈದ್ಯರಿಂದ ವೈದ್ಯಕೀಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸರಿಸೃಪಗಳ ಬಗ್ಗೆ ಮಾಹಿತಿ ನೀಡಲಾಯಿತು. ವಿಶೇಷವಾಗಿ ವಿವಿಧ ಹಾವುಗಳ ಪರಿಚಯ ಹಾಗೂ ವಿಷಕಾರಿ ಹಾವುಗಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಉರಗತಜ್ಞ ಆನಂದ ಚಿಟ್ಟಿ ಮಾಹಿತಿ ನೀಡಿದರು.
ಸಾಮಾಜಿಕ ಕಾರ್ಯ ಕತರ್ೆ ನಾಗರತ್ನ ರಾಮಗೌಡ ಅವರು ಶಿಬಿರಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಚಾರ್ಯ ಸುನಿಲ ದೇಸಾಯಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಎನ್ ಎಸ್. ಎಸ್. ಘಟಕದ ಅಧಿಕಾರಿ ಚಿದಂಬರ ಇನಾಮದಾರ ಶಿಬಿರದ ಉಸ್ತುವಾರಿ ವಹಿಸಿದ್ದರು. ಸಿದ್ಧಾರ್ಥ ಚೌರಿ ಶಿಬರಕ್ಕೆ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ಜೈನ ಕಾಲೇಜಿನ 50 ವಿದ್ಯಾರ್ಥಿಗಳ ಶಿಬಿರದಲ್ಲಿ ಭಾಗವಹಿಸಿದ್ದರು.